ಸುದ್ದಿಕನ್ನಡ ವಾರ್ತೆ
Goa : ಪಾಕಿಸ್ತಾನವು ಇಬ್ಬಾಗವಾಗಲಿದ್ದು, ಬಲುಚಿಸ್ತಾನ ಹೊಸ ದೇಶವಾಗಲಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಭವಿಷ್ಯ ನುಡಿದಿದ್ದಾರೆ. ಪಣಜಿಯ ಬಿಜೆಪಿ ಕಾರ್ಯಾಲಯದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು. ಏಪ್ರಿಲ್ 22 ರಂದು ಪಹಲ್ಗಾಮ್ ಹಲ್ಲೆಗೆ ಪ್ರಧಾನಿ ನರೇಂದ್ರ ಮೋದಿಯವರು ನೂರಕ್ಕೆ ನೂರರಷ್ಟು ಪ್ರತಿಕಾರ ತೀರಿಸಿಕೊಳ್ಳಲಿದ್ದಾರೆ ಎಂದು ಮುಖ್ಯಮಂತ್ರಿ ಸಾವಂತ್ ನುಡಿದರು,

ಪಾಕಿಸ್ತಾನದಲ್ಲಿ ಯಾವ ರೀತಿ ಹಿಂದುಗಳ ಸಂಖ್ಯೆ ಕಡಿಮೆಯಾಗುತ್ತಿದೆಯೋ ಅದೇ ರೀತಿ ಭಾರತದಲ್ಲಿ ಮುಸ್ಲೀಮರ ಸಂಖ್ಯೆ ಹೆಚ್ಚುತ್ತಿದೆ. ಇದರಿಂದ ನಮಗೇನೂ ತೊಂದರೆಯಿಲ್ಲ. ಏಕೆಂದರೆ ಭಾರತದಲ್ಲಿ ಹಿಂದೂ,ಮುಸ್ಲಿಂ ಮತ್ತು ಕ್ಲಿಶ್ಚಿಯನ್ನರು ಒಟ್ಟಾಗಿ ವಾಸಿಸುತ್ತಿದ್ದಾರೆ. 1971 ರಲ್ಲಿ ಪಾಕಿಸ್ತಾನವು ವಿಭಜಿತಗೊಂಡು ಬಾಂಗ್ಲಾ ದೇಶ ಎಂಬ ಮತ್ತೊಂದು ದೇಶ ನಿರ್ಮಾಣವಾಯಿತು. ಇದೀಗ ಬಲುಚಿಸ್ತಾನ ಇದು ಹೊಸ ದೇಶವಾಗಿ ಸ್ಥಾಪನೆಗೊಳ್ಳುವ ಸಾಧ್ಯತೆಯಿದೆ. ಬಲುಚಿಸ್ತಾನವು ಪಾಕಿಸ್ತಾನದ ದೊಡ್ಡ ಪ್ರದೇಶವಾಗಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ನುಡಿದರು.

1990 ರಲ್ಲಿ ಕಾಶ್ಮೀರಿ ಪಂಡಿತರ ಮೇಲೆ ಧಾಳಿ ನಡೆದಿತ್ತು, ಅಂದಿನ ರಾಜಕೀಯ ನಾಯಕರು ಭಯೋತ್ಪಾದಕರಿಗೆ ತಕ್ಕ ಉತ್ತರ ನೀಡಿಲ್ಲ. ಕಾಂಗ್ರೇಸ್ ಪಕ್ಷವು ದೇಶದಲ್ಲಿ 60 ವರ್ಷ ಅಧಿಕಾರದಲ್ಲಿತ್ತು, ಆದರೆ ಭಯೋತ್ಪಾದಕರ ವಿರುದ್ಧ ಕಾಂಗ್ರೇಸ್ ಪಕ್ಷ ಯಾವುದೇ ಕಠಿಣ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಆರೋಪಿಸಿದರು.

ಕಾಂಗ್ರೇಸ್ ಪಜಕ್ಷಕ್ಕೆ ಇಂದು ಇಂತಹ ಸಂದರ್ಭ ಏಕೆ ಬಂದೊದಗಿದೆ ಎಂದು ವಿಚಾರ ಮಾಡಿ. ಕಾರಣವೆಂದರೆ ಕಾಂಗ್ರೇಸ್ ಪಕ್ಷಸವು ದೇಶಕ್ಕಾಗಿ ಅಲ್ಲ, ತನಗಾಗಿ ಕೆಲಸ ಮಾಡಿದೆ. ದೇಶದ ಜನತೆಗೆ ಇದು ಇಂದು ತಿಳಿದಿದೆ. ಪ್ರಧಾನಿ ನರೇಂದ್ರ ಮೋದಿಯವರು ಅವರಂತಲ್ಲ. ಮೋದಿಯವರು ಇಂತಹ ಘಟನೆಯನ್ನು ಸಹಿಸುವುದಿಲ್ಲ. ಪಾಕಿಸ್ತಾನಿ ನಾಗರೀಕರಿಗೆ ದೇಶ ಬಿಟ್ಟು ತೊಲಗುವಂತೆ ಆದೇಶಿಸಲಾಗಿದೆ. ಪಾಕಿಸ್ತಾನದಲ್ಲಿ ಎಲ್ಲಿಯ ವರೆಗೆ ಭಯೋತ್ಪಾದನೆ ನಿಲ್ಲುವುದಿಲ್ಲವೋ ಅಲ್ಲಿಯ ವರೆಗೆ ಅವರಿಗೆ ಭಾರತಕ್ಕೆ ಪ್ರವೇಶಿಸಲು ಅವಕಾಶ ನೀಡಲಾಗುವುದಿಲ್ಲ ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ನುಡಿದರು.