ಸುದ್ಧಿಕನ್ನಡ ವಾರ್ತೆ
ಕರ್ನಾಟಕದಿಂದ ಗೋವಾ ಪ್ರವೇಶಿಸುವ ವಾಹನಗಳ ತಪಾಸಣೆಯನ್ನು ಈಗ ಗಡಿಗಳಲ್ಲಿ ಡ್ಯಾಶ್ ಬೋರ್ಡ್ ಕ್ಯಾಮೆರಾಗಳ (Dash board camera) ಮೂಲಕ ಸ್ವಯಂಚಾಲಿತವಾಗಿ ಮಾಡಲಾಗುತ್ತದೆ ಮತ್ತು ಟ್ರಾಫಿಕ್ ನಿಯಮಗಳ ಯಾವುದೇ ಉಲ್ಲಂಘನೆ ಕಂಡುಬಂದರೆ, ‘ವಾಹನ್ ಅಪ್ಲಿಕೇಶನ್’ Vahan App ನಿಂದ ನೇರವಾಗಿ ವಾಹನಗಳ ಮಾಲೀಕರ ಮೊಬೈಲ್ ಗೆ ಚಲನ್ ನೀಡಲಾಗುತ್ತದೆ. ಗೋವಾ ಪ್ರವೇಶಿಸುವ ರಾಜ್ಯದ ಹೊರಗಿನ ವಾಹನಗಳ ದಾಖಲೆಗಳ ಪರಿಶೀಲನೆ ಈಗ ವೇಗವಾಗಿ ಮತ್ತು ಸ್ವಯಂಚಾಲಿತವಾಗಿರಲಿದೆ.
ಹೊಸ ವ್ಯವಸ್ಥೆಯ ತಂತ್ರಜ್ಞಾನ
‘ಗೋವಾ ವಾಹನ ದೃಢೀಕರಣ ವ್ಯವಸ್ಥೆ’ (GOVA) ರಾಜ್ಯದ ಗಡಿಗಳಲ್ಲಿ ಸ್ಥಾಪಿಸಲಾದ ಡ್ಯಾಶ್ ಬೋರ್ಡ್ ಕ್ಯಾಮೆರಾಗಳ (Dash board camera) ಮೂಲಕ ವಾಹನಗಳ ನೋಂದಣಿ ಪ್ರಮಾಣಪತ್ರ, ವಿಮೆ ಮತ್ತು ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರವನ್ನು ನೇರವಾಗಿ ನಂಬರ್ ಪ್ಲೇಟ್‍ನಿಂದ ಸ್ಕ್ಯಾನ್ ಮಾಡುತ್ತದೆ.ಇದರಿಂದಾಗಿ ಇಂತಹ ಉಲ್ಲಂಘನೆಯಾದರೂ ಕೂಡ ನೇರವಾಗಿ ಚನಲ್ ನೀಡಲಾಗುತ್ತದೆ.
ವ್ಯವಸ್ಥೆಯ ವ್ಯಾಪ್ತಿ
ಸಚಿವ ಸಂಪುಟವು ಜಿಒವಿಎ ವ್ಯವಸ್ಥೆಯನ್ನು ಅನುಮೋದಿಸಿದೆ ಮತ್ತು ಮೊದಲ ಹಂತದಲ್ಲಿ, ಗೋವಾದ ನಾಲ್ಕು ಪ್ರಮುಖ ಗಡಿ ಪೆÇೀಸ್ಟ್‍ಗಳಲ್ಲಿ – ಪತ್ರಾದೇವಿ, ಮೋಲೆಮ್, ಪೆÇೀಲೆಮ್ ಮತ್ತು ಕೇರಿ (ಸತ್ತರಿ) ನಲ್ಲಿ ಗೋವಾದ ಗಡಿಗಳಲ್ಲಿ ತಲಾ ನಾಲ್ಲಕರಂತೆ ಒಟ್ಟು 16 ಕ್ಯಾಮೆರಾಗಳನ್ನು ಸ್ಥಾಪಿಸಲಾಗಿದೆ.
ತಪಾಸಣೆ ಪ್ರಕ್ರಿಯೆ ಹೀಗಿರಲಿದೆ…
ಯಾವುದೇ ವಾಹನವು ಗೋವಾ ಗಡಿಯನ್ನು ಪ್ರವೇಶಿಸಿದ ತಕ್ಷಣ, ವಾಹನದ ನಂಬರ್ ಪ್ಲೇಟ್ ಅನ್ನು ಸ್ಕ್ಯಾನ್ ಮಾಡಲಾಗುತ್ತದೆ ಮತ್ತು ಅದನ್ನು ಆರ್ ಸಿ, ವಿಮೆ ಮತ್ತು ಪಿಯುಸಿ ಸಂಬಂಧಿತ ಡೇಟಾಬೇಸ್ ನೊಂದಿಗೆ ಲಿಂಕ್ ಮಾಡುವ ಮೂಲಕ ತಕ್ಷಣವೇ ಪರಿಶೀಲಿಸಲಾಗುತ್ತದೆ. ಎಲ್ಲಾ ದಾಖಲೆಗಳು ಮಾನ್ಯವಾಗಿದ್ದರೆ, ವಾಹನವನ್ನು ನೇರವಾಗಿ ಗೋವಾಕ್ಕೆ ಪ್ರವೇಶಿಸಲು ಅನುಮತಿಸಲಾಗುತ್ತದೆ. ಈ ತಪಾಸಣೆಯನ್ನು ಚೆಕ್ ಪೆÇೀಸ್ಟ್‍ನಲ್ಲಿ ಮಾತ್ರ ಮಾಡಲಾಗುವುದರಿಂದ, ಇದರ ನಂತರ, ಪೆÇಲೀಸರು ದಾಖಲೆಗಳನ್ನು ಪರಿಶೀಲಿಸಲು ರಸ್ತೆಯಲ್ಲಿ ಎಲ್ಲಿಯೂ ವಾಹನವನ್ನು ನಿಲ್ಲಿಸಬೇಕಾಗಿಲ್ಲ.
ಪ್ರವಾಸಿಗರಿಗೆ ಟ್ರಾಫಿಕ್ ಪೋಲಿಸರಿಂದ ಉಂಟಾಗುವ ತೊಂದರೆ ತಪ್ಪಲಿದೆ…
ಹೊರ ರಾಜ್ಯದಿಂದ ಗೋವಾಕ್ಕೆ ಬರುವ ಪ್ರವಾಸಿಗರ ವಾಹನಗಳನ್ನು ಆಗಾಗ್ಗೆ ನಿಲ್ಲಿಸಿ ಪರಿಶೀಲಿಸುವುದು ಪ್ರಯಾಣಿಕರಲ್ಲಿ ಅಸಮಾಧಾನವನ್ನು ಉಂಟುಮಾಡಿತ್ತು. ಈ ಹಿನ್ನೆಲೆಯಲ್ಲಿ, ಶಾಸಕ ಮೈಕೆಲ್ ಲೋಬೊ ಸೇರಿದಂತೆ ಕೆಲವು ಶಾಸಕರು ಗೋವಾದಲ್ಲಿ ವಾಹನಗಳನ್ನು ಒಮ್ಮೆ ಮಾತ್ರ ಪರಿಶೀಲಿಸಬೇಕು ಮತ್ತು ನಂತರ ಮುಂದೆ ಹೋಗಲು ಅನುಮತಿಸಬೇಕು ಎಂದು ಒತ್ತಾಯಿಸಿದ್ದರು. ಪೆÇಲೀಸ್ ಮಹಾನಿರ್ದೇಶಕರೊಂದಿಗಿನ ಸಭೆಯ ನಂತರ ಈ ಬೇಡಿಕೆಯನ್ನು ಅಂಗೀಕರಿಸಲಾಗಿದೆ.
ಪ್ರಸ್ತುತ ಸ್ಥಿತಿ
ಈ ವ್ಯವಸ್ಥೆಯನ್ನು ಪ್ರಸ್ತುತ ಪ್ರಾಯೋಗಿಕ ಆಧಾರದ ಮೇಲೆ ಗೋವಾ ರಾಜ್ಯದ ಗಡಿಯಲ್ಲಿ ಜಾರಿಗೆ ತರಲಾಗುತ್ತಿದೆ ಮತ್ತು ವ್ಯವಸ್ಥೆಯಲ್ಲಿ ಯಾವುದೇ ದೋಷ ಕಂಡುಬಂದಿಲ್ಲವಾದರೆ, ಈ ವ್ಯವಸ್ಥೆಯನ್ನು ಶಾಶ್ವತವಾಗಿ ಜಾರಿಗೆ ತರಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಈ ತಪಾಸಣೆಯು ಗೋವಾ ಪ್ರವೇಶಿಸುವ ಎಲ್ಲಾ ವಾಹನಗಳ ದಾಖಲೆಗಳು ಮಾನ್ಯವಾಗಿವೆ ಎಂದು ಖಚಿತಪಡಿಸುತ್ತದೆ.