ಸುದ್ದಿಕನ್ನಡ ವಾರ್ತೆ
ಪಣಜಿ: ಗೋವಾ ಮತ್ತು ಹೈದರಾಬಾದ್ ನಡುವೆ ನಡೆಯುತ್ತಿದ್ದ ಪ್ರಮುಖ ಮಾದಕವಸ್ತು ಕಳ್ಳಸಾಗಣೆ ಮತ್ತು ಹವಾಲಾ ದಂಧೆಯನ್ನು ಭೇದಿಸಲಾಗಿದೆ. ತೆಲಂಗಾಣದ ಮಾದಕವಸ್ತು ವಿರೋಧಿ ಬ್ಯೂರೋ ಮತ್ತು ಗೋವಾ ಪೆÇಲೀಸರ ಅಪರಾಧ ವಿಭಾಗ ಜಂಟಿಯಾಗಿ ಈ ಕಾರ್ಯಾಚರಣೆಯನ್ನು ನಡೆಸಿವೆ. ದಾಳಿಯ ಸಮಯದಲ್ಲಿ, ವಾಷಿಂಗ್ ಮೆಷಿನ್‍ನಿಂದ 49.65 ಲಕ್ಷ ರೂ. ಮೌಲ್ಯದ ಹಣವನ್ನು ವಶಪಡಿಸಿಕೊಳ್ಳಲಾಗಿದೆ.

ನೈಜೀರಿಯಾ ಪ್ರಜೆಯಿಂದ ಪಡೆದ ಮಾಹಿತಿ
ನೈಜೀರಿಯಾ ಪ್ರಜೆ ಎಮ್ಯಾನುಯೆಲ್ ಬೆಡಿಯಾಕೊ ಅಲಿಯಾಸ್ ಮ್ಯಾಕ್ಸ್‍ವೆಲ್‍ನನ್ನು ಹೈದರಾಬಾದ್‍ನಲ್ಲಿ ಬಂಧಿಸಲಾಗಿದೆ. ಅವರಿಂದ 1.25 ಕೋಟಿ ರೂ. ಮೌಲ್ಯದ ಕೊಕೇನ್ ಮತ್ತು ಎಂಡಿಎಂಎಸ್‍ನಂತಹ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈತ 2013 ರಿಂದ ಭಾರತಕ್ಕೆ ಬರುತ್ತಿದ್ದ. ಗೋವಾದಲ್ಲಿ ಅನೇಕ ಜನರೊಂದಿಗೆ ಸಂಪರ್ಕ ಹೊಂದಿದ್ದ ಮತ್ತು ‘ಸೆಲೆಬ್ರಿಟಿ ಕೊಕೇನ್’ ಎಂದು ಕರೆಯಲ್ಪಡುವ ದುಬಾರಿ ಮಾದಕವಸ್ತುಗಳನ್ನು ಮಾರಾಟ ಮಾಡುತ್ತಿದ್ದ.

ಗೋವಾದಿಂದ ಹೈದರಾಬಾದ್, ಬೆಂಗಳೂರು, ಕೇರಳಕ್ಕೆ ಮಾದಕವಸ್ತುಗಳನ್ನು ಕಳುಹಿಸಲಾಗುತ್ತಿತ್ತು…?
ಗೋವಾದಿಂದ ಹೈದರಾಬಾದ್, ಬೆಂಗಳೂರು ಮತ್ತು ಕೇರಳಕ್ಕೆ ಮಾದಕವಸ್ತುಗಳನ್ನು ಕಳುಹಿಸಲಾಗುತ್ತಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಇದಕ್ಕಾಗಿ, ಪರ್ರಾ, ಕಲಂಗುಟ್, ಶಿವೊಲಿ ಮತ್ತು ಹಣಜುನ್ ಪ್ರದೇಶಗಳಲ್ಲಿ ವಾಸಿಸುವ ನೈಜೀರಿಯನ್ ಪ್ರಜೆಗಳನ್ನು ಬಳಸಲಾಗುತ್ತಿತ್ತು. ಈ ಜನರು ಗೋವಾದಲ್ಲಿ ವಾಸಿಸುತ್ತಿದ್ದರು. ಮಾದಕವಸ್ತುಗಳನ್ನು ಪ್ಯಾಕ್ ಮಾಡಿ ಕೊರಿಯರ್ ಅಥವಾ ಇತರ ವಿಧಾನಗಳ ಮೂಲಕ ಗ್ರಾಹಕರಿಗೆ ತಲುಪಿಸಲಾಗುತ್ತಿತ್ತು. ಪೆÇಲೀಸರು 40 ಗ್ರಾಹಕರ ಪಟ್ಟಿಯನ್ನು ಸಹ ಪಡೆದುಕೊಂಡಿದ್ದಾರೆ.

ಹವಾಲಾ ಏಜೆಂಟ್ ಬಂಧನ
ಈ ಪ್ರಕರಣದಲ್ಲಿ, ಸಂಗೀತ ಮೊಬೈಲ್ ಶಾಪ್ ನ ಮಾಲೀಕ ಉತ್ತಮ್ ಸಿಂಗ್ ನನ್ನು ಬಂಧಿಸಲಾಗಿದೆ. ವಿದೇಶಗಳಲ್ಲಿ, ವಿಶೇಷವಾಗಿ ನೈಜೀರಿಯಾಕ್ಕೆ ಮಾದಕವಸ್ತು ಮಾರಾಟದಿಂದ ಸಂಗ್ರಹಿಸಿದ ಹಣವನ್ನು ಹವಾಲಾ ಮೂಲಕ ಕಳುಹಿಸುವ ಕೆಲಸ ಮಾಡುತ್ತಿದ್ದ. ಕೇವಲ ಎರಡು ದಿನಗಳಲ್ಲಿ ಅವರು 50 ಲಕ್ಷ ರೂಪಾಯಿ ನಗದು ಸಂಗ್ರಹಿಸಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ.

ಕಳೆದ ತಿಂಗಳಲ್ಲಿ ನಾಲ್ವರು ನೈಜೀರಿಯನ್ ಪ್ರಜೆಗಳನ್ನು ಗೋವಾದಲ್ಲಿ ಬಂಧಿಸಲಾಗಿದ್ದು, ಭಾರತದಲ್ಲಿನ ಹವಾಲಾ ಜಾಲ ಮತ್ತು ಅಂತರರಾಷ್ಟ್ರೀಯ ಮಾದಕವಸ್ತು ಮಾಫಿಯಾ ನಡುವಿನ ಸಂಪರ್ಕವನ್ನು ಬಹಿರಂಗಪಡಿಸಲಾಗಿದೆ. ಉತ್ತಮ್ ಸಿಂಗ್ ಮೇಲೆ ಕಣ್ಣಿಟ್ಟಿರುವ ಪೆÇಲೀಸರು ಜೂನ್ 4 ರಂದು ದಾಳಿ ನಡೆಸಿ ಹಣವನ್ನು ವಶಪಡಿಸಿಕೊಂಡಿದ್ದಾರೆ. ಗೋವಾದ ಮಾಪ್ಸಾ ಬಳಿಯ ಹೈಲ್ಯಾಂಡ್ ಪಾರ್ಕ್ ಕಟ್ಟಡದಲ್ಲಿರುವ ಫ್ಲಾಟ್‍ನಲ್ಲಿರುವ ವಾಷಿಂಗ್ ಮೆಷಿನ್‍ನಲ್ಲಿ ಈ ಹಣವನ್ನು ಮರೆಮಾಡಲಾಗಿದೆ. ಟಿಜಿಎಎನ್ ಬಿ ಮುಖ್ಯಸ್ಥ ಸಂದೀಪ್ ಶಾಂಡಿಲ್ಯ ಮಾತನಾಡಿ, ನಮ್ಮ ಕಾರ್ಯಾಚರಣೆ ಕೇವಲ ಒಂದು ಗಂಟೆ ವಿಳಂಬವಾಗಿದ್ದರೆ, ಈ ಮೊತ್ತ ನೈಜೀರಿಯಾ ತಲುಪುತ್ತಿತ್ತು ಎಂದಿದ್ದಾರೆ.

ವಾಟ್ಸಾಪ್ ಮೂಲಕ ಹವಾಲಾ ಕಾರ್ಯಾಚರಣೆ…
ನೈಜೀರಿಯಾದ ಗ್ಯಾಂಗ್ ಹವಾಲಾ ಮೂಲಕ ಹಣವನ್ನು ಕಳುಹಿಸಲು ವಿಶಿಷ್ಟ ವಿಧಾನವನ್ನು ಬಳಸಿದೆ. 5, 10, 20 ರೂಪಾಯಿ ನೋಟುಗಳ ಫೆÇೀಟೋಗಳನ್ನು ವಾಟ್ಸಾಪ್‍ನಲ್ಲಿ ಕಳುಹಿಸಲಾಗಿದೆ. ಅದರಂತೆ, ಏಜೆಂಟರು ಆ ನೋಟುಗಳನ್ನು ತೋರಿಸಿ ಹಣವನ್ನು ಸಂಗ್ರಹಿಸಿದರು. ಈ ರೀತಿ 150 ಕ್ಕೂ ಹೆಚ್ಚು ವಹಿವಾಟುಗಳನ್ನು ನಡೆಸಲಾಗಿದ್ದು, ಒಂದು ವರ್ಷದಲ್ಲಿ ಸುಮಾರು 100 ಮಿಲಿಯನ್ ನೈಜೀರಿಯನ್ ನೈರಾವನ್ನು ವಿದೇಶಕ್ಕೆ ಕಳುಹಿಸಲಾಗಿದೆ ಎಂಬ ಮಾಹಿತಿ ಬಹಿರಂಗವಾಗಿದೆ.

ಹವಾಲಾ ವಹಿವಾಟಿನ ಮಾಸ್ಟರ್ ಮೈಂಡ್ ಯಾರು?
ಹವಾಲಾ ವಹಿವಾಟಿನ ಹಿಂದಿನ ಪ್ರಮುಖ ಕೊಡುಗೆದಾರರು ಉತ್ತಮ್ ಸಿಂಗ್, ರಾಜು ಸಿಂಗ್ ಮತ್ತು ಮಹೇಂದ್ರ ಅಲಿಯಾಸ್ ಬಾಬಿ ಎಂದು ತನಿಖೆಯಿಂದ ತಿಳಿದುಬಂದಿದೆ. ಅವರು ಕೇವಲ ಎರಡು ದಿನಗಳಲ್ಲಿ 50 ಲಕ್ಷ ಸಂಗ್ರಹಿಸಿದ್ದಾರೆ ಎಂಬುದಕ್ಕೆ ಪುರಾವೆಗಳು ಸಿಕ್ಕಿವೆ. ಈ ಎಲ್ಲಾ ಪ್ರಕರಣಗಳ ತನಿಖೆ ಇನ್ನೂ ಮುಂದುವರೆದಿದೆ ಮತ್ತು ಪೆÇಲೀಸರ ಪ್ರಕಾರ, ಇಂತಹ ಡ್ರಗ್ಸ್ ಮತ್ತು ಹವಾಲಾ ಜಾಲಗಳು ಭಾರತದ ಅನೇಕ ಸ್ಥಳಗಳಲ್ಲಿ ಸಕ್ರಿಯವಾಗಿವೆ. ಇನ್ನೂ ಹೆಚ್ಚಿನ ಆರೋಪಿಗಳ ಹೆಸರುಗಳು ಮುನ್ನೆಲೆಗೆ ಬರುವ ಸಾಧ್ಯತೆಯಿದೆ. ಹೆಚ್ಚಿನ ತನಿಖೆಗಾಗಿ ಟಿಜಿಎಎನ್ ಬಿ ತಂಡ ದೆಹಲಿಗೆ ತೆರಳಿದೆ.