ಸುದ್ದಿಕನ್ನಡ ವಾರ್ತೆ
Goa : ಗೋವಾ ರಾಜ್ಯದಲ್ಲಿ ಇನ್ನೂ ಮೂರು ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಗೋವಾದಲ್ಲಿ ಮೇ 16 ರಿಂದ ಮೂರು ದಿನಗಳ ವರೆಗೆ ಯಲ್ಲೊ ಅಲರ್ಟ ನೀಡಲಾಗಿದೆ. ಮೇ 19 ರಿಂದ 21 ರವರೆಗೆ ಹಗುರ ಮಳೆಯಾಗುವ ಸಾಧ್ಯತೆಯಿದೆ. ಗುರುವಾರ ಸತ್ತರಿ ತಾಲೂಕು ಮತ್ತು ಇತರ ಕೆಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗಿದೆ. ಇದರಿಂದಾಗಿ ಹಾನಿ ಸಂಭವಿಸಿದ ಬಗ್ಗೆ ವರದಿಯಾಗಿದೆ. ಪಣಜಿಯಲ್ಲಿ ಗುರುವಾರ ಸಂಜೆ ಮಳೆಯಾಗಿದೆ. ಕಳೆದ ಎರಡು ದಿನಗಳಿಂದ ರಾಜ್ಯಾದ್ಯಂತ ಮೋಡ ಕವಿದ ವಾತಾವರ ಮುಂದುವರೆದಿದೆ.
ಗುರುವಾರ ಬೀಸಿದ ಗಾಳಿಯಿಂದಾಗಿ ಗೋವಾದ ಸತ್ತರಿ ತಾಲೂಕಿನಲ್ಲಿ ಹಲವೆಡೆ ನೈಸರ್ಗಿಕ ಹಾನಿ ಸಂಭವಿಸಿದೆ. ಬ್ರಹ್ಮಕರ್ಮಲಿಯಲ್ಲಿರುವ ಕಾಶಿನಾಥ್ ಗಾವಡೆ ಅವರ ಮನೆಯ ಮೇಲೆ ಮರ ಬಿದ್ದು 20,000 ರೂ.ಗಳ ನಷ್ಟ ಸಂಭವಿಸಿದೆ, ಆದರೆ ಅಗ್ನಿಶಾಮಕ ದಳದವರು ತಕ್ಷಣ ಸ್ಥಳಕ್ಕೆ ಧಾವಿಸಿ 50,000 ರೂ.ಗಳ ಆಸ್ತಿಯನ್ನು ರಕ್ಷಿಸಿ ಹೆಚ್ಚುತ್ತಿರುವ ಹಾನಿಯನ್ನು ತಪ್ಪಿಸಿದ್ದಾರೆ. ಬಿರುಗಾಳಿಯಿಂದ ಮಾವಿನ ಬೆಳೆಗಳಿಗೆ ವ್ಯಾಪಕ ಹಾನಿಯಾಗಿದ್ದು, ಇದು ಮಾವು ಬೆಳೆಗಾರರಿಗೆ ತೀವ್ರ ಹೊಡೆತ ನೀಡಿದೆ.