ಸುದ್ಧಿಕನ್ನಡ ವಾರ್ತೆ
ನಾಯಿಗಳು (Dogs)ನಿಯತ್ತಿಗೆ ಹೆಸರಾಗಿದ್ದರೂ ಕೂಡ ಕೆಲ ನಾಯಿಗಳು ಕ್ರೂರತೆಯಲ್ಲಿಯೂ ಅಷ್ಟೇ ಹೆಸರಾಗಿವೆ. ಇಂತಹ ನಾಯಿಗಳನ್ನು ಸಾಕುವುದರಿಂದ ಒಂದಲ್ಲಾ ಒಂದು ದಿನ ಮನೆಯ ಯಜಮಾನನಿಗೆ ಅಥವಾ ನೆರೆಹೊರೆಯವರಿಗೆ ಮಾರಕವಾಗಬಹುದು. ಹೌದು… ಇಂತಹ ಕ್ರೂರ ನಾಯಿತಳಿಗಳಿಂದಾಗಿ ಮಕ್ಕಳ ಮೇಲೆ ಧಾಳಿ ಘಟನೆಗಳನ್ನು ನಾವು ಕೇಳಿದ್ದೇವೆ. ಇಂತಹ ಕ್ರೂರ ನಾಯಿತಳಿಗಳನ್ನು ಸಂಪೂರ್ಣವಾಗಿ ನಿಷೇಧಿಸಲು ಗೋವಾ ಸರ್ಕಾರ ಮುಂದಾಗಿದೆ.

ಹೌದು… ಗೋವಾದಲ್ಲಿ ರೋಟವಿಲರ್ ಮತ್ತು ಪಿಟ್ ಬುಲ್ (Rottweiler and Pit Bull) ನಂತರ ಕ್ರೂರ ನಾಯಿಗಳ ತಳಿಗಳನ್ನು ನಿಷೇಧಕ್ಕೆ (Prohibition)ಗೋವಾ ರಾಜ್ಯ ಸರ್ಕಾರ ಮುಂದಾಗಿದೆ. ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ಈ ಕುರಿತ ತಿದ್ಧುಪಡಿ ಮಸೂದೆಯನ್ನು ಮಂಡಿಸಲು ಸರ್ಕಾರ ಸಿದ್ಧತೆ ನಡೆಸಿದೆ.
ರೋಟವಿಲರ್ ಮತ್ತು ಪಿಟ್ ಬುಲ್ ನಂತಹ ನಾಯಿ ತಳಿಗಳು ಮಕ್ಕಳು ಮತ್ತು ಇತರರ ಮೇಲೆ ಧಾಳಿ ಮಾಡಿರುವ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂತಹ ಕ್ರೂರ ನಾಯಿತಳಿಗಳನ್ನು (Cruel dog) ನಿಷೇಧಿಸಲು ಗೋವಾ ಸರ್ಕಾರ ಮುಂದಾಗಿದೆ.

ಮುಂಬರುವ ಗೋವಾ ವಿಧಾನಸಭಾ ಅಧಿವೇಶನದಲ್ಲಿ ಗೋವಾ ಪ್ರಾಣಿಗಳ ಸಂತಾನೋತ್ಪತ್ತಿ ಮತ್ತು ಸಾಕುಪ್ರಾಣಿ ನಿಯಂತ್ರಣ ಮತ್ತು ಪರಿಹಾರ ಮಸೂದೆ-2025 ನ್ನು ಮಂಡಿಸಲು ಸರ್ಕಾರ ನಿರ್ಧರಿಸಿದೆ.

ಪರ್ವರಿಯಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಸೂದೆಗೆ ಅನುಮೋದನೆ ನೀಡಲಾಗಿದೆ. ಇಂತಹ ಕ್ರೂರ ತಳಿಗಳ ನಾಯಿಗಳು ಗೋವಾ ರಾಜ್ಯದಲ್ಲಿ ಮಕ್ಕಳ ಮೇಲೆ ಧಾಳಿ ಮಾಡುತ್ತಿರುವ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಸಾವಂತ್ ಮಾಹಿತಿ ನೀಡಿದ್ದಾರೆ.