ಸುದ್ದಿ ಕನ್ನಡ ವಾರ್ತೆ
ಅಹಿಂದಾ ಹೆಸರು ಹೇಳಿಕೊಂಡು ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಜಿ ಪರಮೇಶ್ವರ್, ಖಗೆ೯ ಅವರನ್ನು ತುಳಿಯುವ ಕೆಲಸ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾದ್ಯಕ್ಷ ಬಿವೈ ವಿಜಯೇಂದ್ರ ಹೇಳಿದರು.

ಅವರು ಗಂಗಾವತಿಯಲ್ಲಿ ಪಕ್ಷದ ಕಾಯ೯ಕ್ರಮ ಮುಗಿಸಿ ಶಿವಮೊಗ್ಗಕ್ಕೆ ಹೋಗುವ ಸಂಧಬ೯ದಲ್ಲಿ ವಿಜಯನಗರ ಜಿಲ್ಲೆಯ ಗಡಿಗ್ರಾಮ ಕಾನಾಮಡುಗು ದಾಸೋಹ ಮಠಕ್ಕೆ ಭಾನುವಾರ ರಾತ್ರಿಭೇಟಿಕೊಟ್ಟು ನಂತರ ಪತ್ರಕತ೯ರೊಂದಿಗೆ ಮಾತನಾಡಿ ಮೈಸೂರಿನಲ್ಲಿ ನಡೆದ ಸಾಧನ ಸಮಾವೇಶವಲ್ಲ ಅವರ ಕುಚಿ೯ ಅಲುಗಾಡುತ್ತಿದ್ದು ಅದನ್ನು ಉಳಿಸಿಕೊಳ್ಳಲು ಸಿದ್ದರಾಮಯ್ಯನವರು ಹೈ ಕಮಾಂಡ್ ಬೆದರಿಸುವ ಸಮಾವೇಶ ಮೈಸೂರಿನಲ್ಲಿ ಮಾಡಿದ್ದಾರೆ ಸಿದ್ದರಾಮಯ್ಯನವರು ಯಾವುದೇ ಹೋರಾಟದ ಹಿನ್ನಲೆಯಿಂದ ಬಂದವರಲ್ಲ ಅವರು ಲಾಟರಿ ಮೂಲಕ ಮುಖ್ಯಮಂತ್ರಿಯಾದವರು ಎಂದು ಸ್ವ ಪಕ್ಷದ ಬಿಆರ್ ಪಾಟೇಲ್ ಅವರೇ ಹೇಳುತ್ತಿದ್ದಾರೆ ಕಳೆದ ಎರಡು ವಷ೯ದಲ್ಲಿ ಯಾವುದೇ ಅಭಿವೃದ್ದಿ ಕೆಲಸ ಮಾಡಿಲ್ಲ ಎಂದು ಕಿಡಿಕಾರಿದರು.

ಹಾಗೂ ಇಂದು ನಾನು ಶರಣಬಸವೇಶ್ವರ ದಾಸೊಹ ಮಠಕ್ಕೆ ಭೆಟಿ ಕೊಟ್ಟಿದ್ದು ತುಂಬಾ ಸಂತೋಷ ತಂದಿದೆ ದಾಸೋಹ ಮಠ ಉತ್ತರ ಕನಾ೯ಟಕದ ಹೆಬ್ಬಾಗಿಲ್ಲಿದ್ದು ನೂರಾರು ವಷ೯ಗಳಿಂದ ಅನ್ನ ದಾಸೋಹದ ಜೊತೆಗೆ ಅಕ್ಷರ ದಾಸೋಹ ಉಣಬಡಿಸುವ ಮಠ ಇದಾಗಿದೆ ಮಠದ ಅಭಿವೃದ್ದಿ ಸೇರಿದಂತೆ ದಾಸೋಹದ ಮಠದ ಜೊತೆಗೆ ಸದಾಕಾಲವೂ ಜೊತೆಗೆರುತ್ತೇವೆ ಎಂದರು ಇದೇ ಸಂಧಬ೯ದಲ್ಲಿ, ಮಾಜಿ ಸಚಿವ ಶ್ರೀರಾಮುಲು ,ದಾಸೋಹ ಮಠದ ಐಮಡಿ ಶರಣಾಯ೯ರು ಹಾಗೂ ಮಠದ ಭಕ್ತರು ಬಿಜೆಪಿ ಮುಖಂಡರು ಗ್ರಾಮಸ್ಥರು ಸೇರಿದಂತೆ ಇತರರಿದ್ದರು.