ಸುದ್ಧಿಕನ್ನಡ ವಾರ್ತೆ
ಪಣಜಿ(ವಾಸ್ಕೊ): ಗೋವಾದಲ್ಲಿ ಲಕ್ಷಾಂತರ ಕನ್ನಡಿಗರು ನೆಲೆಸಿದ್ದಾರೆ. ಕರ್ನಾಟಕ ,ಕೇರಳ, ಮಹಾರಾಷ್ಟç, ತಮಿಳುನಾಡು, ಆಂಧ್ರಪ್ರದೇಶ ಹೀಗೆ ಹಲವಾರು ರಾಜ್ಯಗಳಿಂದ ಬಂದು ಇಲ್ಲಿ ನಾವೆಲ್ಲರೂ ಜುರಿನಗರದಲ್ಲಿ ಅಣ್ಣ ತಮ್ಮ ಅಕ್ಕ-ತಂಗಿಯರ0ತೆ ನೂರಾರು ಬೇರುಗಳಿರುವ ಒಂದೇ ಆಲದ ಮರದಂತೆ ಬಾಳುತ್ತಿದ್ದೇವೆ. ಈ ಜುವಾರಿ ನಗರದಲ್ಲಿ ಜಾತಿ ಮತ ಭೇದಭಾವ ಇಲ್ಲ ಇಲ್ಲಿ ನಾವೆಲ್ಲರೂ ಜುವಾರಿ ನಗರದಲ್ಲಿ ಸ್ವಾತಂತ್ರವಾಗಿ ಬದುಕುತಿದ್ದೇವೆ ಅದಕ್ಕೋಸ್ಕರ ನಾನು ನಿಮ್ಮೆಲ್ಲರ ಅಭಿಮಾನದಿಂದ ಗ್ರಾಮ ಪಂಚಾಯತಿಯ ಉಪಾಧ್ಯಕ್ಷನಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗಿದೆ ಎಂದು ಗಿರೀಶ್ ಪಿಲ್ಲೆಯವರು ಹೇಳಿದರು.
ವಾಸ್ಕೊದ ಜುವಾರಿನಗರದ ಬಿರ್ಲಾ ಗ್ರಾಮದ ಶ್ರೀ ದುರ್ಗಾದೇವಿಯ ಗಣಪತಿಯ ದರ್ಶನ ಪಡೆಯಲು ಆಗಮಿಸಿರುವಂತ ಸಾಂಕವಾಳ ಗ್ರಾಮ ಪಂಚಾಯತಿಯ ಉಪಾಧ್ಯಕ್ಷರಾದ ಗಿರೀಶ್ ಪಿಲ್ಲೆ ಹಾಗೂ ಸಮಾಜ ಸೇವಕರಾದ ಪರಶುರಾಮ್ ದೊಡ್ಡಮನಿ ಅವರು ಶ್ರೀ ದುರ್ಗಾದೇವಿಯ ಗಣಪತಿಯ ದರ್ಶನದ ನಂತರ ಮಾತನಾಡಿದರು.
ಮುಂದಿನ ದಿನಮಾನಗಳಲ್ಲಿ ಜುವಾರಿನಗರ ಬಿರ್ಲಾ ಗ್ರಾಮವನ್ನು ಎಲ್ಲರೂ ತಲೆಯೆತ್ತಿ ನೋಡುವ ಹಾಗೆ ಮಾಡುವುದೇ ನನ್ನ ಗುರಿ ಎಂದು ಗಣಪತಿಯ ಮುಂದೆ ಗಿರೀಶ್ ಪಿಲ್ಲೆ ಪ್ರತಿಜ್ಞೆ ಮಾಡಿದರು. ಗಣಪತಿಯ ಆಶೀರ್ವದಿಂದ ನಾವೆಲ್ಲರೂ ಒಗ್ಗಟ್ಟಾಗೋಣ ಮತ್ತು ಜುವಾರಿ ನಗರದ ಏಳಿಗೆಗೋಸ್ಕರ ಶ್ರಮಿಸೋಣ ಎಂದು ಕರೆ ನೀಡಿದರು.
ಭಕ್ತಾದಿಗಳು ಮುಂದಿನ ದಿನಗಳಲ್ಲಿ ಕುಟ್ಟಳ್ಳಿಯ ಮತಕ್ಷೇತ್ರದ ಶಾಸಕರು ನಿವೆ ಎಂದು ಕೂಗಿ ಕೂಗಿ ಹೆಳಿದರು ಮತ್ತು ನಿಮ್ಮಂತ ಒಬ್ಬ ನಾಯಕರು ನಮಗೆ ಬೇಕೇ ಬೇಕು ಎಂದು ಗಿರೀಶ್ ಪಿಲ್ಲೆ ರವರಿಗೆ ಹೇಳಿದರು. ಗಿರೀಶ್ ಪಿಳ್ಳೆ ಯವರು ಎಲ್ಲರಿಗೂ ತುಂಬು ಹೃದಯದಿಂದ ಧನ್ಯವಾದಗಳನ್ನು ತಿಳಿಸಿದರು.