ಸುದ್ದಿಕನ್ನಡ ವಾರ್ತೆ
Goa (Panaji): ಗೋವಾದ ಪಣಜಿ ಸಮೀಪದ ಚಿಂಬಲ್ ನಲ್ಲಿ ಶ್ರೀ ಸಾತೇರಿ ದೇವಸ್ಥಾನದ ಅರ್ಚಕರಾಗಿದ್ದ ಅಶೋಕ ಭಟ್ ರವರು ಮಂಗಳವಾರ ಬೆಳಗಿನ ಜಾವ ನಿಧನರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಅವರು ಅನಾರೋಗ್ಯದಲ್ಲಿದ್ದರು ಎನ್ನಲಾಗಿದೆ.

ಅಶೋಕ ಭಟ್ ರವರು ಮೂಲತಃ ಉತ್ತರಕನ್ನಡ ಜಿಲ್ಲೆಯವರಾಗಿದ್ದು, ಕಳೆದ ಹಲವು ವರ್ಷಗಳಿಂದ ಗೋವಾದ ವಿವಿಧ ದೇವಸ್ಥಾನಗಳ ಅರ್ಚಕರಾಗಿ ಸೇವೆ ಸಲ್ಲಿಸಿದ್ದಾರೆ. ಇವರ ನಿಧನಕ್ಕೆ ಗೋವಾದ ವೈದಿಕ ಸಂಘಟನೆ ಕಂಬನಿ ಮಿಡಿದಿದೆ.

ಅಶೋಕ ಭಟ್ ರವರ ನಿಧನಕ್ಕೆ ಸುದ್ದಿಕನ್ನಡ ವಾಹಿನಿ ಬಳಗ ಕಂಬನಿ ಮಿಡಿದಿದೆ.