ಸುದ್ಧಿಕನ್ನಡ ವಾರ್ತೆ
ಪ್ರಪ್ರಥಮಬಾರಿಗೆ ಗೋವಾದಲ್ಲಿ ತೆಂಕುತಿಟ್ಟಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ವಿಶೇಷ ಆಕರ್ಷಣೆಯೊಂದಿಗೆ ಸಂಪೂರ್ಣ ದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಗೋವಾದಲ್ಲಿ ಪ್ರಪ್ರಥಮ ಬಾರಿಗೆ ಪಾವಂಜೆ ಮೇಳವೇ ಗೋವಾಕ್ಕೆ ಆಗಮಿಸುತ್ತಿದೆ. 

ಗೋವಾದಲ್ಲಿರುವ ಯಕ್ಷಗಾನ ಪ್ರೇಮಿಗಳೇ… ಇದೇ ಭಾನುವಾರ ಜೂನ್ 22 ರಂದು ಮಧ್ಯಾನ್ಹ 3 ಗಂಟೆಯಿಂದ ಗೋವಾ ರಾಜಧಾನಿ ಪಣಜಿಯ ಮೆನೆಜಸ್ ಬ್ರಗಾಂಜ ಸಭಾಗೃಹದಲ್ಲಿ “ಶ್ರೀ ದೇವಿ ಮಹಾತ್ಮೆ” ಸಂಪೂರ್ಣ ಯಕ್ಷಗಾನ ಪ್ರಸಂಗ ಆಯೋಜಿಸಲಾಗಿದೆ. ಯಕ್ಷಧ್ರುವ ಪಟ್ಲ ಫೌಂಡೇಶನ್ ಗೋವಾ ಘಟಕದ ದ್ವಿತೀಯ ವಾರ್ಷಿಕೋತ್ಸವದ ಅಂಗವಾಗಿ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವ್ರಜ ಕ್ಷೇತ್ರ ಪಾವಂಜೆ ಇವರಿಂದ “ಶ್ರೀ ದೇವಿ ಮಹಾತ್ಮೆ”ಯಕ್ಷಗಾನ ಪ್ರಸಂಗ ಜರುಗಲಿದೆ.

ಭಾಗವತರಾಗಿ ಯಕ್ಷಧ್ರುವ ಸತೀಶ ಪಟ್ಲ, ಪ್ರಫುಲ್ಲಚಂದ್ರ ನೆಲ್ಯಾಡಿ, ಭರತ್ ರಾಜ್ ಸಿದ್ಧಕಟ್ಟೆ, ಚಂಡೆ ಮದ್ದಳೆ;-ಗುರುಪ್ರಸಾದ ಬೊಳಿಂಜಡ್ಕ, ಪ್ರಶಾಂತ ಶೆಟ್ಟಿ ವಗೆನಾಡು, ಕೌಶಿಕ್ ರಾವ್ ಪುತ್ತಿಗೆ, ಚಕ್ರತಾಳ;-ಪೂರ್ಣೇಶ ಆಚಾರ್ಯ, ಮನ್ವಿತ್ ಶೆಟ್ಟಿ ಇರಾ.

ಆದಿಮಾಯೆ; ಯೋಗೀಶ ಕಡಬ, ಬ್ರಹ್ಮ;ಡಿ.ಮಾಧವ ಬಂಗೇರ, ವಿಷ್ಣು-ದಿನೇಶ ಶೆಟ್ಟಿ ಕಾವಳಕಟ್ಟೆ, ಮಹೇಶ್ವರ-ಅಜಿತ್ ಪುತ್ತಿಗೆ, ಮಾಲಿನಿ-ರಾಜೇಶ್ ನಿಟ್ಟೆ, ಸುಪಾಶ್ರ್ವಕ-ದಿವಾಕರ ಕಾಣಿಯೂರು, ವಿದ್ಯುನ್ಮಾಲಿ-ಸುಹಾಸ ಪಂಜಿಕಲ್ಲು, ಯಕ್ಷ-ಅಜಿತ್ ಪುತ್ತಿಗೆ, ಮಾಲಿನಿ ಧೂತ-ಸಂದೇಶ ಮಂದಾರ, ಮಹೀಶ್-ರಂಜಿತ್ ಮಲ್ಲ, ಶಂಖಾಸುರ-ಮನ್ವಿತ್ ನಿಡ್ಡೋಡಿ, ದುರ್ಗಾಸುರ-ಲಕ್ಷ್ಮಣ, ದೇವೇಂದ್ರ-ರಮೇಶ ಪಟ್ರಮೆ, ಬಲಗಳು-ಯೋಗೀಶ್ ಸೋಹನ್, ಶ್ರೀದೇವಿ-ಪ್ರಶಾಂತ ಶೆಟ್ಟಿ ನೆಲ್ಯಾಡಿ, ಸಿಂಹ-ಲಕ್ಷ್ಮಣ ಪೆರ್ಮುದೆ, ಚಂಡ-ಮೋಹನ್ ಬೆಳ್ಳಿಪ್ಪಾಡಿ, ಮುಂಡ-ದಿವಾಕರ, ಸುಗ್ರೀವ-ಮಾಧವ ಬಂಗೇರ, ಶುಂಭ-ಮನೀಷ್ ಪಾಟಾಳಿ, ಧೂರ್ಮಾಕ್ಷ-ಸುಹಾಸ್ ಪಂಜಿಕಲ್ಲು, ಕಾಳಿ-ಮನ್ವೀತ್ ನಿಡ್ಡೋಡಿ, ರಕ್ತಬೀಜ-ಗಣೇಶ್ ಶೆಟ್ಟಿ ಕನ್ನಡಿಕಟ್ಟೆ, ರಕ್ಷತೇಶ್ವರಿ-ಲಕ್ಷ್ಮಣ ಪೆರ್ಮುದೆ, ಪಾತ್ರಿ-ಸಂದೇಶ ಮಂದರಾರ ರವರು ಪಾತ್ರ ನಿರ್ವಹಿಸಲಿದ್ದಾರೆ.

ಶ್ರೀ ದೇವಿ ಮಹಾತ್ಮೆ ಸಂಪೂರ್ಣ ಯಕ್ಷಗಾನ ಪ್ರಸಂಗವನ್ನು ಗೋವಾದಲ್ಲಿರುವ ಎಲ್ಲ ಯಕ್ಷಗಾನ ಪ್ರೇಮಿಗಳು ಆಗಮಿಸಿ ದೇವಿಯ ಕ್ರಪೆಗೆ ಪಾತ್ರರಾಗಿ…