ಸುದ್ದಿಕನ್ನಡ ವಾರ್ತೆ
Goa : ಗೋವಾದ ಶಿರಗಾಂವನಲ್ಲಿ ನಡೆದ ಶ್ರೀ ಲಯಿರಾಯಿ ದೇವಿ ಜಾತ್ರಾ ಉತ್ಸವದ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದ ಹಿನ್ನೆಲೆಯಲ್ಲಿ, ದೇವಾಲಯ ಆಡಳಿತವು ಧೋಂಡಗಣಗಳ(ವೃತ ಮಾಡುವ ಭಕ್ತರು) ಹೆಸರುಗಳನ್ನು ನೋಂದಾಯಿಸುವುದನ್ನು ಕಡ್ಡಾಯಗೊಳಿಸಿದೆ. ಪ್ರತಿಯೊಬ್ಬರೂ ಸಾಧ್ಯವಾದಷ್ಟು ಬೇಗ ಎರಡು ಪಾಸ್‍ಪೆÇೀರ್ಟ್ ಗಾತ್ರದ ಛಾಯಾಚಿತ್ರಗಳು ಮತ್ತು ಗುರುತಿನ ಚೀಟಿಗಳನ್ನು ಸಲ್ಲಿಸುವಂತೆ ಸೂಚಿಸಲಾಗಿದೆ.

ಶಿರಗಾಂವನಲ್ಲಿ ನಡೆದ ಲಯಿರಾಯಿ ದೇವಿ ಉತ್ಸವದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಆರು ಜನರು ಸಾವನ್ನಪ್ಪಿದರು ಮತ್ತು 80 ಕ್ಕೂ ಹೆಚ್ಚು ಜನರು ಗಾಯಗೊಂಡರು. ಚಿಕಿತ್ಸೆಯ ನಂತರ ಅನೇಕ ಜನರಿಗೆ ಡಿಶ್ಚಾರ್ಜ ನೀಡಲಾಯಿತು, ಆದರೆ ಕೆಲವರು ಇನ್ನೂ ಗಂಭೀರ ಸ್ಥಿತಿಯಲ್ಲಿದ್ದು, ಗೋಮೆಕೊದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆಯ ನಂತರ, ದೇವಾಲಯ ಆಡಳಿತ ಮತ್ತು ಪೆÇಲೀಸ್ ಆಡಳಿತದ ಬಗ್ಗೆ ವಿವಿಧ ಹಂತಗಳಿಂದ ಪ್ರಶ್ನೆಗಳು ಎದ್ದವು. ಹಲವು ಅಂಶಗಳನ್ನು ಪರಿಗಣಿಸಿ, ಶಿರಗಾಂವ್ ನಲ್ಲಿರುವ ಲಯಿರಾಯಿ ದೇವಾಲಯ ಆಡಳಿತವು ದೋಂಡಗಣಗಳ ಮೇಲೆ ನಿಬಂಧ ಹೇರಲು ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಅವರು ಹೊಸ ಅಧಿಸೂಚನೆಯನ್ನು ಹೊರಡಿಸಿದ್ದಾರೆ. ಭವಿಷ್ಯದಲ್ಲಿ ಜಾತ್ರೆಯ ಆಯೋಜನೆಯಲ್ಲಿ ಯಾವುದೇ ನ್ಯೂನತೆಗಳಾಗದಂತೆ ಮತ್ತು ಉತ್ಸವವನ್ನು ಉತ್ತಮ ಯೋಜಿತ ರೀತಿಯಲ್ಲಿ ನಡೆಸುವಂತೆ ದೇವಸ್ಥಾನ ಸಮಿತಿಯು ಪ್ರಯತ್ನಗಳನ್ನು ಮಾಡುತ್ತಿದೆ.

 

ತನಿಖಾ ಸಮಿತಿಯ ವರದಿಯಲ್ಲಿ ಏನಿದೆ?
ಕಂದಾಯ ಕಾರ್ಯದರ್ಶಿ ಸಂದೀಪ್ ಜಾಕ್ವಿಸ್ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಯಿತು. ಈ ಸಮಿತಿಯು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರತ್ಯಕ್ಷದರ್ಶಿಗಳೊಂದಿಗೆ ಚರ್ಚಿಸಿತು ಮತ್ತು ಅಂತಿಮವಾಗಿ, ಐದು ದಿನಗಳ ನಂತರ, ಗುರುವಾರ ತಡರಾತ್ರಿ 100 ಪುಟಗಳ ವರದಿಯನ್ನು ಸಿದ್ಧಪಡಿಸಿ ಮುಖ್ಯ ಕಾರ್ಯದರ್ಶಿ ಡಾ. ವಿ.ಕಾಂಡವೇಲು ಅವರಿಗೆ ಸಲ್ಲಿಸಿತು.

 

ಲಯಿರಾಯಿ ಜಾತ್ರೆಯ ಸಂದರ್ಭದಲ್ಲಿ ನಡೆದ ಕಾಲ್ತುಳಿತದಲ್ಲಿ ಉತ್ತರ ಗೋವಾದ ಮಾಜಿ ಜಿಲ್ಲಾಧಿಕಾರಿ ಸ್ನೇಹಾ ಗೀತೆ, ಮಾಜಿ ಪೆÇಲೀಸ್ ವರಿಷ್ಠಾಧಿಕಾರಿ ಅಕ್ಷತ್ ಕೌಶಲ್, ಡಿಚೋಲಿಯ ಮಾಜಿ ಉಪ ವರಿಷ್ಠಾಧಿಕಾರಿ ಜಿವ್ಬಾ ದಳವಿ, ಮಾಜಿ ಇನ್ಸ್‍ಪೆಕ್ಟರ್ ದಿನೇಶ್ ಗಡೇಕರ್, ಮಾಜಿ ಉಪ ಜಿಲ್ಲಾಧಿಕಾರಿ ಭೀಮನಾಥ್ ಖೋರ್ಜುವೇಕರ್ ಮತ್ತು ದೇವಸ್ಥಾನ ಸಮಿತಿ ಮತ್ತು ಪಂಚಾಯತ್ ಸಮಿತಿಯನ್ನು ತಪ್ಪಿತಸ್ಥರೆಂದು ತನಿಖಾ ಸಮಿತಿಯು ಘೋಷಿಸಿದೆ ಎಂದು ಮುಖ್ಯಮಂತ್ರಿ ಡಾ. ಸಾವಂತ್ ವಿವರಿಸಿದರು. ವರದಿಯ ಆವಿಷ್ಕಾರಗಳನ್ನು ಸರ್ಕಾರ ತನಿಖೆ ನಡೆಸುತ್ತಿದೆ ಮತ್ತು ತಪ್ಪಿತಸ್ಥರ ವಿರುದ್ಧ ಖಚಿತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು.