ಸುದ್ಧಿಕನ್ನಡ ವಾರ್ತೆ
ಪಣಜಿ: ಬೆಳಗಾವಿ-ಗೋವಾ ಸೇರಿದಂತೆ ದೇಶದ ಇತರೆ ರಾಜ್ಯಗಳಿಂದ ಬರುವ ಪ್ರವಾಸಿ ವಾಹನವನ್ನು ಪಿಐ ಶ್ರೇಣಿಗಿಂತ ಕಡಿಮೆ ಇರುವ ಯಾವುದೇ ಪೋಲಿಸ್ ಸಿಬ್ಬಂಧಿ ಹಗಲಿನ ವೇಳೆಯಲ್ಲಿ ಚಲನ್ ನೀಡಬಾರದೆಂದು ಹಾಗೂ ಪಿಐ ಅಧಿಕಾರಿಗಳಿಗಿಂತ ಮೇಲಿನ ಅಧಿಕಾರಿಗಳು ನಿಯಮ ಉಲ್ಲಂಘಿಸಿವವರಿಗೆ,ಸುಳ್ಳು ಹೇಳುವವರಿಗೆ ಎಂವಿ ಚಲನ್ ನೀಡೆಬೇಕೆಂದು ಗೋವಾ ಸಿಎಂ ನಿರ್ದೇಶನದ ಮೇರೆಗೆ ಗೋವಾ ಎಡಿಜಿಪಿ ರವರು ಆದೇಶ ಹೊರಡಿಸಿದ್ದಕ್ಕೆ ಕರ್ನಾಟಕ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಬೆಳಗಾವಿ ಉತ್ತರ ಮತ ಕ್ಷೇತ್ರದ ಮಾಜಿ ಶಾಸಕರಾದ ಅನೀಲ್ ಬೆನಕೆ ರವರು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರಿಗೆ ಹೃತ್ಪೂರ್ವಕ ಧನ್ಯವಾದ ಸಲ್ಲಿಸಿದ್ದಾರೆ.

ಈ ಹಿಂದೆ ಅನೀಲ್ ಬೆನಕೆ ರವರು ಗೋವಾ ಮುಖ್ಯಮಂತ್ರಿಗಳಿಗೆ 2024 ಜೂನ್ 16 ರಂದು ಈ ಬಗ್ಗೆ ಮನವಿ ಸಲ್ಲಿಸಿದ್ದರು. ಈ ಉಪಕ್ರಮ ಬೆಳಗಾವಿನ ಪ್ರವಾಸಿಗರ ಮೇಲೆ ಗಮನಾರ್ಹ ಪರಿಣಾಮ ಬೀರಲಿದೆ. ಹಾಗೂ ಎರಡೂ ರಾಜ್ಯದ ಜನತೆಗೆ ಅನುಕೂಲವಾಗಲಿದೆ.

ಜನಸಾಮಾನ್ಯರು, ವ್ಯಾಪಾರಿಗಳು ವಂಚನೆಗೆ ಒಳಗಾಗುವುದು ನಿಲ್ಲುತ್ತದೆ. ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರ ಈ ನಡೆಯು ಎರಡೂ ರಾಜ್ಯಗಳ ನಡುವಿನ ಸಂಬಂಧ,ವ್ಯಾಪಾರ,ವಹಿವಾಟು ಹಾಗೂ ಪ್ರವಾಸೋದ್ಯಮ ಹೆಚ್ಚಲು ಅನುಕೂಲವಾಗಲಿದೆ ಎಂದು ಅನೀಲ್ ಬೆನಕೆ ತಿಳಿಸಿದ್ದಾರೆ.