ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾ ರಾಜಧಾನಿ ಸಮೀಪದ ರಾಯಬಂದರ್ ನಿಂದ ಚೋಡನ್ ದ್ವೀಪದ ವರೆಗಿನ ಜಲಮಾರ್ಗದಲ್ಲಿ ಹೊಸದಾಗಿ ಪ್ರಾರಂಭಿಸಲಾದ ರೋ-ರೋ ಬೋಟ್ ಗೆ ಸ್ಥಳೀಯ ನಾಗರಿಕರು ಮತ್ತು ದ್ವಿಚಕ್ರ ವಾಹನಗಳಿಗೆ ಶುಲ್ಕ ವಿಧಿಸಲಾಗುವುದಿಲ್ಲ. ಪ್ರವಾಸಿ ಕಾರುಗಳಿಗೆ 300 ರೂ, ಪ್ರವಾಸಿ ಬಾಡಿಗೆ ವಾಹನಗಳಿಗೆ 100 ರೂ, ಸ್ಥಳೀಯ ನಾಲ್ಕು ಚಕ್ರ ವಾಹನಗಳಿಗೆ 30 ರೂ ಮತ್ತು ಪಾಸ್ ತೆಗೆದುಕೊಳ್ಳುವವರಿಗೆ 15 ರೂ ಶುಲ್ಕ ವಿಧಿಸಲಾಗುತ್ತದೆ ಎಂದು ನದಿ ಸಾರಿಗೆ ಇಲಾಖೆಯ ಅಧೀಕ್ಷಕ ವಿಕ್ರಮ್ ಸಿಂಗ್ ಭೋಸಲೆ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಮಾಹಿತಿ ನೀಡಿದರು.

 

ರೋ-ರೋ ಬೋಟ್ (Ro-Ro boat)ಬೆಳಿಗ್ಗೆ 7 ರಿಂದ ರಾತ್ರಿ 9 ರವರೆಗೆ ಕಾರ್ಯನಿರ್ವಹಿಸುತ್ತದೆ. ರಾತ್ರಿ 9 ರಿಂದ ಬೆಳಿಗ್ಗೆ 7 ರವರೆಗೆ, ನದಿ ಸಾರಿಗೆ ಇಲಾಖೆಯ ಸಾಮಾನ್ಯ ಫೇರಿ ಬೋಟ್ ಗಳು ಕಾರ್ಯನಿರ್ವಹಿಸುತ್ತವೆ ಎಂದು ಭೋಸಲೆ ಹೇಳಿದರು.

 

ಇಲಾಖೆಯ ಆದಾಯವನ್ನು ಹೆಚ್ಚಿಸಲು, ಪ್ರವಾಸಿ ಬಾಡಿಗೆ ವಾಹನಗಳಿಗೆ 100 ರೂ, ಪ್ರವಾಸಿ ಕಾರುಗಳಿಗೆ 300 ರೂ ಮತ್ತು ರೋ-ರೋ ಬೋಟಿಯಲ್ಲಿ ಮಧ್ಯಮ ಗಾತ್ರದ ವಾಹನಗಳಿಗೆ 100 ರೂ ಶುಲ್ಕ ವಿಧಿಸಲಾಗುತ್ತದೆ. ರೋ-ರೋ ಬೋಟ್ ನಲ್ಲಿ ಮೋಜು ಮಾಡಲು ಹೋಗುವ ಪ್ರವಾಸಿಗರಿಗೆ 50 ರೂ. ಶುಲ್ಕ ವಿಧಿಸಲಾಗುತ್ತದೆ. ರೋ-ರೋ ಬೋಟ್ Â ಹವಾನಿಯಂತ್ರಿತ ಕೊಠಡಿ ಮತ್ತು ಶೌಚಾಲಯ ಸೌಲಭ್ಯಗಳನ್ನು ಹೊಂದಿದೆ. ರೋ-ರೋ ಬೋಟ್ ಏಕಕಾಲದಲ್ಲಿ 40 ದ್ವಿಚಕ್ರ ವಾಹನಗಳು ಮತ್ತು 16 ನಾಲ್ಕು ಚಕ್ರಗಳ ವಾಹನಗಳನ್ನು ಸಾಗಿಸುವ ಸಾಮಥ್ರ್ಯವನ್ನು ಹೊಂದಿದೆ ಎಂದು ಭೋಸಲೆ ಹೇಳಿದರು.

 

Ferry  ಬೋಟ್‍ನ್ನು ಹೊರತೆಗೆಯುವ ಕೆಲಸ ನಡೆಯುತ್ತಿದೆ
ಒಂದು ವಾರದ ನಂತರವೂ, ಚೋಡನ್‍ನಲ್ಲಿರುವ ನದಿಯಲ್ಲಿ ಮುಳುಗಿದ ಫೇರಿ ಬೋಟನ್ನು ಹೊರತೆಗೆಯಲು ಸಾಧ್ಯವಾಗಿಲ್ಲ. ಈ ಫೇರಿ ಬೋಟನ್ನು ಹೊರತೆಗೆಯುವ ಕೆಲಸ ನಡೆಯುತ್ತಿದೆ, ಆದರೆ ಬೋಟ್ ನದಿಯ ಮಣ್ಣಿನಲ್ಲಿ ಸಿಲುಕಿಕೊಂಡಿರುವುದರಿಂದ ಅದನ್ನು ಹೊರತೆಗೆಯುವ ಕೆಲಸಕ್ಕೆ ಅಡ್ಡಿಯಾಗುತ್ತಿದೆ ಎಂದು ವಿಕ್ರಮ್ ಸಿಂಗ್ ಭೋಸಲೆ ಮಾಹಿತಿ ನೀಡಿದ್ದಾರೆ.

ಜೂನ್ 23 ರ ಬೆಳಿಗ್ಗೆ, ಚೋಡನ್ ನಲ್ಲಿ ಮಾಂಡವಿ ನದಿಯ ತಳದಲ್ಲಿ ಫೇರಿ ಬೋಟ್ ಮುಳುಗಿತು. ಈ ಫೇರಿ ಬೋಟ್ ನಿಂದ ನದಿಗೆ ಬಿದ್ದ ಮೂರು ದ್ವಿಚಕ್ರ ವಾಹನಗಳನ್ನು ನದಿಯ ತಳದಿಂದ ಹೊರತೆಗೆಯಲಾಗಿದೆ. ಆದರೆ, ಬೋಟನ್ನು ಇನ್ನೂ ಹೊರತೆಗೆಯಲು ಸಾಧ್ಯವಾಗಿಲ್ಲ.

ರೋ-ರೋ ಬೋಟ್Â ಸೇವೆ ಯಾವಾಗಿನಿಂದ ಪ್ರಾರಂಭವಾಗಲಿದೆ..?
ರೋ-ರೋ ಬೋಟ್ ದರವನ್ನು ಅನುಮೋದಿಸಲಾಗಿದೆ ಮತ್ತು ಸರ್ಕಾರದಿಂದ ಅನುಮತಿ ದೊರೆತ ನಂತರ ಎಂಟರಿಂದ ಹತ್ತು ದಿನಗಳಲ್ಲಿ ಸೇವೆಯನ್ನು ಪ್ರಾರಂಭಿಸಲಾಗುವುದು ಎಂದು ವಿಕ್ರಮ್ ಸಿಂಗ್ ಭೋಸಲೆ ಹೇಳಿದರು.