ಸುದ್ದಿ ಕನ್ನಡ ವಾರ್ತೆ
ಹರಪನಹಳ್ಳಿ: ಕಾಶ್ಮೀರದ ಪಹಲ್ಗಾಮ್ ನಲ್ಲಿ ಮಂಗಳವಾರ ಮಧ್ಯಾಹ್ನ ನಡೆದ ಉಗ್ರರ ಗುಂಡಿನ ದಾಳಿ ವೇಳೆ ಹರಪನಹಳ್ಳಿಯ ಕುಟುಂಬವೊಂದು ಕೂದಲೆಳೆ ಅಂತರದಲ್ಲಿ ಪಾರಾಗಿದ್ದು, ಘಟನೆ ನಡೆಸ ಸ್ಥಳದಿಂದ ಸುರಕ್ಷಿತವಾಗಿ ಹೊರಗೆ ಬಂದಿದೆ.
ಹರಪನಹಳ್ಳಿ ಪಟ್ಟಣದ ತೆಗ್ಗಿನಮಠ ಬಿ.ಇಡ್ ಕಾಲೇಜಿನ ಡೀನ್
ಟಿ.ಎಂ.ರಾಜಶೇಖರ ಮತ್ತು ಅವರ ಪತ್ನಿ ಬಿ.ಎಂ.ಉಮಾದೇವಿ, ಮಗಳು ಗೌರಿಕಾ ಅಳಿಯಾ ಕೊಟ್ರ ಬಸಯ್ಯನವರೇ ಉಗ್ರರ ದಾಳಿಯಿಂದ ಬಚಾವಾದವರು.
ಏ.18 ರಂದು ಕಾಶ್ಮೀರಕ್ಕೆ ಕುಟುಂಬ ಸಮೇತ ಪ್ರವಾಸ ಕೈಗೊಂಡಿದ್ದರು, ಕಾಶ್ಮೀರದಲ್ಲಿಯೇ ಅತ್ಯಂತ ಸೂಕ್ಷ್ಮ ಪ್ರದೇಶವಾದ ಗೋಲ್ ಮಾರ್ಗ ಸ್ಥಳದ ಪ್ರವಾಸ ಮುಗಿಸಿ ಭಾನುವಾರ ಭಯೋತ್ಪಾದಕರಿಂದ ಗುಂಡಿನ ದಾಳಿ ನಡೆದ ಸ್ಥಳವಾದ ಪೆಹಲ್ಗಾಂಮ್ ಗೆ ತೆರಳಿದ್ದಾರೆ.
ಭೂಮಿಯ ಸ್ವರ್ಗ, ಮತ್ತು ಸ್ವಿಟ್ಜರ್ಲ್ಯಾಂಡ್ ಎಂದೇ ಕರೆಯುವ ಈ ಸುಂದರ ಸ್ಥಳವನ್ನು ವೀಕ್ಷಿಸಲು ಸುಮಾರು 10 ಸಾವಿರ ಅಡಿಗಳಷ್ಟು ಎತ್ತರವನ್ನು ಕುದುರೆ ಮೂಲಕ ತೆರಳಿದ್ದಾರೆ, ಎತ್ತರದ ಪ್ರದೇಶವನ್ನು ಮಧ್ಯಾಹ್ನ 2:18 ಕ್ಕೆ ಏರಿದ್ದಾರೆ, ಸಮೀಪದಲ್ಲೇ ಇದ್ದ ಕೇಸರಿ ಖರೀದಿಸಲು ಅಂಗಡಿಗಳ ಬಳಿಗೆ ಬಂದಾಗ, ಸುಮಾರು 5 ಜನ ಉಗ್ರರು ಏಕಾಏಕಿ ಧಾವಿಸಿ ರಾಜಶೇಖರಯ್ಯ ಕುಟುಂಬದವರು ಇರುವ ಸ್ಥಳದಿಂದ ಕೇವಲ ಐದಾರು ಅಡಿಗಳ ಅಂತರದಲ್ಲಿಯೇ ಗುಂಡಿನ ದಾಳಿಯನ್ನು ನಡೆಸುತ್ತಿರುವುದನ್ನು ಕಂಡ ಕುಟುಂಬವು ಉಗ್ರರಿಂದ ತಪ್ಪಸಿಕೊಳ್ಳಲು ಕೂಡಲೇ ಸ್ಥಳದಿಂದ ಓಡಿ ಹೋಗಿ ಪಾರಾಗಿದ್ದಾಗಿ ರಾಜಶೇಖರ ದೂರವಾಣಿ ಕೆರೆಯಲ್ಲಿ ತಿಳಿಸಿದ್ದಾರೆ.
ಶ್ರೀನಗರದಿಂದ ಸುಮಾರು 80 ಕಿಲೋ ಮೀಟರ್ ದೂರದಲ್ಲಿರುವ ಈ ಸ್ಥಳವು ಅತ್ಯಂತ ಸುಂದರ ಪ್ರವಾಸಿ ತಾಣವಾಗಿದ್ದು, ದೇಶ ವಿದೇಶಗಳಿಂದ ಈ ಸುಂದರ ಸ್ಥಳ ವೀಕ್ಷಿಸಲು ನಿತ್ಯ ಸಾವಿರಾರು ಜನ ಪ್ರವಾಸಿಗರು ಬರುತ್ತಾರೆ, ಈ ಸ್ಥಳದಲ್ಲಿ ಯಾವುದೇ ಮೊಬೈಲ್ ನೆಟ್ವರ್ಕ್ ಸಂಪರ್ಕ ಇರುವುದಿಲ್ಲ, 32 ಜನ ಉಗ್ರರಿಂದ ಹತ್ಯೆಯಾದ ಒಂದು ಗಂಟೆ ನಂತರ ಭಾರತೀಯ ಸೈನ್ಯ ಈ ಸ್ಥಳಕ್ಕೆ ಬಂದಿತು, ಉಗ್ರರಿಂದ ತಪ್ಪಿಸಿಕೊಳ್ಳಲು ಪ್ರವಾಸಿಗರು ಜೀವ ಭಯದಿಂದ ತಮ್ಮ ಕುಟುಂಬಸ್ಥರ ಜೀವ ರಕ್ಷಣೆ ಮಾಡಿಕೊಳ್ಳುತ್ತಿದ್ದರು.
ಈ ಸ್ಥಳಕ್ಕೆ ಕರ್ನಾಟಕದ ಯಾವ ಪ್ರವಾಸಿಗರು ಬರಬೇಡಿ ಈ ಸ್ಥಳವು ನೋಡಲು ಸ್ವರ್ಗದಂತೆ ಇರುವುದು ಅಕ್ಷರಶಃ ಸತ್ಯ ಆದರೆ ಉಗ್ರರು ಯಾವ ಸಂಧರ್ಭದಲ್ಲಿ ಗುಂಡಿನ ದಾಳಿ ನಡೆಸುತ್ತಾರೆ ಎನ್ನುವುದು ಅರಿವಿಗೆ ಬರುವುದಿಲ್ಲ ಪೂರ್ವಜರು ಮಾಡಿದ ಪುಣ್ಯದ ಫಲದಿಂದ ನನ್ನ ಕುಟುಂಬವು ಮರು ಜೀವ ಪಡೆದು ಇಂದು ಸುರಕ್ಷಿತ ಸ್ಥಳಕ್ಕೆ ಬಂದು ತಲುಪಿದ್ದೇವೆ ರಾಜಶೇಖರ ಅವರು ನೋವು ತೊಡಗಿಕೊಂಡರು.
ಗುರುವಾರ ಕಾಶ್ಮೀರದಿಂದ ಕರ್ನಾಟಕಕ್ಕೆ ತೆರಳಲು ವಿಮಾನದ ಟಿಕೆಟ್ ಬುಕ್ ಆಗಿದೆ, ಉಗ್ರರದಾಳಿಯಿಂದ ವಿಮಾನ ಟಿಕೆಟ್ ದರ ದಿಢೀರ್ ಏರಿಕೆ ಮಾಡಲಾಗಿದೆ ಎಂದು ಟಿ.ಎಂ.ರಾಜಶೇಖರ ಅಸಮಾಧಾನ ವ್ಯಕ್ತಪಡಿಸಿದರು.