ಸುದ್ದಿಕನ್ನಡ ವಾರ್ತೆ
Goa (ಪೊಂಡಾ): ಗೋವಾದಲ್ಲಿ ಎರಡು ದಿನಗಳಿಂದ ಭಾರಿ ಮಳೆಯಾಗುತ್ತಿದೆ. ಗೋವಾದ ಪೊಂಡಾದಲ್ಲಿ ಮೇ 17 ರಿಂದ ಶಂಖನಾದ ಮಹೋತ್ಸವ ಆಯೋಜಿಸಿದ್ದ ಬೃಹತ್ ಮಂಟಪ ಸಂಪೂರ್ಣ ಜಲಾವೃತಗೊಂಡಿದೆ.
ಮೇ 17 ರಿಂದ ಗೋವಾದ ಪೊಂಡಾದಲ್ಲಿ ಆಯೋಜಿಸಿದ್ದ ಶಂಖನಾದ ಮಹೋತ್ಸವದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದರು. ಮೇ 20 ರಿಂದ ಈ ಮಹೋತ್ಸವದ ವೇದಿಕೆಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿತ್ತು. ಮೇ 22 ರ ವರೆಗೆ ಇದೇ ವೇದಿಕೆಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದೀಗ ಈ ಮೈದಾನ ಸಂಪೂರ್ಣ ಜಲಾವೃತಗೊಂಡಿರುವುದು ಹೆಚ್ಚಿನ ತೊಂದರೆಯಾಗುವಂತಾಗಿದೆ.