ಸುದ್ದಿಕನ್ನಡ ವಾರ್ತೆ
Goa : ದೇಶದಲ್ಲಿ ಕರೋನಾ ಸೋಂಕು ಮತ್ತೆ ಹರಡಲಾರಂಭಿಸಿರುವುದು ಮತ್ತೆ ಆತಂಕಕ್ಕೆ ಕಾರಣವಾಗಿದೆ. ಕಳೆದ 20 ದಿನಗಳಲ್ಲಿ ಮುಂಬಯಿಯಲ್ಲಿ 95 ಜನ ಸೋಂಕಿತರು ಪತ್ತೆಯಾಗಿದ್ದಾರೆ. ಇದೀಗ ಗೋವಾದ ವಾಸ್ಕೊದಲ್ಲಿ ಒಬ್ಬ ಸೋಂಕಿತ ಪತ್ತೆಯಾಗಿದ್ದಾರೆ.
ಗೋವಾದಲ್ಲಿ ಪತ್ತೆಯಾಗಿರುವ ಕರೋನಾ ಸೋಂಕಿತ ಹೊರ ರಾಜ್ಯದಿಂದ ಗೋವಾಕ್ಕೆ ಬಂದಿದ್ದ ಎನ್ನಲಾಗಿದೆ. ಆರೋಗ್ಯ ಇಲಾಖೆಯಿಂದ ಈ ಕುರಿತು ಸ್ಪಷ್ಠೀಕರಣ ಲಭಿಸುವುದು ಬಾಕಿ ಇದೆ. ದೇಶದಲ್ಲಿ ಸದ್ಯ ಕರೋನಾ ಸೋಂಕಿತರ ಸಂಖ್ಯೆ ಇದೀಗ 257 ಕ್ಕೆ ತಲುಪಿದೆ. ಕೇರಳದಲ್ಲಿ ಅತ್ಯಧಿಕ ಅಂದರೆ 95 ಜನ ಸೋಂಕಿತರು ಪತ್ತೆಯಾಗಿದ್ದಾರೆ. ತಮಿಳುನಾಡಿನಲ್ಲಿ 66, ಮಹಾರಾಷ್ಟ್ರದಲ್ಲಿ-56, ಕರ್ನಾಟಕದಲ್ಲಿ 13 ಜನ ಸೋಂಕಿತರು ಪತ್ತೆಯಾಗಿದ್ದಾರೆ. ಮುಂಬಯಿಯಲ್ಲಿ ಕೋವಿಡ್ ಸೋಂಕಿತನೋರ್ವ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.