ಸುದ್ಧಿಕನ್ನಡ ವಾರ್ತೆ
Goa: ಉತ್ತರಕನ್ನಡದಿಂದ ಗೋವಾಕ್ಕೆ ಬರುವ ಬಾಳೆಕಾಯಿ ಗಾಡಿ ಟಾರ್ಗೇಟ್ ಮಾಡಿ ಹಣ ದೋಚಿರುವ ಘಟನೆ ಮನಸ್ಸಿಂದ ಮಾಸುವ ಮುನ್ನವೇ ಮತ್ತೆ ಬೇರೊಂದು ನಾಟಕ ರೂಪದಲ್ಲಿ ಬಾಳೆಕಾಯಿ ಗಾಡಿ ದೋಚಲು ಯತ್ನಿಸಿದ ಘಟನೆ ನಡೆದಿದೆ. ಅದೃಷ್ಠವಶಾತ್ ಧರೋಡೆಕೋರರಿಂದ ಹಣ ದೋಚಲು ಸಾಧ್ಯವಾಗಿಲ್ಲ.

ಕಳೆದ ಒಂದು ವಾರದ ಹಿಂದಷ್ಟೇ ಈ ಘಟನೆ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಿಂದ ಗೋವಾದ ಮಡಗಾಂವಗೆ ಬಾಳೆಕಾಯಿ ತುಂಬಿಕೊಂಡು ಬರಲಾಗಿತ್ತು. ಮಡಗಾಂವ ಮಾರುಕಟ್ಟೆಯಲ್ಲಿ ಬಾಳೆಕಾಯಿ ಮಾರಾಟ ಮಾಡಿ ಹಣ ಪಡೆದುಕೊಂಡು ಯಲ್ಲಾಪುರಕ್ಕೆ ವಾಪಸ್ಸಾಗುತ್ತಿದ್ದಾಗ ಯಾರೋ ಅಪರಿಚಿತರು ಮಡಗಾಂವ ಸಿಟಿ ಕಳೆದ ನಂತರ ಎರಡು ಬೈಕ್ ನಲ್ಲಿ ನಾಲ್ಕು ಜನ ಹಿಂಬಾಲಿಸಿ ಬಂದು ಕಾರವಾರಕ್ಕೆ ತುರ್ತಾಗಿ ಹೋಗಬೇಕು ಲಿಪ್ಟ ಕೊಡಿ ಎಂದು ಕೇಳುತ್ತಲೇ ಹಿಂಬಾಲಿಸಿ ಬಂದರು. ಆದರೆ ಭಯಗೊಂಡ ಬಾಳೆಕಾಯಿ ಗಾಡಿ ಡ್ರೈವರ್ ವಾಹನ ನಿಲ್ಲಿಸಲಿಲ್ಲ. ವಾಹನ ನಿಲ್ಲಿಸದಿದ್ದರೂ ಕೂಡ ಅದೇ ನೆಪ ಮಾಡಿಕೊಂಡು ಸುಮಾರು ಹತ್ತು ಕಿಲೋಮೀಟರ್ ವರೆಗೂ ಹಿಂಬಾಲಿಸುತ್ತಲೇ ಬಂದರು. ನನಗೆ ಸ್ವಲ್ಪ ಕೆಲಸ ಇದೆ ಕಾಣಕೋಣ ಪೋಲಿಸ್ ಠಾಣೆಯಲ್ಲಿ ಸ್ವಲ್ಪ ಕೆಲಸವಿದೆ ಅಲ್ಲಿ ತಡವಾಗುತ್ತದೆ ಎಂದು ಕೂಗಿ ಹೇಳಿದಾಗ ಹಿಂಬಾಲಿಸುತ್ತಿದ್ದ ಧರೋಡೆಕೋರರು ಪರಾರಿಯಾದರು ಎಂದು ಬಾಳೆಕಾಯಿ ಗಾಡಿ ಡ್ರೈವರ್ ಮಾಹಿತಿ ನೀಡಿದ್ದಾರೆ.

ಕಳೆದ ಎರಡು ತಿಂಗಳ ಹಿಂದೆ ಯಲ್ಲಾಪುರದಿಂದ ಗೋವಾಕ್ಕೆ ಬಂದಿದ್ದ ಬಾಳೆಕಾಯಿ ಗಾಡಿ ಯಲ್ಲಾಪುರಕ್ಕೆ ವಾಪಸ್ಸಾಗುವಾಗ ಮಡಗಾಂವ ಸಮೀಪವೇ ಪೋಲಿಸರಂತೆ ಬಂದು ಅಡ್ಡಗಟ್ಟಿ ಕಾಗದಪತ್ರ ಪರಿಶೀಲಿಸುವ ನೆಪದಲ್ಲಿ ವಾಹನ ಚಾಲಕನ ಬಳಿ ಇದ್ದ ಬಾಳೆಕಾಯಿ ಮಾರಿದ ಹಣವನ್ನು ದೋಚಿದ್ದರು. ಇಂತಹ ಘಟನೆ ಹಲಲು ಬಾರಿ ನಡೆದಿದೆ. ಇದರಿಂದಾಗಿ ಗೋವಾಕ್ಕೆ ಬಾಳೆಕಾಯಿ ತುಂಬಿಕೊಂಡು ಬರಲು ಭಯಪಡುವಂತಾಗಿದೆ ಎಂದು ಯಲ್ಲಾಪುರದ ಬಾಳೆಕಾಯಿ ಗಾಡಿ ಚಾಲಕ ನಾಗರಾಜ್ ರವರು ಬೇಸರ ವ್ಯಕ್ತಪಡಿಸಿದ್ದಾರೆ.

ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ,ಶಿರಸಿ ಭಾಗದಿಂದ ಗೋವಾಕ್ಕೆ ಪ್ರತಿದಿನ ಹಲವು ಜೀಪ್ ಗಳಲ್ಲಿ ಬಾಳೆ ಕಾಯಿ ತುಂಬಿಕೊಂಡು ಮಾರುಕಟ್ಟೆಗೆ ಬರಲಾಗುತ್ತದೆ. ಪ್ರತಿದಿನ ನಾಲ್ಕಾರು ವಾಹನಗಳಲ್ಲಿ ಬಾಳೆಕಾಯಿ ತುಂಬಿಕೊಂಡು ಬರಲಾಗುತ್ತದೆ. ಆದರೆ ಈ ಬಾಳೆಕಾಯಿ ಗಾಡಿಯನ್ನೇ ಗೋವಾದಲ್ಲಿ ಕೆಲವರು ಟಾರ್ಗೇಟ್ ಮಾಡಿ ಅವರಲ್ಲಿರುವ ಹಣ ದೋಚುತ್ತಿರುವ ಘಟನೆ ಆತಂಕಕ್ಕೆ ಕಾರಣವಾಗಿದೆ.