ಸುದ್ಧಿಕನ್ನಡ ವಾರ್ತೆ
ಯಲ್ಲಾಪುರ: ರಾಷ್ಟ್ರಕ್ಷೇಮವನ್ನು ಸಂಕಲ್ಪಿಸಿ ರಾಷ್ಟ್ರ ಕಲ್ಯಾಣದ ಸಂಕಲ್ಪವನ್ನಿಟ್ಟುಕೊಂಡು ಶ್ರೀ ಮಂಜುನಾಥ ಭಟ್ ರವರ ಆರ್ಷವಿದ್ಯಾ ಟ್ರಸ್ಟ (ರಿ) ವತಿಯಿಂದ ಆಯುಷ್ಮಾನ್ ಭವ ವಿಜಯೀ ಭವ ಬಳಗದ 324ನೇ ಅನುಷ್ಠಾನ ಯಲ್ಲಾಪುರ ತಾಲೂಕು ನಂದೊಳ್ಳಿ ಬೆಳಕಂಡದ ಶ್ರೀಮತಿ ಪ್ರಭಾ ಪ್ರಕಾಶ ಭಾಗ್ವತ್ ಇವರ ಮನೆಯಲ್ಲಿ ನೆರವೇರಿತು.
ಪ್ರದಿಪ್ ಪ್ರಕಾಶ ಭಾಗ್ವತ್ ಇವರ ಯಜಮಾನಿಕೆಯಲ್ಲಿ 12 ವೈದಿಕರೊಂದಿಗೆ ಗಾಯತ್ರೀ ಹವನ,ಮಹಾಗಣಪತಿ ಮೂಲಮಂತ್ರ ಹವನ, ರಾಮತಾರಕ ಜಪಾನುಷ್ಠಾನಗಳು ನೆರವೇರಿದವು.
ಭಾರತಮಾತ್ರಷ್ಟಕಮ್ ಸ್ತೋತ್ರ ಪಠಣದೊಂದಿಗೆ ಅನುಷ್ಠಾನ ಸಂಪನ್ನಗೊಂಡಿತು. ಈ ರಾಷ್ಟ್ರ ಕಲ್ಯಾಣ ಜಕಾರ್ಯಕ್ರಮದಲ್ಲಿ ಶ್ರೀಮತಿ ಪ್ರಭಾ ಪ್ರಕಾಶ ಭಾಗ್ವತ್ ರವರ ಕುಟುಂಬ ಹಾಗೂ ಬಂಧು ಬಳಗ ಈ ಸೇವಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.