ಸುದ್ದಿಕನ್ನಡ ವಾರ್ತೆ
Goa : ಗೋವಾದ ಶಿರಗಾಂವ ಶ್ರೀ ಲಯಿರಾಯಿ ಜಾತ್ರೋತ್ಸವದಲ್ಲಿ ಕಾಲ್ತುಳಿತ ಘಟನೆಗೆ ಸಂಬಂಧಿಸಿದಂತೆ ದೇವಸ್ಥಾನ ಸಮೀತಿಯು ನಿರ್ಣಯವೊಂದನ್ನು ತೆಗೆದುಕೊಂಡಿದೆ. ಕಾಲ್ತುಳಿತ ಘಟನೆಯಲ್ಲಿ ಮೃತರ ಕುಟುಂಬಗಳಿಗೆ ತಲಾ 1 ಲಕ್ಷ ರೂ ಪರಿಹಾರ ನೀಡುವುದಾಗಿ ದೇವಸ್ಥಾನ ಸಮೀತಿ ನಿರ್ಣಯ ತೆಗೆದುಕೊಂಡಿದೆ.
ದೇವಸ್ಥಾನ ಮಹಾಜನರು ಈ ಕುರಿತಂತೆ ಮಾಹಿತಿ ನೀಡಿದ್ದು, ಈ ದುರ್ಘಟನೆಗೆ ದೇವಸ್ಥಾನವು ಜವಾಬ್ದಾರವಲ್ಲ. ಸರ್ಕಾರವು ಸೂಕ್ತ ಭಧ್ರತಾ ವೈವಸ್ಥೆ ಕಲ್ಪಿಸದ ಕಾರಣ ಈ ದುರ್ಘಟನೆ ಸಂಭವಿಸಿದೆ. ಜಾತ್ರೋತ್ವವು ಅದ್ದೂರಿಯಾಗಿ ಈ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಆದರೆ ಜನದಟ್ಟಣೆಯನ್ನು ನಿಯಂತ್ರಿಸುವಲ್ಲಿ ಪೋಲಿಸ್ ಇಲಾಖೆ ವಿಫಲವಾದ ಕಾರಣ ಈ ಘಟನೆ ನಡೆದಿದೆ ಎಂದು ಆರೋಪಿಸಲಾಗಿದೆ.
ಈ ದುರ್ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಲು ಸತ್ಯಶೋಧನ ಸಮೀತಿಯನ್ನು ಸರ್ಕಾರ ಸ್ಥಾಪಿಸಿದೆ. ಸಮೀತಿಯ ತನಿಖಾ ವರದಿ ಬಂದ ನಂತರ ಮುಂದಿನ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ದೇವಸ್ಥಾನ ಸಮೀತಿಯು ಸ್ಪಷ್ಟಪಡಿಸಿದೆ.