ಸುದ್ಧಿಕನ್ನಡ ವಾರ್ತೆ
ಚಿನ್ನದ ಧ್ಯಾನ ಮಾಡುತ್ತಿದ್ದ ಆಭರಣ(Gold) ಪ್ರಿಯ ಮಹಿಳೆಯರಿಗೆ ಈಗ ಮತ್ತೊಂದು ಶಾಕಿಂಗ್ ನ್ಯೂಸ್ ಬಂದಿದೆ. ಯಾಕಂದ್ರೆ ಚಿನ್ನದ ಬೆಲೆ ಮತ್ತೆ ಭಾರಿ ದೊಡ್ಡ ಪ್ರಮಾಣದಲ್ಲಿ ಏರಿಕೆಯನ್ನು ಕಂಡಿದ್ದು, ಚಿನ್ನ ಖರೀದಿ ಮಾಡಲು ಹಾಕಿದ್ದ ಆಭರಣ ಪ್ರಿಯರ ಪ್ಲಾನ್ ಕೂಡ ಬುಡಮೇಲಾಗುತ್ತಿದೆ. ಬಂಗಾರ ಬೆಲೆ( Gold price) ಮತ್ತೊಮ್ಮೆ ಅತಿಹೆಚ್ಚು ಬೇಡಿಕೆ ಪಡೆಯುತ್ತಿರುವ ಹಿನ್ನೆಲೆ ಬೆಲೆ ಭಾರಿ ಏರಿಕೆ ಕಾಣುತ್ತಿದೆ. ಆದರೆ 1,00,000 ರೂಪಾಯಿ ತಲುಪಿದ ಚಿನ್ನದ ಬೆಲೆ, ಕುಸಿತ ಕಾಣುವುದು ಯಾವಾಗ?
ಈಗಾಗಲೇ ಚಿನ್ನದ ಮೇಲೆ ಹೂಡಿಕೆ ಮಾಡಿದವರಿಗೆ ಚಿನ್ನದ ಬೆಲೆಯು ಹೆಚ್ಚಾದರೆ ಖುಷಿ ಆಗುತ್ತದೆ, ಹೀಗಿದ್ರೂ ಸಾಮಾನ್ಯವಾಗಿ ಆಭರಣ ಹೆಚ್ಚಾಗಿ ಇಷ್ಟಪಡುವ ಮಹಿಳೆಯರಿಗೆ ಚಿನ್ನ ಬೆಲೆಯಲ್ಲಿ ಕುಸಿದರೆ ಮಾತ್ರ ಖುಷಿ. ಹೀಗೆ ಚಿನ್ನದ ಬೆಲೆ ಕಳೆದ 1 ತಿಂಗಳಿಂದ ಭಾರಿ ಏರಿಳಿತ (Huge ups and downs)ಕಾಣುತ್ತಿದೆ. ಮುಂದಿನ ದಿನಗಳಲ್ಲಿ ಚಿನ್ನ ಬೆಲೆ ಮತ್ತಷ್ಟು ಏರಿಕೆ ಕಂಡು, ನಂತರ ಕೈಗೆ ಸಿಗದ ಗಗನ ಕುಸುಮ ಆಗುವ ರೀತಿ ಭಾಸವಾಗುತ್ತಿದೆ. ಈಗ ಮತ್ತೊಮ್ಮೆ ಚಿನ್ನದ ಬೆಲೆಯಲ್ಲಿ ಭಾರಿ, ಭರ್ಜರಿ ಏರಿಕೆ ಕಂಡುಬಂದ ಕಾರಣಕ್ಕೆ ಆಭರಣ ಪ್ರಿಯರು ಚಿಂತೆ ಮಾಡುವಂತೆ ಆಗಿದೆ.
1,00,000 ರೂಪಾಯಿ ತಲುಪಿದ ಚಿನ್ನದ ಬೆಲೆ…
ಬೆಂಗಳೂರು ಸೇರಿದಂತೆ ನಮ್ಮ ಕರ್ನಾಟಕ ರಾಜ್ಯದಲ್ಲಿ ಈಗ 10 ಗ್ರಾಂ 24 ಕ್ಯಾರಟ್ ಚಿನ್ನ ಬೆಲೆಯು 1,00,430 ರೂಪಾಯಿ ತಲುಪಿದೆ. 22 ಕ್ಯಾರೆಟ್ ಆಭರಣ ಚಿನ್ನ ಬೆಲೆ 91,060 ರೂಪಾಯಿ ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ 11110 ರೂಪಾಯಿ ಇದ್ದು, ಚಿನ್ನದ ಬೆಲೆ (Gold Price) ಇದೇ ರೀತಿ ಏರಿಕೆ ಕಾಣುತ್ತಿದ್ದರೆ ಮುಂದಿನ ದಿನಗಳಲ್ಲಿ ಚಿನ್ನ ಖರೀದಿಗೆ ನಮ್ಮ ಜನ ಹಿಂದೆ ಮುಂದೆ ಯೋಚನೆ ಮಾಡುವ ಪರಿಸ್ಥಿತಿ ಇದೆ. ಅದರಲ್ಲೂ ಇನ್ನೇನು ಆಷಾಢ ಮಾಸ ಮುಗಿದು, ಮದುವೆ ಸೀಸನ್ ಶುರುವಾಗುವ ಸಮಯದಲ್ಲೇ ಚಿನ್ನದ ಬೆಲೆ ಇಷ್ಟೆಲ್ಲಾ ಏರಿಕೆ ಕಂಡು ಭಾರಿ ಸಂಚಲನ ಸೃಷ್ಟಿಸಿದೆ.
1.5 ಲಕ್ಷ ರೂಪಾಯಿ ಆಗುತ್ತಾ ಚಿನ್ನದ ಬೆಲೆ?
ಕಳೆದ 15 ವರ್ಷಕ್ಕೆ ಹೋಲಿಕೆ ಮಾಡಿದ್ರೆ ಚಿನ್ನ ಬೆಲೆಯಲ್ಲಿ (Gold Price) ಸಾಕಷ್ಟು ಬದಲಾವಣೆ ಆಗಿಬಿಟ್ಟಿದೆ. ಹಾಗೇ ದೊಡ್ಡ ಮಟ್ಟದಲ್ಲಿ ಚಿನ್ನ ಏರಿಕೆ ಕಂಡಿದೆ. ಮುಂದಿನ ದಿನಗಳಲ್ಲಿ ಕೂಡ ಚಿನ್ನಕ್ಕೆ ಇನ್ನೂ ಹೆಚ್ಚಿನ ಬೇಡಿಕೆಯು ಬರುವ ಸಾಧ್ಯತೆ ದಟ್ಟವಾಗಿದೆ. ಇದಕ್ಕೆ ಕಾರಣ ಏನೆಂದರೆ, ಭೂಮಿ ಒಳಗೆ ಸಿಗುತ್ತಿದ್ದ ಚಿನ್ನ ಭಾಗಶಃ ಕಡಿಮೆ ಆಗುತ್ತಾ ಬರುತ್ತಿದೆ. ಹೀಗಾಗಿ ಗಣಿಗಾರಿಕೆ ನಡೆಸುವ ಸಾಧ್ಯತೆ ಕ್ಷೀಣಿಸಿದೆ, ಇದು ಕೂಡ ಚಿನ್ನದ ಮೇಲೆ ಸಾಕಷ್ಟು ದೊಡ್ಡ ಪ್ರಮಾಣದ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗೆ ಚಿನ್ನ ಬೆಲೆ ಈ ವರ್ಷದ ಅಂತ್ಯಕ್ಕೆ 1.5 ಲಕ್ಷ ರೂಪಾಯಿ ಆಸುಪಾಸಿಗೆ ಬಂದರೂ ಅಚ್ಚರಿ ಪಡಬೇಕಿಲ್ಲ ಎನ್ನುತ್ತಾರೆ ತಜ್ಞರು.