ಸುದ್ದಿ ಕನ್ನಡ ವಾರ್ತೆ

ಇಂದು ಜಗತ್ತು ಒಂದು ನಿರ್ಣಾಯಕ ತಿರುವಿನಲ್ಲಿ ಬಂದು ನಿಂತಿದೆ. ಯುಕ್ರೇನ್ ರಷ್ಯಾ, ಇಸ್ರೇಲ್ ಗಾಝಾ , ಚೀನಾ ತೈವಾನ್ ಯುದ್ಧ ಮತ್ತು ಭಾರತ ಪಾಕಿಸ್ತಾನದಲ್ಲಿನ ಹೆಚ್ಚುತ್ತಿರುವ ಒತ್ತಡ ಇದು ಮೂರನೇ ಮಹಾಯುದ್ಧದ ನೆರಳು ಇನ್ನಷ್ಟು ಗಾಢವಾಗಿ ಮಾಡುತ್ತಿದೆ. ಪ್ರಸಿದ್ಧ ಫ್ರೆಂಚ್ ದಾರ್ಶನಿಕ ನಾಷ್ಟ್ರ ಡಾಮಸ್ ಇವರು 2025 ರ ಸಮಯದಲ್ಲಿ ಒಂದು ವಿನಾಶಕಾರಿ ಜಾಗತಿಕ ಯುದ್ಧದ ಉಲ್ಲೇಖವನ್ನು ತಮ್ಮ ಭವಿಷ್ಯವಾಣಿಯಲ್ಲಿ ನುಡಿದಿದ್ದಾರೆ. ಕಾಶ್ಮೀರದಲ್ಲಿ ನಡೆಯುತ್ತಿರುವ ದಾಳಿಗಳು, ಗಡಿಯಲ್ಲಿನ ಕಿರುಕುಳ, ಅಂತಾರಾಷ್ಟ್ರೀಯ ಭಯೋತ್ಪಾದನೆಯ ಜಾಲದಿಂದ ದೇಶಗಳಲ್ಲಿ ಮಹಾಯುದ್ಧದ ಸಿಡಿಲು ಯಾವಾಗ ಬೀಳುವುದು ಇದು ಹೇಳಲು ಆಗದು.

ಅದರಲ್ಲಿಯೇ ಜಗತ್ತಿನಾದ್ಯಂತ ಭೂಕಂಪ, ಬಿರುಗಾಳಿ, ಜ್ವಾಲಾಮುಖಿ, ಹವಾಮಾನದಲ್ಲಿನ ನಿರಂತರ ಬದಲಾವಣೆ ಇವುಗಳಂತಹ ನೈಸರ್ಗಿಕ ಆಪತ್ತುಗಳು ಕೂಡ ಮನುಷ್ಯನ ಬದುಕನ್ನು ಕಠಿಣಗೊಳಿಸಿದೆ. ಎಲ್ಲ ರೀತಿಯಿಂದಲೂ ಹಿಂಡುತ್ತಿರುವ ಈ ಅಸ್ಥಿರತೆ ಯಾವಾಗ ಕೊನೆಗಾಣುವುದು, ಯಾವಾಗ ಶಾಂತವಾಗಿ ಬದುಕು ಬದುಕಲು ಸಾಧ್ಯವಾಗುವುದು, ಇದೇ ಪ್ರತಿಯೊಬ್ಬರ ನಿರೀಕ್ಷೆ ಆಗಿದೆ.

ಜಗತ್ತು ಭಾರತದತ್ತ ಆಸೆಯಿಂದ ನೋಡುತ್ತಿದೆ
ನಾಷ್ಟಾಡಾಮನ್ಸ್ ಸ್ಪಷ್ಟವಾಗಿ ತಿಳಿಸಿರುವುದೇನೆಂದರೆ ‘ ಮೂರನೆಯ ಮಹಾಯುದ್ಧದ ನಂತರ ಜಗತ್ತಿನ ನೇತೃತ್ವದ ಭಾರ ಒಂದು ಆಧ್ಯಾತ್ಮಿಕ ರಾಷ್ಟ್ರ ವಹಿಸಿಕೊಳ್ಳುವುದು. ಅದರ ಜೊತೆಗೆ ಇತರ ಅನೇಕ ಸಂತರು, ದಾರ್ಶನಿಕರು, ಭವಿಷ್ಯ ತಿಳಿದವರು, ರಾಜಕೀಯ ವಿಶ್ಲೇಷಕರು ಮತ್ತು ಆಧುನಿಕ ವಿಚಾರವಂತರು ಕೂಡ ವಿವಿಧ ರೀತಿಯಲ್ಲಿ ಮೂರನೇ ಮಹಾಯುದ್ಧದ ಸಾಧ್ಯತೆಯನ್ನು ವ್ಯಕ್ತಪಡಿಸಿದ್ದಾರೆ. ವಿವಿಧ ದೇಶಗಳಲ್ಲಿ ನಡೆಯುತ್ತಿರುವ ಸಂಘರ್ಷ ಇದು ಈ ಮಹಾಯುದ್ಧದ ನಾಂದಿಯಾಗಿದೆ. ಅದು ಯಾವಾಗ ಹೊತ್ತಿ ಉರಿಯುವುದು ಎಂದು ಹೇಳಲು ಯಾರಿಂದಲೂ ಸಾಧ್ಯವಿಲ್ಲ, ಹೀಗಿದ್ದರೂ ಕೂಡ ಎಲ್ಲಾ ದೇಶಗಳು ಭಾರತದ ಕಡೆಗೆ ಆಸೆಯಿಂದ ನೋಡುತ್ತಿವೆ , ಇದು ಮಾತ್ರ ಖಚಿತ. ಯುಕ್ರೇನ್ ಮತ್ತು ರಷ್ಯಾ ಯುದ್ಧದಲ್ಲಿ ಭಾರತ ಮಧ್ಯಸ್ಥಿಕೆ ವಹಿಸಬೇಕು ಎಂದು ಅನೇಕರು ಸೂಚಿಸಿದ್ದರು. ಭಾರತ ಸ್ವತ ಭಯೋತ್ಪಾದನೆ, ನಕ್ಸಲವಾದ, ಭ್ರಷ್ಟಾಚಾರ, ಅನೈತಿಕತೆ ಇವುಗಳಂತಹ ಅನೇಕ ಸಮಸ್ಯೆಗಳಲ್ಲಿ ಮುಳುಗಿರುವಾಗ ಇತರ ದೇಶಗಳಿಗೆ ಭಾರತವು ಆಧಾರಕ್ಕಾಗಿ, ಮಧ್ಯಸ್ಥಿಕೆಗಾಗಿ ಪರ್ಯಾಯ ಎಂದೇಕೆ ಅನಿಸುತ್ತಿದೆ, ಇದರ ಉತ್ತರ ಅಂದರೆ ಭಾರತಕ್ಕೆ ಲಭಿಸಿರುವ ಧಾರ್ಮಿಕ ಅಧಿಷ್ಟಾನ !

ಸನಾತನ ಮೌಲ್ಯಗಳೇ ಮಾನವೀಯತೆಯ ರಕ್ಷಣೆ ಮಾಡಲು ಸಾಧ್ಯ !
ಯುದ್ಧ, ಒತ್ತಡ ಮತ್ತು ನೈತಿಕ ಅಧಃಪತನದ ಸುಳಿಯಲ್ಲಿ ಸಿಕ್ಕಿರುವ ಜಗತ್ತಿಗಾಗಿ ಸನಾತನ ಧರ್ಮವೇ ಶಾಶ್ವತ ಉಪಾಯವಾಗಿದೆ . ಯಾವಾಗ ದೊಡ್ಡ ದೊಡ್ಡ ದೇಶಗಳು ಭಾರತದ ಕಡೆಗೆ ಆಸೆಯಿಂದ ನೋಡುತ್ತಿವೆಯೋ ಆಗಲೇ ಭಾರತವೂ ಕೂಡ ಧರ್ಮಾಧಿಷ್ಟಿತ ರಾಷ್ಟ್ರ ನಿರ್ಮಾಣದ ದಿಶೆ ಸ್ವೀಕರಿಸಿದೆ, ಹಾಗೂ ಅದು ಸಂಪೂರ್ಣ ಮಾನವತೆಗಾಗಿ ನವ ಚೈತನ್ಯದ ದೀಪಸ್ತಂಭವಾಗುವುದು. ಆ ಪರಿವರ್ತನೆಯ ಸಮಯ ಈಗ ಬಂದಿದೆ, ಇಂತಹ ಸಂಕೇತಗಳು ಕಾಣುತ್ತಿದೆ. ಅನೇಕ ಜಾತ್ಯಾತೀತ ಎಂದು ಹೇಳಿಕೊಳ್ಳುವ ರಾಷ್ಟ್ರಗಳು ನೆಲಕಚ್ಚುತ್ತಿರುವಾಗ ಭಾರತ ಪುಟಿದು ಎದ್ದು ನಿಂತಿದೆ. ಕೇವಲ ಅಭಿವೃದ್ಧಿ ಅಷ್ಟೇ ಅಲ್ಲ; ಅದಕ್ಕೆ ನೈತಿಕ ಮೌಲ್ಯಗಳ ಜೋಡಣೆ ಇರುವುದರಿಂದ ದೇಶದಲ್ಲಿ ಜಾಗತಿಕ ಮಟ್ಟದಲ್ಲಿ ಒಂದು ಸ್ಥಾನ ನಿರ್ಮಾಣವಾಗುತ್ತಿದೆ. ಇದೆಲ್ಲವೂ ಬಹಿರಂಗ ಸತ್ಯವೇ ಇದೆ. ಇಂದು ನಾವು ಎಲ್ಲರು ನೋಡುತ್ತಿರುವ ಹಾಗೆ ಸ್ವಂತದ ಧರ್ಮ ಬಹಿರಂಗವಾಗಿ ಹೇಳುವವರು, ನವರಾತ್ರಿಯಲ್ಲಿ ಉಪವಾಸ ಮಾಡುವವರು, ಮಹಾ ಕುಂಭಮೇಳದಲ್ಲಿ ಅಮೃತ ಸ್ನಾನ ಮಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಭಾವಶಾಲಿ ನಾಯಕರಾಗಿದ್ದಾರೆ. ನಮ್ಮ ಸನಾತನ ನೈತಿಕ ಮೌಲ್ಯಗಳು, ಸಂಸ್ಕೃತಿ ಮತ್ತು ಧರ್ಮದ ಆಧಾರದಿಂದಲೇ ಭಾರತ ನೂತನ ಯುಗದ ದೀಪ ಸ್ತಂಭವಾಗಿದೆ, ಹೀಗೆ ಅನೇಕ ದಾರ್ಶನಿಕ ಸಂತರು ಹೇಳಿದ್ದಾರೆ. ಜಗತ್ತಿನಾದ್ಯಂತ ಅಸ್ಥಿರತೆ ಪಸರಿಸಿರುವಾಗ ಸನಾತನ ಮೌಲ್ಯಗಳೇ ಮಾನವತೆಯ ರಕ್ಷಣೆ ಮಾಡಬಹುದು. ಜಾತ್ಯಾತೀತೆ ಎಂದು ಕಾಂಗ್ರೆಸ್ ಹೇರಿರುವ ಸಂಕೋಲೆ ಕಳಚಿ ಯಾವಾಗ ಈ ರಾಷ್ಟ್ರ ಸನಾತನ ಧರ್ಮದ ಹಿಂದೂ ರಾಷ್ಟ್ರ ಎಂದು ಮತ್ತೆ ಉದಯಕ್ಕೆ ಬರುವುದೋ, ಆಗಲೇ ಭಾರತ ನಿಜವಾದ ಅರ್ಥದಲ್ಲಿ ವಿಶ್ವಗುರು ಸ್ಥಾನದಲ್ಲಿ ವಿರಾಜಮಾನವಾಗುವುದು .

‘ ಸನಾತನ ರಾಷ್ಟ್ರ ‘ ವರ್ತಮಾನ ಜಾಗತಿಕ ಅಸ್ಥಿರತೆಗೆ ಏಕೈಕ ವೈದಿಕ ಉತ್ತರ
ಈಗ ಆ ದಿನ ದೂರವಿಲ್ಲ, ಏಕೆಂದರೆ ಗೋಮಂತಕದ ಪಾವನ ಭೂಮಿಯಲ್ಲಿ ಪ್ರತಿಧ್ವನಿಸಲಿದೆ ಸನಾತನ ರಾಷ್ಟ್ರದ ಶಂಖನಾದ ! ಸನಾತನ ಸಂಸ್ಥೆಯ ಸಂಸ್ಥಾಪಕ ಸಚ್ಚಿದಾನಂದ ಪರಬ್ರಂಹ ಡಾ.ಆಠವಲೆ ಇವರು ಧರ್ಮದ ಆಧಾರದಲ್ಲಿ ದೇಶದ ಪುನರುತ್ಥಾನ ಗೊಳಿಸುವುದಕ್ಕಾಗಿ ಕಳೆದ ೩ ದಶಕಕ್ಕಿಂತಲೂ ಹೆಚ್ಚಿನ ಸಮಯದಿಂದ ಕಾರ್ಯನಿರತರಾಗಿದ್ದಾರೆ. ಧರ್ಮ ಇದು ರಾಷ್ಟ್ರದ ಪ್ರಾಣವಾಗಿದೆ. ಇದು ಅವರ ವಚನವಾಗಿದೆ. ಅದಕ್ಕಾಗಿ ಧರ್ಮಾಚರಣೆ ಮಾಡುವ ಪ್ರಜೆ ತಯಾರಾಗಲು ಅವರ ಮಾರ್ಗದರ್ಶನದಲ್ಲಿ ಸಾವಿರಾರು ಸಾಧಕರು ಸಾಧನೆ ಮಾಡುತ್ತಿದ್ದಾರೆ. ಸಚ್ಚಿದಾನಂದ ಪರಬ್ರಹ್ಮ ಡಾ.ಆಠವಲೆ ಇವರು ಸಂಕಲ್ಪಿಸಿರುವ ಸನಾತನ ರಾಷ್ಟ್ರದ ಶಂಖನಾದ ಅನೇಕ ಸಂತ ಮಹಂತರ ಮತ್ತು ಮತ್ತು ನಾಯಕರ ಉಪಸ್ಥಿತಿಯಲ್ಲಿ ನಡೆಯುವುದು. ಮೇ 17 ರಿಂದ 19 2025 ಈ ಕಾಲಾವಧಿಯಲ್ಲಿ ಗೋವಾದ ಫರ್ಮಾಗುಡಿ, ಫೊಂಡಾ ಇಲ್ಲಿ’ ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ ಜರಗುವುದು. ಈ ಮಹೋತ್ಸವ ಎಂದರೆ ಒಂದು ನೂತನ ಯುಗದ, ಒಂದು ಧರ್ಮಾಧಾರಿತ ರಾಷ್ಟ್ರ ನಿರ್ಮಾಣದ ಮತ್ತು ಒಂದು ಆಧ್ಯಾತ್ಮಿಕ ಕ್ರಾಂತಿಯ ಶಂಖನಾದ ಆಗಿದೆ. ಈ ಮಹೋತ್ಸವದಲ್ಲಿ ಶಿಕ್ಷಣ, ಅರ್ಥವ್ಯವಸ್ಥೆ, ರಾಜ್ಯಶಾಸ್ತ್ರ, ನ್ಯಾಯ ವ್ಯವಸ್ಥೆ ಈ ಎಲ್ಲಾ ವಿಷಯಗಳಲ್ಲಿ ಧರ್ಮಾಧಾರಿತ ದೃಷ್ಟಿಕೋನ ಹೇಗೆ ಇರಬೇಕು, ಇದರ ಕುರಿತು ಮಾರ್ಗದರ್ಶನ ದೊರೆಯುವುದು.

ಜಗತ್ತಿನ ಹೊಸ್ತಿಲಲ್ಲಿರುವ ಸಂಕಷ್ಟಗಳಿಗೆ ಉತ್ತರ ಯುದ್ಧವಲ್ಲ, ನೂತನ ಮೌಲ್ಯಗಳಾಗಿವೆ.ನಮ್ಮ ಋಷಿ ಮುನಿಗಳು ‘ಸರ್ವೇ ಭವಂತು ಸುಖಿನಃ ‘ಎಂದು ಪ್ರಾರ್ಥನೆ ಮಾಡಿದರು. ಇದೇ ಧ್ಯೇಯವನ್ನಿಟ್ಟು ಕಟ್ಟುವ ಸನಾತನ ರಾಷ್ಟ್ರವು ಜಗತ್ತಿಗೆ ಶಾಂತಿ, ನ್ಯಾಯ, ಸಂತುಲನ ಮತ್ತು ಸತ್ವಗುಣ ನೀಡುವಂತಹ ಉತ್ತರವಾಗಿದೆ. ಭಾರತ ಶಕ್ತಿಯ ಆಧಾರದಲ್ಲಿ ನಿಂತು ಸಂಕಷ್ಟದಿಂದ ಪೀಡಿತವಾಗಿರುವ ಜಗತ್ತಿಗೆ ಮಾರ್ಗದರ್ಶನ ನೀಡುವುದು.