ಸುದ್ಧಿಕನ್ನಡ ವಾರ್ತೆ
 ಗೋವಾ ರಾಜ್ಯದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿಯೂ( Government Hospital)  ಕರ್ನಾಟಕದ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿಲ್ಲ,(Free treatment is not being provided)  ಇದರಿಂದಾಗಿ ಗೋವಾದಲ್ಲಿ ನೆಲೆಸಿರುವ ಕರ್ನಾಟಕದ ಲಕ್ಷಾಂತರ ಕೂಲಿ ಕಾರ್ಮಿಕರು  ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ಗೋವಾ ರಾಜ್ಯಕ್ಕೆ ಕರ್ನಾಟಕದಿಂದ ಹೆಚ್ಚಿನ ಸಂಖ್ಯೆಯಲ್ಲಿ ಕೂಲಿ ಕಾರ್ಮಿಕರು ಬಂದು ಹೋಗುತ್ತಾರೆ. ಇಷ್ಟೇ ಅಲ್ಲದೆಯೇ ಅದೆಷ್ಟೋ ಕಾರ್ಮಿಕರು ಸೀಜನ್ ಕೆಲಸಗಳಿಗಾಗಿ ಗೋವಾಕ್ಕೆ (Goa ) ಆಗಮಿಸುತ್ತಾರೆ. ಇವರಿಗೆ ಇಲ್ಲಿ ಕೆಲಸ ಮಾಡುವಾಗ ಅಪಘಾತ ಅವಘಡ ಸಂಭವಿಸಿದರೆ ಗೋವಾದಲ್ಲಿ ಯಾವುದೇ ಉಚಿತ ಚಿಕಿತ್ಸೆ ಇಲ್ಲ.( There is no free treatment) ಸರ್ಕಾರಿ ಆಸ್ಪತ್ರೆಗಳಲ್ಲಿಯೂ ಕರ್ನಾಟಕದ ಕೂಲಿ ಕಾರ್ಮಿಕರು ಹಣ ತೆತ್ತು ಚಿಕಿತ್ಸೆ ಪಡೆದುಕೊಳ್ಳಬೇಕಾಗುತ್ತದೆ. ಹೇಳಿಕೇಳಿ ಕಡು ಬಡವರಾಗಿರುವ ಕೂಲಿ ಕಾರ್ಮಿಕರು ಇದರಿಂದಾಗಿ ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ಇಷ್ಟೇ ಅಲ್ಲದೆಯೇ ಕರ್ನಾಟಕದಿಂದ ಗೋವಾಕ್ಕೆ ಪ್ರವಾಸಕ್ಕೆ ಬಂದಿದ್ದ ಸಂದರ್ಭದಲ್ಲಿ ಅದೆಷ್ಟೊ ಅಪಘಾತಗಳು ಸಂಬವಿಸಿದ್ದು, ಕರ್ನಾಟಕದ ಗಾಯಾಳುಗಳು ಇಲ್ಲಿ ಹಣ ತೆತ್ತು ಚಿಕಿತ್ಸೆ ಪಡೆದುಕೊಂಡಿರುವ ಅದೆಷ್ಟೊ ಉದಾಹರಣೆಗಳಿವೆ.

ಗೋವಾದಲ್ಲಿ ದಯಾನಂದ ಸಾಮಾಜಿಕ ಸ್ವಾಸ್ಥ್ಯ ಯೋಜನೆ (DSSY) ಎಂಬ ವಿಮಾ ಯೋಜನೆಯಿದ್ದು ಈ ವಿಮಾ ಯೋಜನೆಯನ್ನು ಇಲ್ಲಿ ಪಡೆದುಜಕೊಳ್ಳಲು ಗೋವಾದಲ್ಲಿ ಕನಿಷ್ಠ 5 ವರ್ಷ ವಾಸ್ತವ್ಯ ಹೂಡಿರುವ ದಾಖಲಾತಿಯ ಅಗತ್ಯವಿದೆ. ಆದರೆ ಕರ್ನಾಟಕದಿಂದ ಗೋವಾಕ್ಕೆ ಬಂದು ಹೋಗುವ ಕೂಲಿ ಕಾರ್ಮಿಕರ ಬಳಿ ಇದ್ಯಾವುದೇ ದಾಖಲಾತಿ ಇಲ್ಲದ ಕಾರಣ ಗೋವಾದ ಸರ್ಕಾರಿ ಆಸ್ಪತ್ರೆಗಳಲ್ಲಿ ಕನ್ನಡಿಗರು ಉಚಿತ ಚಿಕಿತ್ಸೆಯಿಂದ ವಂಚಿತರಾಗಿದ್ದಾರೆ. ಗೋವಾ ರಾಜ್ಯದ ಪ್ರಮುಖ ಆಸ್ಪತ್ರೆ ಗೋವಾ ಮೆಡಿಕಲ್ ಕಾಲೇಜು ಬಾಂಬೋಲಿಂ ಆಸ್ಪತ್ರೆಯಲ್ಲಿ ಹೊರ ರಾಜ್ಯದ ರೋಗಿಗಳು ಚಿಕಿತ್ಸಾ ಶುಲ್ಕ ಪಾವತಿ ಖಡ್ಡಾಯವಾಗಿದೆ.

ಮಹಾರಾಷ್ಟ್ರ ಸರ್ಕಾರವು (Government of Maharashtra) ಗೋವಾಕ್ಕೆ ಬರುವ ತನ್ನ ರಾಜ್ಯದ ಜನತೆಗೆ ಗೋವಾದ ಸರ್ಕಾರಿ ಆಸ್ಪತ್ರೆಯಲ್ಲಿ ವಿಮಾ ಯೋಜನೆಯ ಅಡಿಯಲ್ಲಿ ಉಚಿತ ಚಿಕಿತ್ಸೆ ಸೌಲಭ್ಯ ಕಲ್ಪಿಸಿದೆ. ಆದರೆ ಕರ್ನಾಟಕ ಸರ್ಕಾರ ಮಾತ್ರ ಗೋವಾ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಇಂತಹ ವಿಮಾ ಯೋಜನೆಯ ಅಡಿಯಲ್ಲಿ ಕನ್ನಡಿಗ ಕೂಲಿ ಕಾರ್ಮಿಕರಿಗೆ ಉಚಿತ ಚಿಕಿತ್ಸೆ ಲಭಿಸುವಂತೆ ಮಾಡುವಲ್ಲಿ ಯಾವುದೇ ಕ್ರಮ ಕೈಗೊಳ್ಳದಿರುವುದು ಖೇದಕರ ಸಂಗತಿ.