ಸುದ್ದಿಕನ್ನಡ ವಾರ್ತೆ
ಕುಮಟಾ: ತಾಲೂಕಿನ ದೀವಗಿ ಅಘನಾಶಿನಿ ನದಿಯ ಬ್ರಿಜ್ ಸಮೀಪ ಬೈಕ್ ಮತ್ತು ತನ್ನ ಬ್ಯಾಗನ್ನು ರಸ್ತೆ ಪಕ್ಕ ಇಟ್ಟು ಯುವಕನೋರ್ವ ನದಿಯಲ್ಲಿ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂಬ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ಯುವಕನ ಪತ್ತೆಕಾರ್ಯ ಕೈಗೊಂಡಿದ್ದಾರೆ.
ಮೂಲತಃ ಸಾಗರ ತಾಲೂಕಿನ ತಲವಾಟದವನಾದ ಶ್ರೀಧರ ಕೃಷ್ಣ ಆಚಾರಿ ನಾಪತ್ತೆಯಾದ ಯುವಕ.ಈತ ಹೊನ್ನಾವರದಲ್ಲಿ ಕಾರ್ಪೆಂಟರ್ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.ಈತನು ತಾನು ಮದುವೆ ವಯಸ್ಸಿಗೆ ಬಂದಿದ್ದರೂ, ಈ ಬಗ್ಗೆ ಮನೆಯವರು ಯಾವುದೇ ಮಾತನಾಡದೆ ಇದ್ದಿದ್ದು, ಇದೇ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು, ಜೀವನದಲ್ಲಿ ಜಿಗುಪ್ಸೆ ಹೊಂದಿದ್ದ ಎನ್ನಲಾಗಿದೆ.ಹೀಗಾಗಿ ತಾನು ಕೆಲಸ ಮಾಡುವ ಕಾಸರಗೋಡಿನಿಂದ ಬೈಕ್ ನ ಮೇಲೆ ತೆರಳಿ ದೀವಗಿಯ ಬ್ರಿಜ್ ಬಳಿ ಬೈಕ್ ನಿಲ್ಲಿಸಿ ಅಲ್ಲಿಂದ ಎಲ್ಲಿಯೋ ಕಾಣೆಯಾಗಿದ್ದು ಹುಡುಕಿ ಕೊಡುವಂತೆ ಕುಟುಂಬದವರು ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದು, ಈತನ ಬಗ್ಗೆ ಸುಳಿವು ಅಥವಾ ಮಾಹಿತಿ ಸಿಕ್ಕಲ್ಲಿ ಕುಮಟಾ ಪೋಲೀಸ್ ಠಾಣೆ ಸಂಪರ್ಕಿಸುವಂತೆ ತಿಳಿಸಿದ್ದಾರೆ.