ಸುದ್ದಿ ಕನ್ನಡ ವಾರ್ತೆ
ಭಟ್ಕಳ ನಗರವನ್ನು ೨೪ ಗಂಟೆಯೊಳಗೆ ಬಾಂಬ್ ಹಾಕಿ ಸ್ಪೋಟಿಸುತ್ತೇವೆ ಎಂಬ ಈ ಮೇಲ್ ಬೆದರಿಕೆ ಸಂದೇಶವೊAದು ಬಂದಿದ್ದು ಈ ಹಿನ್ನೇಲೆಯಲ್ಲಿ ಎಚ್ಚೆತುಕೊಂಡ ಪೊಲೀಸ್ ಇಲಾಖೆ ಶುಕ್ರವಾರ ಭಟ್ಕಳದ್ಯಾದಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿ ಅನಾಮಿಕ ವ್ಯಕ್ತಿಗಳ ಹುಡುಕಾಟಕ್ಕೆ ತೀವ್ರ ತಪಾಸಣೆಯನ್ನು ನಡೆಸುತ್ತಿದೆ.
ಜುಲೈ ೧೦ರಂದು ಬೆಳಿಗ್ಗೆ ೧೦.೩೦ಕ್ಕೆ ನಗರ ಪೊಲೀಸ್ ಠಾಣೆಯ ಮೇಲ್ ಐಡಿಗೆ ಈಮೇಲ್ ಬಂದಿದ್ದು ಕಣ್ಣನ್ ಗುರುಸ್ವಾಮಿ ಎಂಬ ಹೆಸರಿನ ವ್ಯಕ್ತಿಯ ಮೇಲ್ ಐಡಿಯಿಂದ ಮೇಲ್ ಕಳುಹಿಸಲಾಗಿದೆ ಎನ್ನಲಾಗಿದೆ. ಭಟ್ಕಳ ನಗರದ್ಯಾದಂತ ಸ್ಪೋಟ ಸಂಭವಿಸುತ್ತದೆ ಮತ್ತು ಭಟ್ಕಳ ನಾಶವಾಗುತ್ತದೆ ಎಂಬ ಸಂದೇಶ ರವಾನಿಸಲಾಗಿತ್ತು ಎನ್ನಲಾಗಿದೆ. ಈ ವಿಷಯವನ್ನು ಹೊರಗಡೆವಿದರೆ ಜನತೆ ತೀವ್ರ ಚಿಂತೆಗೀಡಾಗಬಹುದು ಎಂದು ಇಲಾಖೆ ಮಾಹಿತಯನ್ನು ಗೌಪ್ಯವಾಗಿಟ್ಟಿತ್ತು ಎಂದು ತಿಳಿದು ಬಂದಿದೆ.
. ಈ ಸಂದೇಶವನ್ನು ಗಂಭಿರವಾಗಿ ಪರಿಗಣಿಸಿದ ಪೊಲೀಸ್ ಇಲಾಖೆ ಗುರುವಾರ ಜಿಲ್ಲಾ ಬಾಂಬ್ ನಿಷ್ಕ್ರೀಯ ದಳವನ್ನು ಭಟ್ಕಳಕ್ಕೆ ಕರೆಯಿಸಿ ತಪಾಷಣೆ ನಡೆಸಿತ್ತು. ಶುಕ್ರವಾರ ಮುಸ್ಲಿಂರ ನಮಾಜ ಸಮಯದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸಾರ್ವಜನಿಕ ಸ್ಥಳದಲ್ಲಿ ಬಿಗಿ ತಪಾಸಣೆ ನಡೆಸಿದ ತಂಡ ಮುರುಡೇಶ್ವರ ಪ್ರವಾಸಿ ತಾಣ ಸೇರಿದಂತೆ ಜನನೀಬಿಡ ಪ್ರದೇಶದಲ್ಲಿ ಹದ್ದೀನ ಕಣ್ಣು ಇರಿಸಿತ್ತು. ಇದೊಂದು ಹುಸಿ ಕರೆಯ ರೀತಿ ಅನಿಸುತ್ತಿದ್ದು, ಈ ಮೇಲ್ ಕಳುಹಿಸಿದವರ ಹುಡುಕಾಟಕ್ಕಾಗಿ ಎರಡು ಪ್ರತ್ಯೇಕ ತಂಡ ರಚಿಸಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸ್ ಇಲಾಖೆಯ ಮೂಲಗಳು ತಿಳಿಸಿದ್ದು ಈಮೇಲ್ ಕಳುಹಿಸಿದ ವ್ಯಕ್ತಿಯು ಪತ್ತೆಯಾದಲ್ಲಿ ಯಾಕಾಗಿ ಕಳುಹಿಸಿದ್ದಾನೆ, ನಿಜವಾಗಿಯೂ ಈತ ಭಯೋತ್ಪದಕ ಕೃತ್ಯ ಎಸಗುವ ವ್ಯಕ್ತಿಗಳ ತಂಡದಲ್ಲಿದ್ದಾನೆಯೇ, ಹುಸಿ ಬೆದರಿಕೆ ಹಾಕಿದ್ದಾನೆಯೇ ಎನ್ನುವುದು ತಿಳಿದು ಬರಲಿದೆ.