ಸುದ್ದಿ ಕನ್ನಡ ವಾರ್ತೆ

ಸಿಂಧನೂರು: ಬೆಂಬಲ ಬೆಲೆ ಯೋಜನೆಯಡಿ ನೋಂದಣಿಯಾದ ರೈತರ ಜೋಳ ಖರೀದಿಸಲು ಸರಕಾರ ಹಿಂದೇಟು ಹಾಕಿದ್ದರಿಂದ ಹೋರಾಟ ಮುಂದುವರಿದಿದ್ದು, ರೈತರು ಶನಿವಾರ ಅರೆಬೆತ್ತಲೆ ಹೋರಾಟ ನಡೆಸಿದರು.

ನಗರದ ಮಹಾತ್ಮಗಾಂಧಿ ವೃತ್ತದಲ್ಲಿ ಸಂಜೆಯ ವೇಳೆಗೆ ವಾಹನ ಸಂಚಾರ ತಡೆದು ಪ್ರತಿಭಟನೆ ನಡೆಸಿದರು. ಈ ವೇಳೆ ಮೈಮೇಲಿನ ಅಂಗಿ- ಬನೀಯನ್ ಬಿಚ್ಚಿ ಪ್ರತಿಭಟನೆ ಆರಂಬಿಸಿದರು. ರೈತರ ಹೋರಾಟ ತೀವ್ರಗೊಂಡ ಕಾರಣ ಒಂದು ತಾಸಿಗೂ ಹೆಚ್ಚು ಕಾಲ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು. ಕಲುಬರುಗಿ- ಬಳ್ಳಾರಿ, ಸಿಂಧನೂರು- ಹುಬ್ಬಳ್ಳಿ, ಸಿಂಧನೂರು- ರಾಯಚೂರು ಮಾರ್ಗದ ಬಸ್ ಗಳಿಗೆ ತಡೆ ಒಡ್ಡಿದ್ದರಿಂದ ಪ್ರಯಾಣಿಕರು ತೊಂದರೆ ಅನುಭವಿಸುವಂತಾಯಿತು.