ಸುದ್ಧಿಕನ್ನಡ ವಾರ್ತೆ
ಯಲ್ಲಾಪುರ: ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕೊಡ್ಲಗದ್ಧೆಯ ವಿಶ್ವನಾಥ ಅಂಬಿಗ ಎಂಬ ರಿಕ್ಷಾ ಚಾಲಕ ಜೂನ್ 29 ರಂದು ಕೊಡ್ಲಗದ್ಧೆ ಕ್ರಾಸ್ ನಲ್ಲಿ ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ (Serious)ಗಾಯಗೊಂಡಿದ್ದಾರೆ. ಇವರ ಚಿಕಿತ್ಸೆಗೆ 8 ರಿಂದ 10 ಲಕ್ಷ ಖರ್ಚಾಗಲಿದೆ ಎಂದು ವೈದ್ಯರು ತಿಳಿಸಿದ್ದಾರೆ. ಕಡು ಬಡ ಕುಟುಂಬದಿಂದ ಬಂದ ಇವರು ಇಷ್ಟೊಂದು ಹಣ ಖರ್ಚು ಮಾಡುವ ಶಕ್ತಿ ಹೊಂದಿಲ್ಲ. ದಾನಿಗಳು ಇವರಿಗೆ ಸಹಾಯ (Help) ಹಸ್ತ ಕಲ್ಪಿಸಬೇಕಿದೆ.
ವಿಶ್ವನಾಥ ಅಂಬಿಗ ರವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಕೆ.ಎಸ್.ಹೆಗಡೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ವಿವರ:
ಯಲ್ಲಾಪುರದಿಂದ ಅಂಕೋಲಾ ಕಡೆ ಹೋಗುತ್ತಿದ್ದ ಬೈಕಿಗೆ ಅಂಕೋಲಾ ಕಡೆಯಿಂದ ಯಲ್ಲಾಪುರ ಕಡೆ ಬರುತ್ತಿದ್ದ ಕಾರು ಬೈಕಿಗೆ ಡಿಕ್ಕಿಯಾದ ಘಟನೆ ಜೂನ್ 29 ರಂದು ನಡೆದಿತ್ತು. ಅಪಘಾತದಲ್ಲಿ ಬೈಕಿನ ಮೇಲೆ ಕಾರು ಹತ್ತಿದೆ. ಈ ಘಟನೆಯಲ್ಲಿ ಕೊಡ್ಲಗದ್ಧೆಯ ಸುನೀಲ್ ಪಟಗಾರ ಎಂಬ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದರೆ, ವಿಶ್ವನಾಥ ಅಂಬಿಗ ಎಂಬ ರಿಕ್ಷಾ ಚಾಲಕರು ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಕೂಡಲೇ ಹುಬ್ಬಳ್ಳಿಯ ಕಿಮ್ಸ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಲಾಗಿದೆ.
ಕೊಡ್ಲಗದ್ದೆ (Kodlagadde) ಕ್ರಾಸಿನಲ್ಲಿ ಬೈಕ್ ಸವಾರರು ತುರುವು ಪಡೆಯುವಾಗ ಕಾರು ಉರುಳಿಕೊಂಡು ಬಂದು ಬೈಕಿಗೆ ಗುದ್ಧಿದೆ ಎನ್ನಲಾಗಿದೆ. ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ವಿಶ್ವನಾಥ ಅಂಬಿಗ ರವರಿಗೆ ದಾನಿಗಳು ಸಹಾಯ ಹಸ್ತ ನೀಡಬೇಕಿದೆ. ಈ ಸುದ್ಧಿಯೊಂದಿಗೆ ಗೂಗಲ್ ಪೆ ಸ್ಕ್ಯಾನರ್ ಕಳುಹಿಸಲಾಗಿದ್ದು, ದಾನಿಗಳು ಕೈಲಾದಷ್ಟು ಧನಸಹಾಯ ಮಾಡಿ ಒಂದು ಜೀವವನ್ನು ಉಳಿಸೋಣ.