ಸುದ್ಧಿಕನ್ನಡ ವಾರ್ತೆ
ಪೋಲಿಸ್ ಕಾನ್ ಸ್ಟೇಬಲ್ ಪ್ರಿಯಕರನೊಂದಿಗಿನ ಅಶ್ಲೀಲ ಡಾನ್ಸ ವೀಡಿಯೊವನ್ನು ಗಂಡನಿಗೆ ಕಳುಹಿಸಿದ್ದರಿಂದ ಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹರಿಯಾಣದಲ್ಲಿ ನಡೆದಿದೆ. ಹರಿಯಾಣ ಪೋಲಿಸರು ಈ ಪ್ರಕರಣದಲ್ಲಿ ಪತ್ನಿ ದಿವ್ಯಾ ಹಾಗೂ ಪ್ರಿಯಕರ ದೀಪಕ್ ನನ್ನು ಗೋವಾದಲ್ಲಿ ಬುಧವಾರ ಬಂಧಿಸಿದ್ದಾರೆ. ಈ ಇಬ್ಬರೂ ಗೋವಾದ ಹಣಜುಣದಲ್ಲಿ ಅಡಗಿ ಕುಳಿತಿದ್ದರು.

ಬಂಧಿತರ ಹೆಸರು ದಿವ್ಯಾ (27,ಹರಿಯಾಣ), ದೀಪಕ್ (35,ಮಹಾರಾಷ್ಟ್ರ) ಎಂದು ಗುರುತಿಸಲಾಗಿದೆ. ಬಂಧಿತ ಪ್ರಿಯಕರ ದೀಪಕ್ ಪೋಲಿಸ್ ಕಾನ್ ಸ್ಟೇಬಲ್ ಆಗಿದ್ದಾನೆ. ಇಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಕಳೆದ ಕೆಲ ದಿನಗಳ ಹಿಂದೆ ದಿವ್ಯಾ ಮತ್ತು ದೀಪಕ್ ಇವರ ಅಶ್ಲೀಲ ಡಾನ್ಸ ವೀಡಿಯೊವನ್ನು ಗಂಡನಿಗೆ ಕಳುಹಿಸಿದ್ದರು. ನಂತರ ಕೆಲವೇ ಹೊತ್ತಿನಲ್ಲಿ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಹರಿಯಾಣ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.

ಈ ಇಬ್ಬರೂ ಪ್ರೇಮಿಗಳು ಗೋವಾಕ್ಕೆ ಬಂದು ಅಡಗಿ ಕುಳಿತಿರುವುದಾಗಿ ಹರಿಯಾಣ ಪೋಲಿಸರಿಗೆ ಮಾಹಿತಿ ಲಭ್ಯವಾಗಿತ್ತು. ಗೋವಾ ಪೋಲಿಸರು ಮತ್ತು ಹರಿಯಾಣ ಪೋಲಿಸರು ಕಾರ್ಯಾಚರಣೆ ನಡೆಸಿ ಗೋವಾದ ಹಣಜುಣದಲ್ಲಿ ಅಡಗಿ ಕುಳಿತಿದ್ದ ಈ ಪ್ರೇಮಿಗಳನ್ನು ಬಂಧಿಸಿದ್ದಾರೆ. ದಿವ್ಯಾ ಇವಳು ತನ್ನ ಗಂಡನಾದ ಮಗನ್ ಎಂಬುವನಿಗೆ ಮಾನಸಿಕ ಹಾಗೂ ಭಾವನೆಗೆ ಧಕ್ಕೆ ಉಂಟು ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದ್ದಾಳೆ ಎಂಬುದು ಅವರ ಮನೆಯವರ ಆರೋಪವಾಗಿದೆ.

ಪತ್ನಿ ದಿವ್ಯಾ ಇವಳು ಪ್ರಿಯಕರ ದೀಪಕ್ ನೊಂದಿಗೆ ಹೋಟೆಲ್ ನಲ್ಲಿ ಅಶ್ಲೀಲ ವೀಡಿಯೊ ಚಿತ್ರೀಕರಿಸಿ ಅದನ್ನು ತನ್ನ ಗಂಡನಿಗೆ ಕಳುಹಿಸಿಕೊಟ್ಟಿದ್ದಾಳೆ. ತನ್ನ ಪತ್ನಿ ಹಾಗೂ ಆಕೆಯ ಪ್ರಿಯಕರನ ಈ ವೀಡಿಯೊ ಕಂಡು ಪತಿ ಮಗನ್ ಮಾನಸಿಕವಾಗಿ ಅಸ್ವಸ್ಥಗೊಂಡು ಆತ್ಮಹತ್ಯೆ ಮಾಡಿಕೊಂಡ, ಈ ಕುರಿತ ವೀಡಿಯೊ ಹೇಳಿಕೆ ನೀಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.