ಸುದ್ದಿ ಕನ್ನಡ ವಾರ್ತೆ

ಶಿರಸಿ: ಜನರ ಜೊತೆಗಿನ ಒಡನಾಟವೇ ಅತ್ಯಂತ ಖುಷಿ, ಜನರ ಭಾವನೆಗೆ ಸ್ಪಂದಿಸುವ ಅವಕಾಶ ಲಭ್ಯ ಆಗುತ್ತಿರುವದು ಶಕ್ತಿ ಕೊಟ್ಟಿದೆ. ಜನರ ಧ್ವನಿಯಾಗಿ ಕೆಲಸ ಮಾಡುವ ಅವಕಾಶ ಲಭಿಸಿದೆ. ದಿನದ ರಿಪೋರ್ಟ ಕಾರ್ಡ ಜನರೆದುರು ಇದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಸಂಸದರಾಗಿ ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಬುಧವಾರ ಮಾರಿಕಾಂಬಾ ದೇವಿಗೆ ಪೂಜೆ ಸಲ್ಲಿಸಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಪಕ್ಷದ ಸಂಘಟನೆಯ ಚಟುವಟಿಕೆಯಲ್ಲಿ ಭಾಗವಹಿಸಿದ್ದೇನೆ. ಜನತೆಗೆ ಪ್ರತಿ ದಿನದ ಮಾಹಿತಿ ನೀಡುತ್ತ ಪಾರದರ್ಶಕ, ವಿಶ್ವಾಸ ಪೂರ್ಣ ಚಟುವಟಿಕೆ ಕಾರ್ಯ ಮಾಡಿದ್ದೇನೆ. ಅಧಿಕಾರಿಗಳು, ಕೇಂದ್ರದ ಸಚಿವರು ಕೂಡ ಸ್ಪಂದಿಸಿದ್ದಾರೆ. ರೈಲ್ವೆ ಯೋಜನೆಗೂ ಆದ್ಯತೆ ನೀಡಿದ್ದೇನೆ ಎಂದರು.

ಹಿಂದಿನಿಂದ ಇದ್ದ ರೈಲ್ವೆ ‌ಕನಸು ಈಡೇರಲಿದೆ. ಅಂಕೋಲಾ ಹುಬ್ಬಳ್ಳಿ ರೈಲು ಮಾರ್ಗದ ಕುರಿತು ರೈಲ್ವೆ ಬೋರ್ಡಗೆ ಡಿಪಿಆರ್ ಈಗ ಕಳಿಸಲಾಗಿದೆ. ತಾಳಗುಪ್ಪ ಹುಬ್ಬಳ್ಳಿ ಅಂತಿಮ ಸರ್ವೆ ಮಾಡಲಾಗುತ್ತಿದೆ. ಧಾರವಾಡ ಕಿತ್ತೂರು ಬೆಳಗಾವಿ ಮಾರ್ಗದ ಸಭೆ ಕೂಡ ನಡೆದಿದೆ. ಭೂಸ್ವಾಧೀನ ನಡೆದಿದೆ. ಎಂದರು‌.

ರಾಷ್ಟ್ರೀಯ ಹೆದ್ದಾರಿಯ ಭಟಕಳ ಕಾರವಾರ ತನಕದ ಸಮಸ್ಯೆಯನ್ನು ಸ್ಥಳದಲ್ಲಿ ಇದ್ದು ಬಗೆ ಹರಿಸುವ ಪ್ರಯತ್ನ ಮಾಡಿದ್ದೇನೆ. ಮೂರು ಕಡೆ ಅಂಡರಪಾಸ್ ಮಾಡಲಾಗಿದೆ. ಎರಡು ಸೇತುವೆ ಆಗುತ್ತಿದೆ. ಪೂರ್ಣವಾಗಲು ಅವಕಾಶ ಬೇಕಾಗುತ್ತದೆ ಎಂದರು.
ಹನ್ನೊಂದು ವರ್ಷದ ಮೋದಿ ಸರಕಾರದ ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದ ಜೂನ್ ೯ರಿಂದ ೨೧ರ ತನಕ ಸಂಕಲ್ಪ‌ಸೇ ಸಿದ್ಧಿ ಅಭಿಯಾನ ಪಂಚಾಯತ ತನಕ ನಡೆಯಲಿದೆ. ಉಳಿದ ಅಭಿವೃದ್ದಿ ಕಾರ್ಯ ಮಾಡಲಾಗುತ್ತಿದೆ. ಕುಮಟಾ ಶಿರಸಿ ಮಾರ್ಗದಲ್ಲಿ ಕೂಡ ಸಮಸ್ಯೆ ಇದ್ದೇ ಇದೆ. ಅದರ ಮಾಧ್ಯದಲ್ಲಿ ಒಳ್ಳೇದು ಮಾಡುವ ಕಾರ್ಯ ನಡೆದಿದೆ. ಶಿರಸಿ ಹಾವೇರಿ ಮಾರ್ಗದ ಅರಣ್ಯ ಅನುಮತಿ‌ ಕೂಡ ಸಿಕ್ಕಿದೆ‌ ಎಂದರು.
ಅತಿ ಹೆಚ್ಚು ಮತಗಳನ್ನು ಕೊಟ್ಟು ಜವಬ್ದಾರಿ ಹೆಚ್ಚಿಸಿದ ಮತದಾರರು ನೀಡಿದ್ದಾರೆ. ನನ್ನ ಜವಬ್ದಾರಿ ಜೊತೆಗೆ ಅಧಿಕಾರಿಗಳ ಜವಬ್ದಾರಿ ಕೂಡ ಇದೆ ಎಂದ‌ ಕಾಗೇರಿ, ಭಾರತ್ ಸಂಚಾರ ನಿಮಗದ ೨ಜಿಯಿಂದ ೪ಜಿ ೧೫೦ ಟವರಗೆ ಆಗಿದೆ. ೨೫೦ ಮಂಜೂರಾದ ಟವರಿನಲ್ಲಿ ೭೫ ಟವರ್ ಆರಂಭಿಸಲಾಗಿದೆ. ನೂರಕ್ಕೆ ಅರಣ್ಯ ಅನುಮತಿ ಬೇಕಿದೆ. ಹಳೆ ಟವರಿಗೆ ಬ್ಯಾಟರಿ ಸಮಸ್ಯೆ ಬಗೆಹರಿಸಲು ೫೦ ಬ್ಯಾಟರಿ ಬದಲಾವಣೆಗೆ ಬಂದಿದೆ. ಕರೆಂಟ್ ಹೋದರೆ ಸಿಗ್ನಲ್‌ ಸಮಸ್ಯೆ ಬಗೆಹರಿಸಲಾಗುತ್ತಿದೆ. ಗೋಕರ್ಣ, ಬನವಾಸಿ ಅಭಿವೃದ್ದಿಗೆ ಆದ್ಯತೆ, ಶಿರೂರು ಗುಡ್ಡ ಕುಸಿತದಲ್ಲಿ‌ ನೊಂದವರಿಗೂ ಬೇಕು. ಡಬಲ್ ಇಂಜಿನ್ ಸರಕಾದ ಇದ್ದಿದ್ದರೆ ಇನ್ನಷ್ಟು ಅಭಿವೃದ್ದಿಗೆ ವೇಗ ಸಿಗುತ್ತಿತ್ತು ಎಂದರು.
ಬಿಜೆಪಿ ಜಿಲ್ಲಾ ಅಧ್ಯಕ್ಷ ಎನ್.ಎಸ್.ಹೆಗಡೆ ಕರ್ಕಿ ಮಾತನಾಡಿ, ಕೆಳ ಸ್ಥರದ ಸಂಘನೆಯಿಂದ ಬಂದ ಸಂಸದ ವಿಶ್ವೇಶ್ವರ ಹೆಗಡೆ ಅವರು ಶಾಸಕರಾಗಿ, ಸಂಸದರಾಗಿ, ಸ್ಪೀಕರ್ ಆಗಿ, ಸಚಿವರಾಗಿ ಮಾದರಿ, ಮೇಲ್ಪಂಕ್ತಿಯ ಕಾರ್ಯ ಮಾಡಿದ್ದಾರೆ. ಸಂಸದರಾಗಿ ವರ್ಷ ಪೂರೈಸಿದ ಕಾಗೇರಿ ಅವರು ಸಂಸದರ ಕಾರ್ಯಕ್ಷೇತ್ರದಲ್ಲಿ ಅನುಪಮ ಕಾರ್ಯ ಮಾಡುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ, ಬಿಸ್ಸೆನ್ನೆಲ್, ಬೆಳೆ ವಿಮೆ ಸೇರಿದಂತೆ‌ ಜನಪರ ಕಾಳಜಿಯ ಕಾರ್ಯ ಮಾಡಿದ್ದಾರೆ ಎಂದು ಹೇಳಿದರು.

ಈ ವೇಳೆ ಪ್ರಮುಖರಾದ ಆನಂದ ಸಾಲೇರ, ಆರ್.ಡಿ.ಜಾನ್ಮನೆ, ಗುರುಪ್ರಸಾದ ಹೆಗಡೆ, ಉಷಾ ಹೆಗಡೆ, ಶರ್ಮಿಳಾ‌ ಮಾದನಗೇರಿ, ಪ್ರಶಾಂತ‌ ನಾಯ್ಕ, ರಮಾಕಾಂತ ನಾಯ್ಕ, ಸುಬ್ರಾಯ ದೇವಡಿಗ, ನಾಗರಾಜ ನಾಯ್ಕ, ಮಾಲತೇಶ ಹಾದಿಮನೆ, ಗಣಪತಿ ನಾಯ್ಕ ಇತರರು ಇದ್ದರು.

ಕೊಂಕಣ ರೈಲ್ವೆಯ ಅಭಿವೃದ್ಧಿಯ ವೇಗ ಇನ್ನೆರಡು ವರ್ಷದಲ್ಲಿ ಆಗಲಿದೆ. ನಿಗಮ ಇರುವದರಿಂದ ನಿರ್ಲಕ್ಷ್ಯ ಆಗುತ್ತಿತ್ತು. ಪ್ಲಾಟ್ ಫಾರಂ ಸಮಸ್ಯೆ ಜೊತೆಗೆ ಭೂ ಪರಿಹಾರ, ಉದ್ಯೋಗ ನೀಡದಿರುವದೂ ಇದೆ. ಒಟ್ಟಾರೆ ಅಭಿವೃದ್ದಿಯ ಹೊಸ ಶೆಖೆ ಆರಂಭವಾಗಲಿದೆ.
ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದ