ಸುದ್ದಿಕನ್ನಡ ವಾರ್ತೆ
Goa: ಗೋವಾದ ಸತ್ತರಿ ತಾಲೂಕಿನಿಂದ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಬೇಟೆಯಾಡಲು ಕಾಡಿಗೆ ಹೋಗಿದ್ದ ಇಬ್ಬರು ಯುವಕರಲ್ಲಿ ಒಬ್ಬರು ಹಾರಿಸಿದ್ದ ಗುಂಡು ಇನ್ನೊ ಬಬರಿಗೆ ತಗುಲಿ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಪೆÇಲೀಸರು ತಕ್ಷಣ ಅವರನ್ನು ವಾಲ್ಪೈ ಆಸ್ಪತ್ರೆಗೆ ದಾಖಲಿಸಿದರು.

ಪರೀಕ್ಷೆಯ ನಂತರ, ವೈದ್ಯರು ಅವರು ಮೃತಪಟ್ಟಿದ್ದಾರೆಂದು ಘೋಷಿಸಿದರು. ಮೃತ ಯುವಕನನ್ನು ಹೇಮಂತ್ ದೇಸಾಯಿ (ಅದ್ವೈ-ಸತ್ತರಿ) ಎಂದು ಗುರುತಿಸಲಾಗಿದೆ ಮತ್ತು ಆತನ ಶವವನ್ನು ಶವಪರೀಕ್ಷೆಗಾಗಿ ಗೋಮೆಕೊಗೆ ಕಳುಹಿಸಲಾಗಿದೆ. ವಾಲ್ಪೈ ಪೆÇಲೀಸರು ಆತನ ಜೊತೆಗಿದ್ದ ಅಭಿಜೀತ್ ದೇಸಾಯಿ ಎಂಬಾತನನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ.

ಈ ಮಧ್ಯೆ, ಕಳೆದ ವರ್ಷ ಡಿಸೆಂಬರ್ ಕೊನೆಯ ವಾರದಲ್ಲಿ, ವಾಲ್ಪೈನ ಪಟ್ವಾಲ್ ಕಾಡಿನಲ್ಲಿ ತನ್ನ ಸ್ನೇಹಿತರೊಂದಿಗೆ ಬೇಟೆಯಾಡಲು ಹೋಗಿದ್ದ 21 ವರ್ಷದ ಸಮದ್ ಖಾನ್ ಗುಡು ತಗುಲಿ ಸಾವನ್ನಪ್ಪಿದ್ದ. ಬೇಟೆಯಾಡುವುದನ್ನು ನಿಷೇಧಿಸಿದ್ದರೂ, ವಾಲ್ಪೈ ಪೆÇಲೀಸರು ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿದೆ.