ಸುದ್ದಿಕನ್ನಡ ವಾರ್ತೆ
Goa : ಶಿರಗಂವ್ ನಲ್ಲಿ ನಡೆದ ಶ್ರೀ ಲಯಿರಾಯಿ ದೇವಿ ಜಾತ್ರೋತ್ಸವದ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಆರು ಭಕ್ತರು ಪ್ರಾಣ ಕಳೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಶಿರಗಾಂವ್ಗೆ ಭೇಟಿ ನೀಡಿ ಘಟನಾ ಸ್ಥಳವನ್ನು ಪರಿಶೀಲಿಸಿದರು. ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಆರ್ಥಿಕ ನೆರವು ನೀಡಲಾಗುವುದು ಮತ್ತು ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗುವುದು. ಶಿರಗಾಂವನಲ್ಲಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ಇಂತಹ ಘಟನೆಗಳು ಮತ್ತೆ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಲಾಗುವುದು ಎಂದು ಹೇಳಿದರು.
ಉತ್ತರ ಗೋವಾ ಪೆÇಲೀಸ್ ವರಿಷ್ಠಾಧಿಕಾರಿ ಅಕ್ಷತ್ ಕೌಶಲ್ ಕೂಡ ಸ್ಥಳದಲ್ಲಿದ್ದರು ಮತ್ತು ಪ್ರಕರಣದ ಒಟ್ಟಾರೆ ಪರಿಶೀಲನೆ ನಡೆಸಿದರು. ಸುಮಾರು 1 ಲಕ್ಷ ಭಕ್ತರು ಸೇರಿದ್ದ ಲಯಿರಾಯಿ ಜಾತ್ರೆಯಲ್ಲಿ ಕಾಲ್ತುಳಿತ ಸಂಭವಿಸಿತು. ಕರ್ತವ್ಯದಲ್ಲಿದ್ದ ಪೆÇಲೀಸರು ತಕ್ಷಣ ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯುವತ್ತ ಗಮನಹರಿಸಿದರು ಎಂದು ಅವರು ಹೇಳಿದರು.
ಶಿಗಾರ್ಂವ್ನಲ್ಲಿ ನಡೆದ ಘಟನೆಗೆ ಕೆಲವು ಧೋಂಡಗಳೇ ಸಂಪೂರ್ಣ ಹೊಣೆ ಮತ್ತು ಆಡಳಿತ ಮತ್ತು ದೇವಾಲಯ ಸಮಿತಿಯನ್ನು ದೂಷಿಸುವುದು ತಪ್ಪು. ಈ ಘಟನೆಗೆ ದೇವಾಲಯ ಸಮಿತಿಯೂ ವಿಷಾದ ವ್ಯಕ್ತಪಡಿಸಿದೆ ಎಂದು ಶ್ರೀ ಲಯಿರಾಯಿ ದೇವಸ್ಥಾನದ ಅಧ್ಯಕ್ಷರಾದ ದಿನನಾಥ್ ಗಾಂವ್ಕರ್ ಹೇಳಿದ್ದಾರೆ.
ಇದಕ್ಕೂ ಮುನ್ನ ಮುಖ್ಯಮಂತ್ರಿಗಳು ಡಿಚೋಲಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಗಾಯಾಳುಗಳನ್ನು ವಿಚಾರಿಸಿದ್ದರು. ಅದಾದ ನಂತರ, ಅವರು ಮಾಪುಸಾದ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದರು. ಸಚಿವ ನೀಲಕಂಠ ಹರ್ಣಕರ್, ಶಾಸಕ ಚಂದ್ರಕಾಂತ್ ಶೇಟಯೆ ಮತ್ತು ಶಾಸಕ ಪ್ರೇಮೇಂದ್ರ ಶೇಟ್ ಕೂಡ ಮಾಪುಸಾ ಆಸ್ಪತ್ರೆಗೆ ಭೇಟಿ ನೀಡಿದರು.
ಜಾತ್ರೆಯಲ್ಲಿ ಕಾಲ್ತುಳಿತದಲ್ಲಿ ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಅದರಲ್ಲಿ ಯಾವುದೇ ರಾಜಿ ಇರುವುದಿಲ್ಲ. ಅಗತ್ಯವಿದ್ದರೆ ಹೊರಗಿನಿಂದ ವೈದ್ಯರನ್ನು ಕರೆಯಲು ನಾವು ಸಿದ್ಧರಿದ್ದೇವೆ ಎಂದು ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಬಿಡುಗಡೆ ಮಾಡಿದ ವೀಡಿಯೊದಲ್ಲಿ ತಿಳಿಸಿದ್ದಾರೆ.