ಸುದ್ದಿಕನ್ನಡ ವಾರ್ತೆ
Goa : ಕರ್ನಾಟಕದ ಉದ್ಯಮಿಯೊಬ್ಬರಿಂದ 25,000 ರೂ. ಲಂಚ ಪಡೆದ ಆರೋಪದ ಮೇಲೆ ಕೊಂಕಣ ರೈಲ್ವೆ ಪೆÇಲೀಸ್ ಇನ್ಸ್‍ಪೆಕ್ಟರ್ ಸುನಿಲ್ ಗುಡ್ಲರ್ ಮತ್ತು ಪೆÇಲೀಸ್ ಕಾನ್ಸ್‍ಟೇಬಲ್ ಮೊಹಮ್ಮದ್ ಹುಸೇನ್ ಅವರನ್ನು ವಿಜಿಲೆನ್ಸ್ ಇಲಾಖೆಯ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಂಧಿಸಿದೆ.

ವಿಜಿಲೆನ್ಸ್ ಇಲಾಖೆಯ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಮಾಹಿತಿಯ ಪ್ರಕಾರ, ಕರ್ನಾಟಕದ ಮಾಂಸ ಉದ್ಯಮಿಯೊಬ್ಬರು ಈ ಸಂಬಂಧ ಸೋಮವಾರ ಎಸಿಬಿಗೆ ದೂರು ನೀಡಿದ್ದರು. ಉದ್ಯಮಿ ವಿರುದ್ಧದ ಪ್ರಕರಣವನ್ನು ಇತ್ಯರ್ಥಪಡಿಸಲು ಲಂಚ ಕೇಳಿರುವುದಾಗಿ ಕೊಂಕಣ ರೈಲ್ವೆ ಪೆÇಲೀಸ್ ಇನ್ಸ್‍ಪೆಕ್ಟರ್ ಗುಡ್ಲರ್ ಹೇಳಿದ್ದರು ಎನ್ನಲಾಗಿದೆ. ಅದರಂತೆ, ಎಸಿಬಿ ಸೂಪರಿಂಟೆಂಡೆಂಟ್ ನೆಲ್ಸನ್ ಅಲ್ಬುಕರ್ಕ್ ಮತ್ತು ಡೆಪ್ಯೂಟಿ ಸೂಪರಿಂಟೆಂಡೆಂಟ್ ರಾಜನ್ ನಿಗ್ಲೆ ಅವರ ಮಾರ್ಗದರ್ಶನದಲ್ಲಿ ಇನ್ಸ್‍ಪೆಕ್ಟರ್ ಸತೀಶ್ ಗಾವ್ಡೆ ಪ್ರಕರಣ ದಾಖಲಿಸಿದ್ದಾರೆ.

ಈ ದೂರಿನ ಅಡಿಯಲ್ಲಿ ಮಡಗಾಂವನಲ್ಲಿ ಎಸಿಬಿ ತಂಡ ಕ್ರಮ ಕೈಗೊಂಡಿತು. ಆ ಸಮಯದಲ್ಲಿ, ಎಸಿಬಿ ಕೊಂಕಣ ರೈಲ್ವೆ ಪೆÇಲೀಸ್ ಇನ್ಸ್‍ಪೆಕ್ಟರ್ ಗುಡ್ಲರ್ ಮತ್ತು ಕಾನ್ಸ್ ಟೇಬಲ್ ಮೊಹಮ್ಮದ್ ಹುಸೇನ್ ಅವರನ್ನು ವಶಕ್ಕೆ ಪಡೆದಿತ್ತು. ಮಂಗಳವಾರ ಬೆಳಿಗ್ಗೆ 4 ಗಂಟೆ ಸುಮಾರಿಗೆ ಇಬ್ಬರ ವಿರುದ್ಧವೂ ಕ್ರಮ ಕೈಗೊಳ್ಳಲಾಯಿತು ಮತ್ತು ಅವರನ್ನು ಬಂಧಿಸಲಾಯಿತು.

 

ಇತ್ತೀಚೆಗೆ ಕೊಂಕಣ ರೈಲ್ವೆ ಪೆÇಲೀಸರು ದೊಡ್ಡ ಪ್ರಮಾಣದಲ್ಲಿ ಗೋಮಾಂಸವನ್ನು ವಶಪಡಿಸಿಕೊಂಡಿದ್ದರು. ಅಲ್ಲದೆ, ಕೆಲವು ದಿನಗಳ ಹಿಂದೆ ಚಿನ್ನವನ್ನು ವಶಪಡಿಸಿಕೊಂಡಿರುವ ಬಗ್ಗೆ ಮಾಹಿತಿ ಹೊರಬಿದ್ದಿತ್ತು.