ಸುದ್ದಿ ಕನ್ನಡ ವಾರ್ತೆ
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿ ನಿನ್ನೆಯ ದಿನ ಒಂದೇ ಗಂಟೆಯಲ್ಲಿ ಜಲಾವೃತಾದ ಪಟ್ಟಣ.
ಮಳೆ ಆರ್ಭಟಕ್ಕೆ ಬೆಚ್ಚಿಬಿದ್ದ ಕುಡಚಿ ಪಟ್ಟಣದ ನಿವಾಸಿಗಳು
ನಿನ್ನೆ ಸಾಯಂಕಾಲ ಸುರಿದ ಭೀಕರ ಮಳೆಗೆ ಜನ ಹೈರಾಣು
ನದಿಯಂತೆ ಹರಿದು ಬಂದ ಮಳೆ ನೀರು ಅಲ್ಲೋಲ ಕಲ್ಲೋಲ ವಾದ ಜನ ಜೀವನ .
ಹಳ್ಳಕೊಳ್ಳದಿಂದ ರಸ್ತೆಯ ಮೇಲೆ ಹರಿದು ಬಂದು ಅಪಾರ ಪ್ರಮಾಣದ ಮಳೆ ನೀರು.
ಅಪಾರ ಪ್ರಮಾಣದಲ್ಲಿ ಹರಿದು ಬಂದ ಮಳೆ ನೀರಿನ ಸೆಳೆತಕ್ಕೆ ಕೊಚ್ಚಿ ಹೋಗುತ್ತಿದ್ದ ಜಾನುವಾರುಗಳು.
ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನುಗ್ಗಿದ ಮಳೆ ನೀರು ಮನೆಯಲ್ಲಿ ಇರವ ದವಸ ಧಾನ್ಯಗಳನ್ನು ನಿರು ಪಾಲು ಕುಟುಂಬಸ್ಥರ ಪರದಾಟ.
ಎರಡು ಗಂಟೆಗೂ ಅಧಿಕ ಸಮಯದಲ್ಲಿ ಸುರಿದ ಭೀಕರ ಮಳೆಗೆ ಜನ ಜೀವನ ಸಂಪೂರ್ಣ ಅಸ್ತವ್ಯಸ್ತ.
ಹೊಲ ಗದ್ದೆಗಳಲ್ಲಿ ತುಂಬಿದ ನೀರು ಹೋಲ ಗದ್ದೆಗಳಿಂದ ರಸ್ತೆಗೆ ಹರಿದು ಬಂದ ಮಳೆ ನೀರು.
ಮಳೆ ನೀರಿಗೆ ಪಟ್ಟಣದ ರಸ್ತೆ ಹಾಗೂ ಚರಂಡಿಗಳೆಲ್ಲ ತುಂಬಿ ಪಟ್ಟಣ ಸಂಪೂರ್ಣ ಜಲಾವೃತ.
ಇತ್ತ ರಸ್ತೆ ಕಾಣಿಸದೆ ಪರದಾಡಿದ ವಾಹನ ಸವಾರರು.ಜಲಪಾತದಂತೆ ತುಂಬಿ ಹರಿದ ರಸ್ತೆ ಬ್ರಿಡ್ಜ್ ಗಳು.
ಕುಡಚಿ- ಚಿಂಚಲಿ ಮಧ್ಯದ ರಸ್ತೆ ಸಂಚಾರ ಎರಡು ಗಂಟೆಗಳ ವರಗೆ ಬಂದ್ ಆಗಿ ಪ್ರಯಾಣಿಕರ ಪರದಾಟ.
ಅಪಾಯದ ಮಟ್ಟ ಮಿರಿ ಹರಯುತ್ತಿರುವದನ್ನು ಲೆಕ್ಕಿಸದೆ ರಸ್ತೆ ಬ್ರಿಡ್ಜ್ ದಾಟುವ ಹುಚ್ಚು ಸಾಹಸ ಮಾಡುತ್ತಿರುವ ವಾಹನ ಸವಾರರು.
ಪಟ್ಟಣದ ರೈಲು ನಿಲ್ದಾಣದಲ್ಲಿಯೂ ಹಳಿ ತುಂಬಿ ನಿಂತ ಮಳೆ ನೀರು.
ಮಳೆ ಅವಾಂತರಕ್ಕೆ ಪಟ್ಟಣದಲ್ಲಿ ಅಪಾರ ಪ್ರಮಾಣದ ಹಾನಿ.