ಸುದ್ಧಿಕನ್ನಡ ವಾರ್ತೆ
ಯಲ್ಲಾಪುರ: ಶಿರಸಿಯ ಎಂಇಎಸ್, ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಬಿ ಎಸ್ ಸಿ ವಿದ್ಯಾರ್ಥಿ ಪವನ್ ತಿಮ್ಮಣ್ಣ ಗಾಂವಕರ್ ದೇಶದ ಪ್ರತಿಷ್ಠಿತ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಎಂ ಎಸ್ ಸಿ ಪದವಿಗಾಗಿ ನಡೆಸುವ ಜಾಮ್ ಪರೀಕ್ಷೆಯ ಭೌತಶಾಸ್ತ್ರ ವಿಷಯದಲ್ಲಿ 725 ನೆಯ ಆಲ್ ಇಂಡಿಯಾ ರ್ಯಾಂಕ್ ಪಡೆದು ಮಹಾವಿದ್ಯಾಲಯಕ್ಕೆ ಕೀರ್ತಿ ತಂದಿದ್ದಾನೆ.

ಈ ರ್ಯಾಕಿಂಗ್ ಆಧಾರಿತವಾಗಿ ಐಐಟಿ ಹೈದರಾಬಾದ್ ನಲ್ಲಿ ಬೌತಶಾಸ್ತ್ರ ಎಂ ಎಸ್ ಸಿ ಪದವಿಗೆ ಪ್ರವೇಶ ಪಡೆದುಕೊಂಡಿದ್ದಾನೆ.

ಪವನ್ ಗಾಂವಕರ್ ಇವನು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕಲ್ಲಾಳ ದೋಣಿಗದ್ದೆಯ ತಿಮ್ಮಣ್ಣ ರಾಮಕೃಷ್ಣ ಗಾಂವಕರ್ ಹಾಗೂ ಸೀತಾ ತಿಮ್ಮಣ್ಣ ಗಾಂವಕರ್ ದಂಪತಿಗಳ ಪುತ್ರನಾಗಿದ್ದಾನೆ.

ಈತನ ಸಾಧನೆಗೆ ಎಂಇಎಸ್ ಅಧ್ಯಕ್ಷರಾದ ಜಿ ಎ ಹೆಗಡೆ, ಉಪಸಮಿತಿಯ ಅಧ್ಯಕ್ಷರಾದ ಎಸ್ ಕೆ ಭಾಗವತ, ಹಾಗೂ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪೆÇ್ರ. ಜಿ ಟಿ ಭಟ್ ರವರು ಅಭಿನಂದನೆ ಸಲ್ಲಿಸಿದ್ದಾರೆ. ಉತ್ತರಕನ್ನಡ ಜಿಲ್ಕೆಯಾದ್ಯಂತ ಈತನ ಸಾಧನೆಗೆ ಪ್ರಶಂಸೆ ವ್ಯಕ್ತವಾಗುತ್ತಿದೆ.

ಪವನ್ ಗಾಂವಕರ್ ಈತನ ಸಾಧನೆಗೆ ಸುದ್ಧಿಕನ್ನಡ ವಾಹಿನಿ ಬಳಗ ಅಭಿನಂದನೆ ಸಲ್ಲಿಸುತ್ತದೆ.