ಸುದ್ಧಿಕನ್ನಡ ವಾರ್ತೆ
ಗೋವಾದ ಮಾಪ್ಸಾದ ಧಾರಗಳ್ ನಲ್ಲಿ ಸೋಮವಾರ ಆತಂಕಕಾರಿ ಭೀಕರ ಘಟನೆಯೊಂದು ನಡೆದಿದೆ. ಬೆಳಿಗ್ಗೆ ಕಾಲೆಜಿಗೆ ಹೊರಟಿದ್ದ ವೃಷಬ ಶೇಟಯೆ (17) ಈ ವಿದ್ಯಾರ್ಥಿಯ ಮೇಲೆ ಅಪರಿಚಿತರು ಎಸಿಡ್ ಧಾಳಿ (Acid attack on student…!) ನಡೆಸಿದ್ದಾರೆ. ಈ ಧಾಳಿ ಎಷ್ಟು ಭಯಾನಕವಾಗಿದೆಯೆಣದರೆ 17 ವರ್ಷದ ಈ ವಿದ್ಯಾರ್ಥಿ ಶೇ 90 ರಷ್ಟು ಸುಷ್ಟು ಹೋಗಿದ್ದಾನೆ ಎನ್ನಲಾಗಿದೆ. ಈ ವಿದ್ಯಾರ್ಥಿಯನ್ನು ಕೂಡಲೇ ಗೋವಾ ವೈದ್ಯಕೀಯ ಆಸ್ಪತ್ರೆ ಬಾಂಬೋಲಿಂ ಗೆ ದಾಖಲಿಸಲಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಲಭ್ಯವಾದ ಮಾಹಿತಿಯ ಅನುಸಾರ- ವೃಷಬ ಈ ವಿದ್ಯಾರ್ಥಿಯು ಸೋಮವಾರ ಬೆಳಿಗ್ಗೆ ಎಂದಿನಂತೆಯೇ ಕಾಲೇಜಿಗೆ ಹೊರಟಿದ್ದ. ಮುಖ್ಯ ರಸ್ತೆಯಲ್ಲಿ ನಿಂತಿದ್ದ ಸಂದರ್ಭದಲ್ಲಿ ಇಬ್ಬರು ಬೈಕ್ ಸವಾರರು ಎಸಿಡ್ ಧಾಳಿ ನಡೆಸಿದ್ದಾರೆ. ಈ ಭೀಕರ ಧಾಳಿಯಿಂದ ವೃಷಬ್ ಶೇಟಯೆ ಈತ ಶೇ 90 ರಷ್ಟು ಸುಟ್ಟುಹೋಗಿದ್ದಾನೆ ಎನ್ನಲಾಗಿದೆ. ( 90 percent is burnt) ಹಲ್ಲೆಯ ನಂತರ ಈತ ಬಹಳ ಹೊತ್ತಿನವರೆಗೂ ಸಹಾಯಕ್ಕಾಗಿ ಕೂಗುತ್ತಿದ್ದ, ಆದರೆ ಯಾರೂ ಕೂಡ ಸಹಾಯಕ್ಕೆ ಬಂದಿಲ್ಲ ಎನ್ನಲಾಗಿದೆ.
ಆದರೆ ಕೊನೆಗೂ ಒಬ್ಬ ವ್ಯಕ್ತಿಗೆ ದಯೆ ಬಂದು ವೃಷಬ ಶೇಟಯೆ ಎಂಬ ಈ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲಿಸಿದ ಎನ್ನಲಾಗಿದೆ. ಪೋಲಿಸರು ಘಟನಾ ಸ್ಥಳಕ್ಕೆ ಆಗಮಿಸಿ ಪಂಚನಾಮೆ ನಡೆಸಿದ್ದು, ಇದೇ ಮೊದಲ ಬಾರಿಗೆ ಇಂತಹ ಭೀಕರ ಕೃತ್ಯ ನಡೆದಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ವೃಷಬ ಶೇಟಯೆ ಈತನು ಎಸಿಡ್ ಧಾಳಿನ ನಂತರ ಬಹಳ ಹೊತ್ತು ಸಹಾಯಕ್ಕಾಗಿ ಕೂಗಾಡುತ್ತಿದ್ದ (Was shouting for help) ಎನ್ನಲಾಗಿದೆ. ದುಷ್ಕರ್ಮಿಗಳು ಈ ವಿದ್ಯಾರ್ಥಿಯ ಮೇಲೆ ಅಮಾನುಷವಾಗಿ ಎಸಿಡ್ ಧಾಳಿ ನಡೆಸಿರುವುದಕ್ಕೆ ಎಲ್ಲಡೆಯಿಂದ ಆಕ್ರೋಷ ವ್ಯಕ್ತವಾಗುತ್ತಿದ್ದು, ಪೋಲಿಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸುವಂತೆ ಸ್ಥಳೀಯರು ಆಘ್ರಹಿಸಿದ್ದಾರೆ.