ಸುದ್ದಿ ಕನ್ನಡ ವಾರ್ತೆ

ಬೆಳಗಾವಿ -ವಿಶ್ವ ಬಸವ ಜಯಂತಿಯ ಅಂಗವಾಗಿ ಬೆಂಗಳೂರಿನ ಕೇಂದ್ರ ಬಸವ ಸಮಿತಿ ಅವರು ಕಿತ್ತೂರು ಚೆನ್ನಮ್ಮಾಜಿ ಅವರ ಐಕ್ಯ ಕ್ಷೇತ್ರವಾದ ಬೈಲಹೊಂಗಲದಲ್ಲಿ ಏರ್ಪಡಿಸಿದ ರಾಜ್ಯಮಟ್ಟದ ಕವಿಗೋಷ್ಠಿಯಲ್ಲಿ ಭಾಗವಹಿಸಿ ಅತ್ಯುತ್ತಮ ಸ್ಥಾನ ಗಳಿಸಿದ ಬೆಳಗಾವಿ ಮಹಾನಗರದ ರಾಮತೀರ್ಥ ನಗರ ನಿವಾಸಿ, ಕವಿ, ಬರಹಗಾರ, ಸಂಘಟಕ ಮತ್ತು ಶಿಕ್ಷಣ ತಜ್ಞ ಶ್ರೀ ಬಾಳಗೌಡ ದೊಡಬಂಗಿ ಅವರನ್ನು ಜಾಗತಿಕ ಲಿಂಗಾಯತ ಮಹಾಸಭಾ ಬೆಳಗಾವಿ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಶ್ರೀ ಆನಂದ ಯಲ್ಲಪ್ಪ ಕೊಂಡಗುರಿ ಅವರು ಸನ್ಮಾನ ಪತ್ರ , ಮಹಾನ್ ದಾರ್ಶನಿಕ ಬಸವಣ್ಣ ಗ್ರಂಥವನ್ನು ಅರ್ಪಿಸಿ ಗೌರವಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾಧ್ಯಕ್ಷರಾದ,ಶ್ರೀ ಮೋಹನ ಬಸನಗೌಡ ಪಾಟೀಲ ಅವರು ಉಪಸ್ಥಿತರಿದ್ದರು.