ಸುದ್ದಿಕನ್ನಡ ವಾರ್ತೆ
Goa: ಡಿಸೆಂಬರ್ 2022 ರಂದು ಉಧ್ಘಾಟನೆ ಮಾಡಲಾಗಿದ್ದ ಗೋವಾದ ಜುವಾರಿ ಸೇತುವೆಯ ಕಾಂಕ್ರೀಟ್ ಭಾಗವೊಂದು ಕುಸಿದುಬಿದ್ದ ಘಟನೆ ನಡೆದಿದೆ. ಅದೃಷ್ಠ ವಷಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಈ ಘಟನೆ ಆಗಶಿ ಪೋಲಿಸ್ ಠಾಣೆಯ ಎದುರಿಗೆ ಈ ಘಟನೆ ನಡೆದಿದೆ. ಈ ಘಟನೆಯಿಂದಾಗಿ ಈ ಸೇತುವೆಯ ಗುಣಮಟ್ಟದ ಬಗ್ಗೆ ಚರ್ಚೆ ಆರಂಭಗೊಂಡಿದೆ.

ಜುವಾರಿ ಸೇತುವೆಯ ಎಕ್ಸಪಾಂಶನ್ ಜಾಯಿಂಟ್ ಭಾಗ ಕಯಸಿತಗೊಂಡಿರುದರಿಂದ ಆತಂಕದ ವಾತಾವರಣ ನಿರ್ಮಾಣವಾಗಿದೆ. ಪ್ರತಿದಿನ ಹಗಲಿರುಳೆನ್ನದೆಯೇ ಈ ಸೇತುವೆಯ ಮೇಲ್ಭಾಗದಲ್ಲಿ ಮತ್ತು ಸೇತುವೆಯ ಅಡಿ ಭಾಗದಲ್ಲಿ ಭಾರಿ ಪ್ರಮಾಣದಲ್ಲಿ ವಾಹನಗಳ ಓಡಾಟ ಇರುತ್ತದೆ. ಆದರೆ ಈ ಸೇತುವೆಯ ಕಾಂಕ್ರೀಟ್ ಭಾಗ ಕುಸಿಯುವ ಸಂದರ್ಭದಲ್ಲಿ ಅದೃಷ್ಠವಷಾತ್ ಯಾವುದೇ ವಾಹನ ಸಂಚಾರವಿರಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಈ ಕುರಿತಂತೆ ರಸ್ತೆ ತಜ್ಞ ಕರ್ನಲ್ ಮಿಲಿಂದ ಪ್ರಭು ರವರು ಸುದ್ಧಿಗಾರರೊಂದಿಗೆ ಮಾತನಾಡಿ- ಸೇತುವೆಯ ಜಾಯಿಂಟ್ ಗಳಲ್ಲಿ ಹವಾಮಾನ ಬದಲಾವಣೆಯನ್ನು ಸಹಿಸಿಕೊಳ್ಳಬೇಕಾಗುತ್ತದೆ. ಬೇಸಿಗೆಯಲ್ಲಿ ಉಷ್ಣತೆಯಿಂದಾಗಿ ಸೇತುವೆ ಹಿಗ್ಗುತ್ತದೆ, ಮಳೆಗಾಲದಲ್ಲಿ ಕುಗ್ಗುತ್ತದೆ. ಇದಕ್ಕಾಗಿಯೇ ಸೇತುಯಲ್ಲಿ ಎಕ್ಸಪಂಶನ್ ಜಾಯಿಂಟ್ ಇರುತ್ತದೆ. ಆದರೆ ಈ ಜಾಯಿಂಟ್ ಗಳಲ್ಲಿ ಕಾಂಕ್ರೀಟ್ ಹಾಕಿದಾಗ ಅದು ಸೇತುವೆಗೆ ಹಾಗೂ ವಾಹನಸವಾರರಿಗೂ ಕೂಡ ಆತಂಕದಾಯಕ ಸಂಗತಿಯಾಗಿರುತ್ತದೆ ಎಂದರು.

ರಾಜ್ಯ ಕಾಗ್ರೇಸ್ ನಾಯಕ ಎಲ್ವೀಸ್ ಗೋಮ್ಸ ಪ್ರತಿಕ್ರಿಯೆ ನೀಡಿ- ಹೊಸ ಜುವಾರಿ ಸೇತುವೆ ವಿಸ್ತರಿತ ಜಾಯಿಂಟ್ ಕುಸಿದು ಬಿದ್ದಿರುವುದು ವಾಹನ ಸವಾರರಿಗೆ ಸುರಕ್ಷತೆಯ ಪ್ರಶ್ನೆಯಾಗಿದೆ. ಇಷ್ಟೇ ಅಲ್ಲದೆಯೇ ಈ ಸೇತುವೆಯ ಗುಣಮಟ್ಟದ ಬಗ್ಗೂ ಪ್ರಶ್ನೆ ಎದುರಾಗುತ್ತದೆ. ಲೋಕೊಪಯೋಗಿ ಇಲಾಖೆ ಹಾಗೂ ಎಂ.ಒ.ಆರ್.ಟಿ.ಎಚ್ ಕೂಡಲೇ ಗಮನ ಹರಿಸಬೇಕಿದೆ ಎಂದರು.