ಸುದ್ದಿಕನ್ನಡ ವಾರ್ತೆ
Goa -Mumbai: ದೇಶೀಯ ಪ್ರವಾಸೋದ್ಯಮ ವಲಯವು ಕಳೆದ ಎರಡು ವರ್ಷಗಳಲ್ಲಿ ಆಮೂಲಾಗ್ರ ಬದಲಾವಣೆಗಳಿಗೆ ಒಳಗಾಗಿದೆ. ದೇಶದ ವಿವಿಧ ರಾಜ್ಯಗಳು ಒಗ್ಗೂಡಿ ಹಲವು ರೀತಿಯ ಒಪ್ಪಂದಗಳಿಗೆ ಸಹಿ ಹಾಕಿವೆ. ಈ ನಿಟ್ಟಿನಲ್ಲಿ, ಗೋವಾ ಮತ್ತು ಮಹಾರಾಷ್ಟ್ರ ಎರಡು ರಾಜ್ಯಗಳ ನಡುವೆ ಪ್ರಯಾಣಿಕರಿಗಾಗಿ ಒಂದು ವಿನೂತನ ಸೇವೆಯನ್ನು ಪ್ರಾರಂಭಿಸುವ ಪ್ರಸ್ತಾಪವಿದೆ.
‘ಮುಂಬೈ ನಿಂದ ಗೋವಾ’ ರಸ್ತೆ, ವಿಮಾನ ಮತ್ತು ರೈಲು ಮೂಲಕ ಹೋಗಬಹುದು. ಮುಂಬೈ ಮತ್ತು ಮಾಂಡ್ವಾ ನಡುವೆ ರೋ-ರೋ (ರೋಲ್-ಆನ್, ರೋಲ್-ಆಫ್) ದೋಣಿ ಸೇವೆಗೆ ಹೆಸರುವಾಸಿಯಾದ ಎಂ.2.ಎಂ ಕಂಪನಿಯು ಈಗ ಮುಂಬೈನಿಂದ ಗೋವಾಕ್ಕೆ ಸಮುದ್ರದ ಮೂಲಕ ನೇರವಾಗಿ ಸೂಪರ್-ಫಾಸ್ಟ್ ರೋ-ರೋ ಹಡಗು ಸೇವೆಯನ್ನು ಪ್ರಾರಂಭಿಸಲು ನೋಡುತ್ತಿದೆ. ಇಂತಹ ಜಲ ಸಾರಿಗೆಯನ್ನು ಈ ಹಿಂದೆ ಮುಂಬೈ ಮತ್ತು ಗೋವಾ ನಡುವೆ ಬಾಂಬೆ ಸ್ಟೀಮ್ ನ್ಯಾವಿಗೇಷನ್ ಕಂಪನಿಯ ಮೂಲಕ ಪ್ರಾರಂಭಿಸಲಾಗಿತ್ತು. ಮುಂಬೈನಿಂದ ಹೊರಡುವ ಹಡಗುಗಳು ರತ್ನಾಗಿರಿಯ ನಂತರ ಜೈತಾಪುರ, ಮಾಲ್ವಾನ್ ಮತ್ತು ವೆಂಗುರ್ಲಾ ಬಂದರುಗಳಲ್ಲಿ ನಿಲ್ಲುತ್ತವೆ, ನಂತರ ಗೋವಾಕ್ಕೆ ತೆರಳುತ್ತಿದ್ದವು. ಈ ಜಲ ಸಾರಿಗೆಯನ್ನು 1964 ರ ನಂತರ ಸ್ಥಗಿತಗೊಳಿಸಲಾಯಿತು. ಈಗ 180 ವರ್ಷಗಳಷ್ಟು ಹಳೆಯದಾದ ಈ ಜಲ ಸಾರಿಗೆ ವ್ಯವಸ್ಥೆಯನ್ನು ಪುನರಾರಂಭಿಸಲಾಗುತ್ತಿದೆ.
ಒಂದು ಮೂಲದ ಪ್ರಕಾರ, ಎಂ2ಎಂ ಫೆರೀಸ್ ಈ ಉದ್ದೇಶಕ್ಕಾಗಿ ಇಟಲಿಯಿಂದ 15 ವರ್ಷ ಹಳೆಯದಾದ ರೋಪ್ಯಾಕ್ಸ್ ಹಡಗನ್ನು ಖರೀದಿಸಿತ್ತು. ಈ ಹಡಗಿನ ದುರಸ್ತಿ ಕಾರ್ಯ ಮುಂಬೈನಲ್ಲಿ ನಡೆಯುತ್ತಿದೆ. ಹಡಗಿನ ಅಗತ್ಯ ಪರೀಕ್ಷೆಗಳನ್ನು ನಡೆಸಿದ ನಂತರ, ಕಂಪನಿಯು ಕಾರ್ಯಾಚರಣೆಯನ್ನು ಪ್ರಾರಂಭಿಸಲು ಡೈರೆಕ್ಟರ್ ಜನರಲ್ ಆಫ್ ಶಿಪ್ಪಿಂಗ್ ಮತ್ತು ಇತರ ಅಧಿಕಾರಿಗಳಿಂದ ಅಗತ್ಯ ಅನುಮೋದನೆಗಳಿಗಾಗಿ ಅರ್ಜಿ ಸಲ್ಲಿಸಿತು.
ಹಡಗು ಮಾರ್ಗ ಮತ್ತು ವಿಸ್ತರಣಾ ಯೋಜನೆ…
ಎಂ2ಎಂ ಫೆರ್ರಿಸ್ನ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ಮುಂಬೈನ ಮಜ್ಗಾಂವ್ನಲ್ಲಿರುವ ಹಡಗುÂ ವಾರ್ಫ್ನಿಂದ ಗೋವಾದ ಮುಗಾರ್ಂವ್ ಬಂದರು ಪ್ರಾಧಿಕಾರಕ್ಕೆ ರೋಪ್ಯಾಕ್ಸ್ ಸೇವೆಯನ್ನು ನಿರ್ವಹಿಸುವ ಯೋಜನೆಗಳಿವೆ. ಉತ್ತಮ ಸಂಪರ್ಕಕ್ಕಾಗಿ ಪಣಜಿಯಲ್ಲಿ ಡಾಕಿಂಗ್ಗೆ ಅನುಮತಿ ಪಡೆಯಲು ಗೋವಾ ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತಿರುವುದಾಗಿ ಅವರು ಹೇಳಿದರು. ಈ ಯೋಜನೆ ಪೂರ್ಣಗೊಂಡರೆ, ಎರಡೂ ರಾಜ್ಯಗಳ ಪ್ರವಾಸೋದ್ಯಮ ಕ್ಷೇತ್ರದಲ್ಲಿ ವಿವಿಧ ಅವಕಾಶಗಳು ಹೆಚ್ಚಾಗಲಿದೆ ಎಂದು ಅವರು ಹೇಳಿದರು.
ಮುಂಬೈ-ಗೋವಾ ರೋ-ರೋ ದೋಣಿಯ ಪ್ರಾಯೋಗಿಕ ಸಂಚಾರ ಪೂರ್ಣಗೊಂಡಿದ್ದು, ಆರಂಭಿಕ ಪರೀಕ್ಷೆಯಲ್ಲಿ ಮುಂಬೈನಿಂದ ಗೋವಾಕ್ಕೆ ಪ್ರಯಾಣ 6.5 ಗಂಟೆಗಳಲ್ಲಿ ಪೂರ್ಣಗೊಂಡಿದೆ ಎಂದು ಹೇಳಲಾಗುತ್ತಿದೆ. ಅಂತಿಮ ಅನುಮೋದನೆ ದೊರೆತ ನಂತರ, ಮಜ್ಗಾಂವ್ ಡಾಕ್ ನಿಂದ ಪಣಜಿ ಜೆಟ್ಟಿ ಡಾಕ್ ಗೆ ಹಡಗು ಸೇವೆ ಆರಂಭವಾಗಲಿದೆ. ಈ ಅನುಮತಿಗಾಗಿ ಗೋವಾ ಸರ್ಕಾರದೊಂದಿಗೆ ಚರ್ಚೆಗಳು ನಡೆಯುತ್ತಿವೆ ಎಂಬ ಮಾಹಿತಿ ಭ್ಯವಾಗಿದೆ.
ಹಡಗು ಸಾಮಥ್ರ್ಯ ಮತ್ತು ದರಗಳು
ಅಧಿಕಾರಿಯೊಬ್ಬರು ಹೇಳುವ ಪ್ರಕಾರ, ಹೊಸ ರೋಪಾಕ್ಸ್ ಹಡಗು 620 ಪ್ರಯಾಣಿಕರು ಮತ್ತು 60 ಕಾರುಗಳನ್ನು ಸಾಗಿಸಬಲ್ಲದು. ಪ್ರಯಾಣ ದರವನ್ನು ಇನ್ನೂ ನಿರ್ಧರಿಸಲಾಗಿಲ್ಲವಾದರೂ, ಕೇಂದ್ರ ಸರ್ಕಾರವು ಇಂಧನದ ಮೇಲೆ ಸಬ್ಸಿಡಿ ಮತ್ತು ತೆರಿಗೆ ರಿಯಾಯಿತಿಗಳನ್ನು ನೀಡುತ್ತದೆ, ಇದು ಸೇವೆಯನ್ನು ಹೆಚ್ಚು ಕೈಗೆಟುಕುವಂತೆ ಮಾಡುತ್ತದೆ ಎಂದು ಅವರು ಆಶಾವಾದ ವ್ಯಕ್ತಪಡಿಸಿದರು.
ಎಂ2 ಎಂ ಫೆರ್ರೀಗಳ ಅರ್ಜಿ ಪರಿಶೀಲನೆಯಲ್ಲಿದೆ ಎಂದು ಶಿಪ್ಪಿಂಗ್ ಮಹಾನಿರ್ದೇಶಕ ಶ್ಯಾಮ್ ಜಗನ್ನಾಥನ್ ಹೇಳಿದ್ದಾರೆ. ಹಾಗಾಗಿ, ದಾಖಲೆಗಳನ್ನು ಈಗ ಹೆಚ್ಚಿನ ಅನುಮೋದನೆಗಾಗಿ ಭಾರತೀಯ ಹಡಗು ನೋಂದಣಿ ಅಧಿಕಾರಿಗೆ ಕಳುಹಿಸಲಾಗಿದೆ ಎಂದು ಮುಖ್ಯ ಹಡಗು ಸರ್ವೇಯರ್ ಪ್ರದೀಪ್ ಸುಧಾಕರ್ ಮಾಹಿತಿ ನೀಡಿದರು. ಗೋವಾದ ವಿಷಯಕ್ಕೆ ಬಂದರೆ, ಇಲ್ಲಿನ ಜನರು ದಶಕಗಳಿಂದ ಹಡಗು ಸೇವೆಗಳ ಆಧಾರದ ಮೇಲೆ ಜೀವನ ಸಾಗಿಸುತ್ತಿದ್ದಾರೆ. ಈ ಎಲ್ಲಾ ಹಡಗುಗಳು ನದಿ ಸಾರಿಗೆ ಇಲಾಖೆಯ ಅಡಿಯಲ್ಲಿ ಬರುತ್ತವೆ.
ಮಾರ್ಚ್ 2025 ಅಂತ್ಯ ದೊಳಗೆ ರೋ-ರೋ ಸೇವೆಗಳನ್ನು ಪ್ರಾರಂಭಿಸುವುದು ಗುರಿಯಾಗಿತ್ತು. ಈ ಸಂಚಾರ ಈಗ ಏಪ್ರಿಲ್ ಅಂತ್ಯ ಅಥವಾ ಮೇ ಆರಂಭದ ವೇಳೆಗೆ ಪ್ರಾರಂಭವಾಗಬಹುದು. ಮಹಾರಾಷ್ಟ್ರ ಸಾರಿಗೆ ಸಚಿವ ಪ್ರತಾಪ್ ಸರ್ನಾಯಕ್ ಈ ರೋ-ರೋ ಸೇವೆಯನ್ನು ಪ್ರಾರಂಭಿಸಲು ಪ್ರಯತ್ನಿಸುತ್ತಿದ್ದಾರೆ. ಈ ರೋ-ರೋ ಸೇವೆಯು ಮಹಾರಾಷ್ಟ್ರ ಮತ್ತು ಗೋವಾ ಎರಡೂ ರಾಜ್ಯಗಳ ಪ್ರವಾಸೋದ್ಯಮಕ್ಕೆ ಹೆಚ್ಚಿನ ಅನುಕೂಲವಾಗಲಿದೆ.