ಸುದ್ದಿ ಕನ್ನಡ ವಾರ್ತೆ
ಮುಧೋಳ : ಕಾರ್ಯನಿಮಿತ್ತ ಅಥಣಿಗೆ ತೆರಳುವ ವೇಳೆ‌‌ ಮುಧೋಳದ‌‌ ಕಾಳಿಕಾದೇವಿ ದೇವಸ್ಥಾನಕ್ಕೆ‌ ಭೇಟಿ ನೀಡಿದ ಅಯೋಧ್ಯೆಯಲ್ಲಿನ ಶ್ರೀರಾಮನ‌ ಮೂರ್ತಿ‌ ನಿರ್ಮಿಸಿರುವ ಶಿಲ್ಪಿ ಅರುಣ ಯೋಗಿರಾಜ ಅವರನ್ನು ಮುಧೋಳದ‌ ವಿಶ್ವಕರ್ಮ‌ ಸಮಾಜ ಬಾಂಧವರು ಸನ್ಮಾನಿಸಿದರು.
ಈ ವೇಳೆ ಗಣ್ಯರಾದ ರಾಜು ಟಂಕಸಾಲಿ, ರಾಜೇಶ ವಾವಳ, ಪ್ರಕಾಶ ಶೇರಖಾನೆ ಸೇರಿದಂತೆ ಇತರರು ಇದ್ದರು.