ಸುದ್ದಿಕನ್ನಡ ವಾರ್ತೆ
ಪಣಜಿ: ಗೋವಾದ ಗೋವಾದ ಬಿಚೋಲಿ ಆರೋಗ್ಯ ಕೇಂದ್ರದ ಪ್ರವೇಶದ್ವಾರದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಪ್ರವೇಶವಿಲ್ಲ (No Entry For media Person) ಎಂಬ ನಾಮಫಲಕ ಹಾಕಲಾಗಿರುವುದು ಪತ್ರಕರ್ತರಿಂದ ಬೇಸರ ವ್ಯಕ್ತವಾಗಿದೆ. ಗೋವಾ ಮೆಡಿಕಲ್ ಕಾಲೇಜಿನಲ್ಲಿ ನಡೆದ ಘಟನೆಯ ನಂತರ ಈ ರೀತಿಯ ನಾಮಫಲಕ ಹಾಕಲಾಗಿದ್ದರೂ ಕೂಡ ಸಾರ್ವಜನಿಕ ಆರೋಗ್ಯ ಸಂಸ್ಥೆಯಲ್ಲಿ ಇಂತಹ ನಾಮಫಲಕ ಹಾಕಿರುವುದಕ್ಕೆ ಪತ್ರಕರ್ತರಲ್ಲಿ ಬೇಸರ ವ್ಯಕ್ತವಾಗಿದೆ.
ಆರೋಗ್ಯ ಸಂಸ್ಥೆಗಳಲ್ಲಿ ಪಾರದರ್ಶಕತೆ ಅಗತ್ಯವಿರುವ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ನಿರ್ಬಂಧ ಹೇರಿರುವುದು ತಪ್ಪು ಎಂದು ರಾಜ್ಯ ಪತ್ರಕರ್ತ ಸಂಘಟನೆ ಅಭಿಪ್ರಾಯಪಟ್ಟಿದೆ. ಆರೋಗ್ಯ ಸೇವೆಗೆ ಸಂಬಧಿಸಿದ ಮಾಹಿತಿಯನ್ನು ಜನತೆಯ ವರೆಗೆ ತಲುಪಿಸುವಲ್ಲಿ ಮಾಧ್ಯಮಗಳ ಪಾತ್ರ ಮಹತ್ವದ್ದಾಗಿರುತ್ತದೆ. ಆಸ್ಪತ್ರೆಗಳಲ್ಲಿ ಮತ್ತು ಆರೋಗ್ಯ ಕೇಂದ್ರಗಳಲ್ಲಿ ನಡೆದ ಘಟನೆಯನ್ನು ಜನತೆಯ ಬಳಿಗೆ ತಲುಪಿಸಲು ಮಾಧ್ಯಮಗಳನ್ನು ತಡೆಯುವುದು ಸರಿಯಲ್ಲ ಎಂದು ಪತ್ರಕರ್ತರು ಅಭಿಪ್ರಾಯಪಟ್ಟಿದ್ದಾರೆ.
ಆದರೆ ಆಸ್ಪತ್ರೆಗಳಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ನಿರ್ಬಂಧ ಹೇರಿರುವುದಕ್ಕೆ ಪತ್ರಕರ್ತರ ಸಂಘಟನೆಯಿಂದ ವಿರೋಧ ವ್ಯಕ್ತವಾಗುವ ಸಾಧ್ಯತೆಯಿದೆ.