ಸುದ್ಧಿಕನ್ನಡ ವಾರ್ತೆ
ಮುದ್ದೇಬಿಹಾಳ: ಬಾಗಲಕೋಟ ಜಿಲ್ಲೆ ಇಳಕಲ್ ತಾಲೂಕಿನ ಚಟ್ನಿಹಾಳ ಗ್ರಾಮದ ಯುವತಿ ಬಾಲವ್ವ ಕಮರಿ ವಿಜಯಪುರ-ಬಾಗಲಕೋಟ ಜಿಲ್ಲಾ ಗಡಿಯಲ್ಲಿರುವ ಮುದ್ದೇಬಿಹಾಳ ತಾಲೂಕಿನ ಕೃಷ್ಣಾ ನದಿಗೆ ಸೇತುವೆ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದ್ದು ಆಕೆಯ ಶವಕ್ಕಾಗಿ ಪೊಲೀಸರು, ಅಗ್ನಿಶಾಮಕ ದಳದ ತಂಡ ನುರಿತ ಈಜುಗಾರರೊಂದಿಗೆ ಪ್ರಯತ್ನ ಮುಂದುವರೆಸಿದ್ದಾರೆ.
ಸಪ್ಟೆಂಬರ್ 14 ರಂದೇ ಯುವತಿ ನದಿಗೆ ಹಾರಿದ್ದಾಳೆ ಎಂದು ಮೂಲಗಳು ತಿಳಿಸಿವೆ. ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.