ಸುದ್ಧಿಕನ್ನಡ ವಾರ್ತೆ
ಪಣಜಿ ಜುಲೈ 4 ರಂದು ಶುಕ್ರವಾರ ಗೋವಾ ಹವಾಮಾನ ಇಲಾಖೆಯು ರಾಜ್ಯಾದ್ಯಂತ ಭಾರೀ ಮಳೆಯಾಗುವ (Heavy rain)ಸಾಧ್ಯತೆ ಇದೆ ಎಂದು ಮುನ್ನೆಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಶಿಕ್ಷಣ ಇಲಾಖೆಯು ಜುಲೈ 4, ಶುಕ್ರವಾರ ರಂದು ಎಲ್ಲಾ ಶಾಲೆ ಕಾಲೇಜುಗಳಿಗೆ ರಜೆ ಘೋಷಿಸಿದೆ, ತರಬೇತಿಗಾಗಿ ನಿಯೋಜಿಸಲಾದವರನ್ನು ಹೊರತುಪಡಿಸಿ ಶಿಕ್ಷಕರಿಗೂ ಕೂಡ ರಜೆ ಘೋಷಿಸಿದೆ.
ಗೋವಾ ರಾಜ್ಯಾದ್ಯಂತ ಬುಧವಾರದಿಂದ ಧಾರಾಕಾರ ಮಳೆಯಾಗುತ್ತಿದ್ದು ಜನಜೀವನ ಅಸ್ತವ್ಯಸ್ಥಗೊಂಡಿದೆ. ನದಿಗಳು ಉಕ್ಕಿ ಹರಿಯುತ್ತಿದ್ದು ಕೆಲ ಊರುಗಳಿಗೆ ಸಂಪರ್ಕ ಕಡಿತಗೊಂಡ ಘಟನೆ ಕೂಡ ನಡೆದಿದೆ. ಶುಕ್ರವಾರ ಕೂಡ ಮಳೆ (Heavy rain) ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಗೋವಾ ರಾಜ್ಯ ಶಿಕ್ಷಣ ಇಲಾಖೆಯು ಶುಕ್ರವಾರ ಶಾಲೆ ಕಾಲೇಜುಗಳಿಗೆ ರಜೆ ಘೋಷಿಸಿದೆ.