ಸುದ್ದಿ ಕನ್ನಡ ವಾರ್ತೆ
ರಬಕವಿ-ಬನಹಟ್ಟಿ; ಮಹಾರಾಷ್ಟ್ರದ ವಿವಿಧ ಪ್ರದೇಶಗಳಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಮತ್ತು ಬೇರೆ ಬೇರೆ ಜಲಾಶಯಗಳಿಂದ ಕೃಷ್ಣಾಡ ನದಿಗೆ ನೀರು ಬಿಡುತ್ತಿರುವ ಹಿನ್ನೆಲೆಯಲ್ಲಿ ಸಮೀಪದ ಕೃಷ್ಣಾ ನದಿಗೆ ಮಂಗಳವಾರ ೩೩ ಸಾವಿರ ಕ್ಯೂಸೆಕ್ ಒಳ ಹರಿವು ಇದ್ದು, ನದಿಗೆ ಬಂದಷ್ಟೆ ನೀರಿನ ಹೊರ ಹರಿವು ಕೂಡಾ ಇದೆ ಎಂದು ಜಮಖಂಡಿ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ತಿಳಿಸಿದರು.
ಜಲಾಶಯದಲ್ಲಿ ಸದ್ಯ ನೀರಿನ ಮಟ್ಟವು ೫೨೨.೧೫ ಮೀಟರ್ ಇದ್ದು ಬ್ಯಾರೇಜ್ ಗರಿಷ್ಠ ಮಟ್ಟವು ೫೨೪.೮೭ ಮೀಟರ್ ಇದೆ. ಬ್ಯಾರೇಜನಲ್ಲಿ ಒಟ್ಟು ನೀರಿನ ಸಂಗ್ರಹವು ಟಿಎಂಸಿ ಇದೆ. ಕಳೆದ ೨೪ ಗಂಟೆಗಳಲ್ಲಿ ೪೩೦೨೪ ಕ್ಯೂಸೆಕ್ ನೀರು ಬಂದಿದೆ. ಬ್ಯಾರೇಜ್ ನಲ್ಲಿ ೩.೬೨ ಟಿಎಂಸಿ ನೀರು ಇದೆ ಎಂದು ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ್ ತಿಳಿಸಿದರು.