ಸುದ್ಧಿಕನ್ನಡ ವಾರ್ತೆ
ಅಂಕೋಲಾ : ತಾಲೂಕಿನ ಖಾಸಗಿ ಶಿಕ್ಷಣ ಸಂಸ್ಥೆಯೊ0ದರಲ್ಲಿ ಕಳ್ಳರು ತಮ್ಮ ಕೈಚಳಕವನ್ನು ತೊರಿಸಿದ್ದು ಯಾವುದೇ ಕುರುಹುಗಳನ್ನು ಬಿಡದೆ ಲಕ್ಷಾಂತರ ರೂಪಾಯಿಗಳನ್ನು ದೊಚಿಕೊಂಡು ಹೊದ ಘಟನೆ ಪಟ್ಟಣ ವ್ಯಾಪ್ತಿಯಲ್ಲಿ ನಡೆದಿದೆ.
ತಾಲೂಕಿನ ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ವಿಶೇಷತೆಯನ್ನು ಹೊಂದಿದ ಪೂರ್ಣಪ್ರಜ್ಞ ಕರುಣಾ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿಯೇ ಕಳ್ಳತನವಾಗಿದೆ. ಕಳ್ಳತನ ನಡೆಸಿದ ಕಳ್ಳರು ಸಿ ಸಿ ಕ್ಯಾಮೆರಾಗಳನ್ನು ನಿಷ್ಕ್ರಿಯಗೊಳಿಸಿ ಕಚೇರಿಯಲ್ಲಿದ್ದ ಸಿಸಿ ಕ್ಯಾಮೆರಾದ ಡಿವಿಆರ್‌ಬಾಕ್ಸ್ ನಾಶಪಡಿಸಿ ಕಳ್ಳತನದ ಮಾಹಿತಿ ಲಭ್ಯವಾಗದಂತೆ ಕಳ್ಳರು ತಮ್ಮ ಕರಾಮತ್ತು ತೋರಿಸಿದ್ದಾರೆ ಪದವಿ ಪೂರ್ವ ಕಾಲೇಜಿನ ಪಕ್ಕದಲ್ಲಿದ್ದ ಪ್ರೀ ಪ್ರೈಮರಿ ಶಾಲೆಯಲ್ಲಿಯು ಕಳ್ಳತನ ನಡೆಸಿದ  ಕಳ್ಳರು ಕಚೇರಿಯ ಒಳ ನುಗ್ಗಿ ಅಲ್ಲಿದ್ದ 18000 ಇನ್ನಿತರ ಮೌಲ್ಯಾಧಾರಿತ ವಸ್ತುಗಳನ್ನು ಅಪಹರಿಸಿ ಯಾವುದೇ ಕುರುಹು ಬಿಡದಂತೆ ಪರಾರಿಯಾಗಿದ್ದಾರೆ. ಕಾಲೇಜು ಹಾಗು ಪ್ರಿ ಪ್ರೈಮರಿ ಸೇರಿ 1,75,000 ದಿಂದ 2ಲಕ್ಷದವರೆಗೆ ನಗದು ಕಳ್ಳತನವಾಗಿರುವ ಬಗ್ಗೆ ಶಿಕ್ಷಣ ಸಂಸ್ಥೆ ದೃಡಪಡಿಸಿದುಡೀ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಮಧ್ಯರಾತ್ರಿ ಕಳ್ಳರ ಕಾರ್ಯಚರಣೆ …
ಬುಧವಾರ ಸಂಜೆ ಶಾಲಾ ಕಾಲೇಜುಗಳನ್ನು ಮುಗಿಸಿ ಸಿಬ್ಬಂದಿಗಳು ಮನೆಗೆ ತೆರಳಿದ್ದರು. ಗುರುವಾರ ಮುಂಜಾನೆ ಎಂದಿನAತೆ ಸಿಬ್ಬಂದಿಗಳು ಬೆಳಿಗ್ಗೆ ಬಂದು ಕಚೇರಿಯ ದ್ವಾರಗಳನ್ನು ತೆರೆದಿದ್ದನ್ನ ನೋಡಿ ಕಳ್ಳತನವಾಗಿದ್ದ ಬಗ್ಗೆ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಿಗೆ ತಿಳಿಸಿದ್ದಾರೆ. ತಕ್ಷಣ ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆಯನ್ನ ನಡೆಸಿದ್ದಾರೆ. ನಂತರ ಸ್ಥಳಕ್ಕೆ ಆಗಮಿಸಿದ ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದ್ದಾರೆ. ಮದ್ಯರಾಥ್ರಿ ಹೊತ್ತಿನಲ್ಲಿ ಈ ಕೃತ್ಯ ನಡೆಸಲಾಗಿದೆ ಎಂದು ತಿಳಿದು ಬಂದಿದ್ದು ಕಳ್ಳರು ಈ ಶಿಕ್ಷಣ ಸಂಸ್ಥೆಗೆ ಸಮಿಪ ಇರುವ ಹೆದ್ದಾರಿ ಮೂಲಕ ಆಗಮಿಸಿ ಅಲ್ಲಿಂದಲೇ ತೆರಳಿದ್ದಾರೆ ಎಂದು ತಿಳಿದುಬಂದಿದೆ.
ಸ್ಥಳೀಯ ಕಳ್ಳರ ಕೈಚಳಕ ಸಾಧ್ಯತೆ
ಕಚೇರಿಯ ಬಾಗಿಲುಗಳನ್ನು ಮುರಿದು ಒಳನುಗ್ಗಿದ್ದಲ್ಲದೆ ಕಬ್ಬಿಣದ ಕಪಾಟುಗಳ ಲಾಕ್ ಕತ್ತರಿಸಿ ಅಲ್ಲಿಯೇ ಇದ್ದ 175000 ಮತ್ತು ಪ್ರಪ್ರೆöÊಮರಿಯಲ್ಲಿದ್ದ 18 ಸಾವಿರ ಕದ್ದೊಯ್ದಿರುವುದು ನೋಡೊದರೆ ಹಲವಾರು ಭಾರಿ ಕಳ್ಳರು ಗಮನಿಸಿ ವ್ಯವಸ್ಥಿತವಾಗಿ ಕಳ್ಳತನವಾಗಿದೆ ಎಂದರೆ ಸ್ಥಳೀಯ ಕಳ್ಳರೆ ಮಾಡಿರಬಹುದೆಂದು ಅಂದಾಜಿಸಲಾಗಿದೆ. ಕಳ್ಳತನದಲ್ಲಿ ಹÀಣವಷ್ಟೆ ಕಳ್ಳತನವಾಗಿದೆಯೋ ಅಥವಾ ಕಡತಗಳು ಯಾವುದಾದರೂ ನಾಪತ್ತೆಯಾಗಿದೆಯೋ ಎನ್ನುವುದು ಹೆಚ್ಚಿನ ತನಿಖೆಯಿಂದ ತಿಳಿದು ಬರಬೇಕಿದೆ. ಈ ಬಗ್ಗೆ ತನಿಖೆ ಚುರುಕುಗೊಳಿಸಿದ ಪೊಲೀಸರಿಗೆ ಮಹತ್ವದ ಸಾಕ್ಷಿಯೊಂದು ದೊರೆತಿದೆ ಎನ್ನಲಾಗಿದ್ದು ಕಳ್ಳರ ಬೇಟೆಗೆ ಮುಂದಾಗಿದ್ದಾರೆ. ಅಂಕೋಲಾ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.