ಸುದ್ಧಿಕನ್ನಡ ವಾರ್ತೆ
ದಟ್ಟಾರಣ್ಯದಲ್ಲಿ, ಹಳ್ಳಕೊಳ್ಳಗಳ ನಡುವೆ, ಗುಡ್ಡ ಬೆಟ್ಟದಲ್ಲಿ ರೇನ್ ಫಾರೆಸ್ಟ ಚಾಲೆಂಜ್ Rain Forest Challenge (RCF) ಗೆ ಸಿದ್ಧಗೊಳ್ಳುತ್ತಿದೆ. ಹೌದು ಈ ಸ್ಥರ್ಧೆ ಗೋವಾದಲ್ಲಿ ನಡೆಯಲಿದ್ದು ದೇಶಾದ್ಯಂತ ವಿವಿಧ ರಾಜ್ಯಗಳ ಆಪ್ ರೋಡ್ ಎಕ್ಸಪರ್ಟ ಸ್ಫರ್ಧಿಗಳು ಗೋವಾಕ್ಕೆ ಆಗಮಿಸಲಿದ್ದಾರೆ. ಭಾರತದಲ್ಲಿ ನಡೆಯುವ ಆಪ್ ರೋಡ್ ಚಾಂಪಿಯನ್ ಶಿಪ್ ಫೈನಲ್ ಕಿರೀಟ (Off Road Championship Final) ಪಡೆದುಕೊಳ್ಳಲು ಸ್ಥರ್ಧಿಗಳು ಸಜ್ಜಾಗಿದ್ದಾರೆ.
RFC ಗ್ಲೋಬಲ್ ಸಿರೀಸ್ ಗೋವಾದ ಈ ಸ್ಫರ್ಧೆಯಲ್ಲಿ ವಿಜೇತರಾದವರು ಮಲೇಶಿಯಾದಲ್ಲಿ ಗ್ಲೋಬಲ್ ಆರ್ ಎಫ್ ಸಿ ಗ್ಲ್ಯಾಂಡ್ ಫೈನಲ್ ನಲ್ಲಿ ನೇರವಾಗಿ ಪ್ರವೇಶ ಪಡೆಯಲಿದ್ದಾರೆ.
2024 ರಲ್ಲಿ ನಡೆದ ಆಫ್ ರೋಡ್ ನಾಲ್ಕು ಚಕ್ರದ ವಾಹನಗಳ ಸ್ಫರ್ಧೆಯ 10 ನೇಯ ಆವೃತ್ತಿಯಲ್ಲಿ ಮಹಿಳೆಯರೂ ಸೇರಿದಂತೆ 41 ಸ್ಫರ್ಧಾಳುಗಳು ಪಾಲ್ಗೊಂಡಿದ್ದರು. ಪ್ರಸಕ್ತ ವರ್ಷ ಜುಲೈ 28 ರಿಂದ ಅಗಷ್ಟ 3 ರವರೆಗೆ ಗೋವಾದಲ್ಲಿ ಈ ಸ್ಫರ್ಧೆ ನಡೆಯಲಿದೆ. ಈಗಾಗಲೇ ಈ ಸ್ಫರ್ಧೆಗೆ ನೋಂದಣಿ ಕಾರ್ಯ ಆರಂಭಗೊಂಡಿದ್ದು ಈಗಾಗಲೇ 60 ಕ್ಕೂ ಹೆಚ್ಚು ಸ್ಫರ್ಧಾಳುಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ. ಶ್ರೇಣಿಯ ಅನುಸಾರ ಈ ಸ್ಫರ್ಧೆಯಲ್ಲಿ ಪಾಲ್ಗೊಳ್ಳಲು 40000 ದಿಂದ 90000 ರೂ ಶುಲ್ಕ ಭರಿಸಬೇಕಿದೆ. ಬೆಂಗಳೂರಿನ ಜೀಪರ್ಸ, ಕೇರಳದ ಕೊಲೊಸಸ್, ಸೈಹ್ಯಾದ್ರಿ ಆಫ್ ರೋಡರ್ಸ, ಸಾತಾರಾ ಆಫ್ ರೋಡರ್ಸ, ಅರುಣಾಚಲಪ್ರದೇಶದ ಮಾನಭೂಮ್ ಆಫ್ ರೋಡರ್ಸಕ್ಲಬ್ ಗಳು ಸೇರಿದಂತೆ ಹಲವು ಸಂಘಗಳು ಪಾಲ್ಗೊಳ್ಳಲಿದೆ.
ಈ ಸ್ಫರ್ಧೆಯಲ್ಲಿ ಭಾಗವಹಿಸದವರು ಕೂಡ ಟೂರಿಂಗ್ ಎಡ್ವೆಂಚರ್ ಆಗಿ ಕೂಡ ಪಾಲ್ಗೊಳ್ಳಬಹುದಾಗಿದೆ.