ಸುದ್ಧಿಕನ್ನಡ ವಾರ್ತೆ
ಸವದತ್ತಿ: ಸಪ್ತಗುಡ್ಡ ಸಪ್ತ ಕೊಳ್ಳಗಳ ನಡುವೆ ನೆಲೆನಿಂತ ಯಲ್ಲಮ್ಮನ ಸನ್ನಿಧಿಗೆ ದೇಶದ ನಾನಾ ಭಾಗಗಳಿಂದ ಲಕ್ಷಾಂತರ ಭಕ್ತಾದಿಗಳು ಆಗಮಿಸುತ್ತಾರೆ. ತಮ್ಮ ಇಷ್ಟಾರ್ಥಗಳ ಈಡೇರಿಕೆ ಹಿನ್ನೆಲೆಯ;ಲಿ ದೇವಸ್ಥಾನದ ಹುಂಡುಯಲ್ಲಿ ನಗದು ಮಾತ್ರವಲ್ಲದೆಯೇ ಚಿನ್ನಾಭರಣ,ಬೆಳ್ಳಿ ಆಭರಣ ಹಾಕಿ ಭ್ತಿ ಸಮರ್ಪಿಸುತ್ತಾರೆ. ಭಕ್ತರು ಹಾಕಿರುವ ಈ ದೇಣಿಗೆಯನ್ನು ಇದೀಗ ಎಣಿಕೆ ಮಾಡಲಾಗಿದ್ದು ಒಟ್ಟೂ 1.04 ಕೋಟಿ ರೂ ಸಂಗ್ರಹವಾಗಿದೆ.
ಸವದತ್ತಿಯ ಶ್ರೀ ಯಲ್ಲಮ್ಮನ ಗುಡ್ಡದಲ್ಲಿ ಎರಡು ದಿನಗಳಿಂದ ನಡೆದ ಯಲ್ಲಮ್ಮ ದೇವಸ್ಥಾಬದ ಹುಂಡಿ ಎಣಿಕೆ ಕಾರ್ಯ ಗುರುವಾರ ಮುಕ್ತಾಯಗೊಂಡಿದ್ದು 1.04 ಕೋಟಿ ಕಾಣಿಕೆ ಸಂಗ್ರಹವಾಗಿದೆ.
ಈ ಪೈಕಿ 5.22 ಲಕ್ಷ ರೂ ಮೌಲ್ಯದ 53 ಗ್ರಾಂ ಚಿನ್ನಾಭರಣ, 1.27 ಲಕ್ಷ ರೂ ಮೌಲ್ಯದ 1276 ಗ್ರಾಂ ಬೆಳ್ಳಿ ಆಭರಣ, 98.23 ಲಕ್ಷ ರೂ ನಗದು ಸೇರಿದೆ ಎಂದು ಯಲ್ಲಮ್ಮ ದೇವಸ್ಥಾನ ಪ್ರಾಧಿಕಾರದ ಕಾರ್ಯದರ್ಶಿ ಅಶೋಕ ದುಡಗುಂಟೆ ಮಾಹಿತಿ ನೀಡಿದ್ದಾರೆ.