ಸುದ್ದಿಕನ್ನಡ ವಾರ್ತೆ
Goa : ಗೋವಾ ರಾಜ್ಯದಲ್ಲಿ ಕಳೆದ ಎರಡು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದೆ. ಭಾರಿಮಳೆಯು ರಾಜ್ಯದಲ್ಲಿ ಸಾರಿಗೆ ವ್ಯವಸ್ಥೆಯ ಮೇಳೆ ಪರಿಣಾಮ ಬೀರಿದೆ. ಅಂತೆಯೇ ವಿಮಾನ ಹಾರಾಟದ ಮೇಲೂ ಪರಿಣಾಮ ಬೀರಿದೆ. ಮಂಗಳವಾರ ಹವಾಮಾನ ವೈಪರಿತ್ಯದಿಂದಾಗಿ ಗೋವಾದಿಂದ ಎರಡು ವಿಮಾನ ಹಾರಾಟವನ್ನು ರದ್ದುಗೊಳಿಸಲಾಗಿತ್ತು.

ಹವಾಮಾನ ವೈಪರಿತ್ಯದಿಂದಾಗಿ ಯಾವುದೇ ವಿಮಾನ ಹಾರಾಟವು ಯಾವಾಗ ಬೇಕಾದರೂ ರದ್ದಾಗಬಹುದು ಎಂದು ಇಂಡಿಗೊ ವತಿಯಿಂದ ಸ್ಪಷ್ಠೀಕರಣ ನೀಡಲಾಗಿದೆ. ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಆಗಮಿಸುವ ಮುನ್ನ ಫ್ಲೈಟ್ ಸ್ಟೇಟಸ್ ನೋಡಿಕೊಂಡೇ ಆಗಮಿಸುವಂತೆ ಸೂಚನೆ ನೀಡಿದೆ.

ಗೋವಾದಲ್ಲಿ ಭಾರಿ ಮಳೆಯಿಂದಾಗಿ ವಿಮಾನ ಹಾರಾಟದ ಮೇಲೆ ಪರಿಣಾಮವುಂಟಾಗಿದೆ. ಗೋವಾದ ದಾಬೋಲಿಂ ವಿಮಾನ ನಿಲ್ದಾಣಕ್ಕೆ ಬಂದಿಳಿಯಬೇಕಿದ್ದ ಒಂದು ವಿಮಾನವನ್ನು ಬೆಳಗಾವಿಗೆ ಮತ್ತೊಂದು ವಿಮಾನವನ್ನು ಹೈದರಾಬಾದ್ ಗೆ ತಿರುಗಿಸಲಾಗಿದೆ. ಹವಾಮಾನ ವೈಪರಿತ್ಯದಿಂದಾಗಿ ಈ ನಿಣ್ಯ ತೆಗೆದುಕೊಳ್ಳಲಾಗಿದೆ ಎಂದು ವಿಮಾನ ನಿಲ್ದಾಣ ಸಂಚಾಲಕರ ವತಿಯಿಂದ ಸ್ಪಷ್ಠೀಕರಣ ನೀಡಲಾಗಿದೆ.

ಗೋವಾದಲ್ಲಿ ಭಾರಿ ಬಳೆ ಮುಂದುರೆದಿದೆ. ಬುಧವಾರ ರಾಜ್ಯದಲ್ಲಿ ರೆಡ್ ಅಲರ್ಟ ಜಾರಿಗೊಳಿಸಲಾಗಿತ್ತು. ಮೇ 22 ಮತ್ತು 23 ರಂದು ಆರೆಂಜ್ ಅಲರ್ಟ ಜಾರಿಗೊಳಿಸಲಾಗಿದೆ. ಈ ಸಂದರ್ಭದಲ್ಲಿ ರಾಜ್ಯದಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.