ಸುದ್ದಿಕನ್ನಡ ವಾರ್ತೆ
Amboli: ಗೋವಾದಿಂದ ಅಂಬೋಲಿ ಘಾಟ್ ಪ್ರವಾಸಕ್ಕೆ ಹೋಗಿದ್ದ ಯುವಕರಲ್ಲಿ ಜಗಳವುಂಟಾಗಿದೆ. ಸೈಡ್ ನೀಡಿಲ್ಲ ಎಂಬ ಕಾರಣಕ್ಕೆ ಉಂಟಾದ ಜಗಳ ಸಾವಂತವಾಡಿ ಪೋಲಿಸ್ ಠಾಣೆಗೆ ತಲುಪಿದೆ. ಅಲ್ಲಿ ಪೋಲಿಸರು ಮತ್ತು ಈ ಯುವಕರ ನಡುವೆ ಉಂಟಾದ ಜಗಳದಲ್ಲಿ ಓರ್ವ ಪೋಲಿಸ್ ಗಾಯಗೊಂಡಿದ್ದಾರೆ, (A policeman injured in a fight between youths) ಈ ಕುರಿತಂತೆ ಸಾವಂತವಾಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಕುರಿತಂತೆ ಲಭ್ಯವಾದ ಮಾಹಿತಿಯ ಅನುಸಾರ-ಗೋವಾದ ಸುಮಾರು 15 ಜನ ಯುವಕರು ಅಂಬೋಲಿ ಘಾಟ್ ಜಲಪಾತ ವೀಕ್ಷಣೆಗೆ ತೆರಳಿದ್ದರು. ಅಂಬೋಲಿ ಘಾಟ್ ನಲ್ಲಿ ಸೈಡ್ ನೀಡುವ ವಿಷಯಕ್ಕೆ ಸಂಬಂಧಿಸಿದಂತೆ ಪ್ರವಾಸಿರು ಮತ್ತು ಪ್ರವಾಸಿಗರ ನಡುವೆ ಜಗಳ ಆರಂಭಗೊಂಡಿತು. ಈ ಜಗಳ ಸಾವಂತವಾಡಿ ಪೋಲಿಸ್ ಠಾಣೆಯ ವರೆಗೂ ತಲುಪಿತು. (A fight between tourists and tourists over the issue of giving sides at Amboli Ghat).
ಪೋಲಿಸರು ಮಧ್ಯಸ್ಥಿಕೆ ವಹಿಸಿ ಜಗಳವನ್ನು ನಿಲ್ಲಿಸಲು ಪ್ರಯತ್ನಿಸಿದರು. ಆದರೆ ಪೋಲಿಸ್ ಠಾಣೆಯಲ್ಲಿÀ್ಯುವಕರ ಜಟಾಪತಿ ಮುಂದುವರೆದಿತ್ತು. ಈ ಸಂದರ್ಭದಲ್ಲಿ ಓರ್ವ ಪೋಲಿಸರು ಗಾಯಗೊಂಡ ಘಟನೆಯೂ ನಡೆದಿದೆ. ಈ ಯುವಕರ ವಿರುದ್ಧ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಂಬೋಲಿ ಘಾಟ್ ಭಾಗದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಈ ಭಾಗಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಕೂಡ ಹೆಚ್ಚಾಗಿದೆ.