ಸುದ್ಧಿಕನ್ನಡ ವಾರ್ತೆ
Goa : ಕರ್ನಾಟಕದ ಯುವ ಜೋಡಿಯೊಂದು ಪರಸ್ಪರ ಪ್ರೀತಿಸುತ್ತಾ ಜೀವನಪಯರ್ಂತ ಬೆಂಬಲ ನೀಡುವುದಾಗಿ ಭರವಸೆ ನೀಡಿ, ಮದುವೆಯಾಗುವ ಉದ್ದೇಶದಿಂದ ಗೋವಾಕ್ಕೆ ಬಂದಿತು. ಆದರೆ, ಕೆಲವು ಕಾರಣಗಳಿಂದಾಗಿ ಇಬ್ಬರೂ ಬೇರ್ಪಟ್ಟರು. ಇಬ್ಬರ ನಡುವಿನ ಜಗಳ ಎಷ್ಟು ತೀವ್ರಗೊಂಡಿತ್ತೆಂದರೆ, ಆ ಯುವಕ ತನ್ನ ಗೆಳತಿಯನ್ನು ಕೊಂದ ಭೀಕರ ಘಟನೆ ನಡೆದಿದ್ದು, ಸೋಮವಾರ ಗೋವಾದ ಧಾರಬಾಂದೋಡಾ ಪೆÇದೆಯಲ್ಲಿ ಪತ್ತೆಯಾದ ಶವ ಅವಳದೇ ಆಗಿದ್ದು, ಹುಬ್ಬಳ್ಳಿಯ ಆಕೆಯ ಗೆಳೆಯನನ್ನು ಪೆÇಲೀಸರು ಬಂಧಿಸಿದ್ದಾರೆ. ಪೆÇಲೀಸರು ಆತನ ವಿಚಾರಣೆಯ ಮೂಲಕ ಪ್ರಕರಣವನ್ನು ಭೇದಿಸುವಲ್ಲಿ ಗೋವಾ ಯಶಸ್ವಿಯಾಗಿದ್ದಾರೆ.

ಕಳೆದ ಸೋಮವಾರ ಬೆಳಿಗ್ಗೆ ಗೋವಾದ ಧಾರಾಬಾಂದೋಡಾ ಪೆÇದೆಯಲ್ಲಿ ಕತ್ತು ಸೀಳಿದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆಯಾಗಿದೆ. ಈ ಪ್ರಕರಣದಲ್ಲಿ, ಫೆÇೀಂಡಾ ಪೆÇಲೀಸರು ತ್ವರಿತವಾಗಿ ತನಿಖೆ ಆರಂಭಿಸಿ 24 ಗಂಟೆಗಳ ಒಳಗೆ ಶಂಕಿತನನ್ನು ಬಂಧಿಸಿದರು. ಪೆÇಲೀಸರು ಮೊದಲು ಯುವತಿಯನ್ನು ಗುರುತಿಸಿದರು. ಮೊಬೈಲ್ ಮತ್ತು ಸಿಸಿಟಿವಿ ದೃಶ್ಯಗಳಿಂದ ಯುವತಿ ತನ್ನ ಗೆಳೆಯನೊಂದಿಗೆ ಗೋವಾಕ್ಕೆ ಬಂದಿರುವುದು ಸ್ಪಷ್ಟವಾಯಿತು. ಪೆÇಲೀಸರು ಮಂಗಳವಾರ ಹುಬ್ಬಳ್ಳಿಯ ಶಂಕಿತನನ್ನು ಬಂಧಿಸಿದರು. ಆತನ ವಿಚಾರಣೆಯ ಮೂಲಕ, ಕೊಲೆಯಾದ ಯುವತಿಯನ್ನು ರೋಶಿನಿ ಮೋಸೆಸ್ ಎಂ. (22, ಕರ್ನಾಟಕದ ಉತ್ತರ ಬೆಂಗಳೂರು ನಿವಾಸಿ) ಎಂದು ಗುರುತಿಸಲಾಗಿದೆ. ಶಂಕಿತನ ಹೆಸರು ಸಂಜಯ್ ಕೆವಿನ್ ಎಂ. (22, ಕರ್ನಾಟಕದ ಉತ್ತರ ಬೆಂಗಳೂರಿನ ನಿವಾಸಿ).ಎಂದು ಗುರುತಿಸಲಾಗಿದೆ.

 

ಗೋವಾ ಪೆÇಲೀಸರು ನೀಡಿದ ಮಾಹಿತಿಯ ಪ್ರಕಾರ, ಸಂಜಯ್ ಕೆವಿನ್ ಎಂ. ಮತ್ತು ರೋಶಿನಿ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರೂ ಮದುವೆಯಾಗುವ ಉದ್ದೇಶದಿಂದ ಬೆಂಗಳೂರಿನಿಂದ ಬಸ್ ಮೂಲಕ ಗೋವಾಕ್ಕೆ ಬಂದಿದ್ದರು. ಗೋವಾ ತಲುಪಿದ ನಂತರ, ಅವರ ನಡುವೆ ಕೆಲವು ಕಾರಣಗಳ ಬಗ್ಗೆ ಜಗಳವಾಗಿತ್ತು. ತನ್ನ ಪ್ರೇಯಸಿಗೆ ಮತ್ತೊಬ್ಬನೊಂದಿಗೆ ಸಂಬಂಧವಿದೆ ಎಂಬ ಶಂಕೆ ಈತನಿಗಿತ್ತು ಎನ್ನಲಾಗಿದೆ. ಈ ವಾದದಿಂದಾಗಿಯೇ ಸಂಜಯ್ ಕೆವಿನ್ ರೋಶಿನಿಯನ್ನು ಕೊಂದನು ಎನ್ನಲಾಗಿದೆ. ಕೊಲೆಯ ನಂತರ, ಶಂಕಿತ ಸಂಜಯ್ ಗೋವಾದಿಂದ ಪರಾರಿಯಾಗಿದ್ದ. ಹುಬ್ಬಳ್ಳಿಯಲ್ಲಿದ್ದಾನೆ ಎಂದು ತಿಳಿದ ತಕ್ಷಣ, ಅವನನ್ನು ಬೆಳಗಿನ ಜಾವ 3 ಗಂಟೆಗೆ ಹುಬ್ಬಳ್ಳಿಯಿಂದ ಪೋಲಿಸರು ವಶಕ್ಕೆ ಪಡೆದಿದ್ದಾರೆ. ಕೂಲಂಕಷ ವಿಚಾರಣೆಯ ನಂತರ, ಅವನು ಅಪರಾಧವನ್ನು ಒಪ್ಪಿಕೊಂಡನು. ಶಂಕಿತನನ್ನು ಪೆÇಲೀಸರು ಬಂಧಿಸಿದ್ದಾರೆ ಮತ್ತು ಬುಧವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.

 

24 ಗಂಟೆಗಳ ಒಳಗೆ ಪ್ರಕರಣವನ್ನು ಭೇದಿಸಿದ್ದಕ್ಕಾಗಿ ಪೆÇಲೀಸರಿಗೆ ಪ್ರಶಂಸೆ…

ಸೋಮವಾರ ಬೆಳಿಗ್ಗೆ ಗೋವಾದ ಧಾರಾಬಾಂಓಡಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಕತ್ತು ಸೀಳಿದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆಯಾದ ನಂತರ ಭಾರಿ ಗದ್ದಲ ಉಂಟಾಯಿತು. ಕುಳೆ ಮತ್ತು ಫೆÇೀಂಡಾ ಪೆÇಲೀಸರ ತಂಡಗಳು ಸ್ಥಳಕ್ಕೆ ತಲುಪಿ ತನಿಖೆ ಆರಂಭಿಸಿದವು. ಫೆÇೀಂಡಾ ಪೆÇಲೀಸ್ ಇನ್ಸ್‍ಪೆಕ್ಟರ್ ವಿಜಯನಾಥ್ ಕವ್ಲೇಕರ್ ನೇತೃತ್ವದ ಪೆÇಲೀಸ್ ತಂಡವು ಕೇವಲ 24 ಗಂಟೆಗಳಲ್ಲಿ ಅಪರಾಧಿಯನ್ನು ಪತ್ತೆಹಚ್ಚಿ ಕೊಲೆಯನ್ನು ಭೇದಿಸಿದ್ದಕ್ಕಾಗಿ ಎಲ್ಲಡೆಯಿಂದ ಪ್ರಶಂಸೆಗೆ ವ್ಯಕ್ತವಾಗುತ್ತಿದೆ.