ಸುದ್ಧಿಕನ್ನಡ ವಾರ್ತೆ
ಗೋವಾ ವಿಶ್ವವಿದ್ಯಾಲಯದಲ್ಲಿ (Goa University) ಕಳವಳಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಫ್ಯಾಶನ್ ಶೋ ನಲ್ಲಿ ವಿದ್ಯಾರ್ಥಿನಿಗಳು ಒಳ ಉಡುಪಿನಲ್ಲಿ ಪರೇಡ್ ನಡೆಸಿದ ಘಟನೆ ನಡೆದಿದೆ. ಈ ಕುರಿತು ಗೋವಾ ಮಾನವ ಹಕ್ಕು ಆಯೋಗ (Human Rights Commission)ಇದನ್ನು ಗಂಭೀರವಾಗಿ ಪರಿಗಣಿಸಿ ಆಯೋಗವು ವಿಶ್ವವಿದ್ಯಾಲಕ್ಕೆ ನೋಟಿಸ್ ಜಾರಿಗೊಳಿಸಿದೆ.
ಗೋವಾ ವಿಶ್ವವಿದ್ಯಾಲಯದಲ್ಲಿ ಕಳೆದ ಸುಮಾರು ನಾಲ್ಕು ತಿಂಗಳ ಹಿಂದೆ “ಫ್ರಾಲಿಕ್” ಎಂಬ ಸಾಂಸ್ಕøತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವೇದಿಕೆಯ ಮೇಲೆ ಒಳ ಉಡುಪಿನಲ್ಲಿ (underwear)ವಾಕ್ ಮಾಡಿದ್ದಾರೆ. ವಿಶ್ವವಿದ್ಯಾಲಯದ ಶಿಸ್ತುಪಾಲನಾ ಸಮೀತಿಯು ಈ ಪ್ರಕರಣವನ್ನು ಗಂಭೀರವಾಗಿ ದಾಖಲಿಸಿಕೊಂಡು ತನಿಖೆ ಆರಂಭಿಸಿದೆ.
ವಿಶ್ವವಿದ್ಯಾಲಯದ ಶಿಸ್ತು ಪಾಲನಾ ಸಮೀತಿಯ ಅಹವಾಲು ಬರುವ ಸೋಮವಾರದ ವರೆಗೆ ಬರುವ ಸಾಧ್ಯತೆಯಿದ್ದು, ಈ ಅಹವಾಲನ್ನು ಕಾರ್ಯಕಾರಿ ಮಂಡಳಿಯ ಎದುರು ಮಂಡಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಇದೀಗ ಈ ಪ್ರಕರಣವನ್ನು ಗೋವಾ ಮಾನವಹಕ್ಕುಗಳ ಆಯೋಗವು ದಾಖಲಿಸಿಕೊಂಡಿದ್ದು ವಿಶ್ವವಿದ್ಯಾಲಯಕ್ಕೆ ನೇರವಾಗಿ ನೋಟಿಸ್ ಜಾರಿಗೊಳಿಸಿದೆ. ಕುಲಪತಿಗಳು ಜುಲೈ 23 ರ ಒಳಗೆ ಆಯೋಗದ ಎದುರು ಸವಿಸ್ತಾರ ವಿವರವನ್ನು ಮಂಡಿಸಬೇಕಿದೆ.
ಕಳೆದ ಸುಮಾರು ನಾಲ್ಕು ತಿಂಗಳ ಹಿಂದೆ ಗೋವಾ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ನಡೆದ ಘಟನೆಯ ಕುರಿತಂತೆ ಜನತೆಯಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಇದೀಗ ಮಾನವಹಕ್ಕುಗಳ ಆಯೋಗವು ಇದನ್ನು ಗಂಭೀರವಾಗಿ ಪರಿಗಣಿಸಿ ನೋಟಿಸ್ ಜಾರಿಗೊಳಿಸಿದೆ.