ಸುದ್ದಿ ಕನ್ನಡ ವಾರ್ತೆ
ಶಿರಸಿ: ಸಾಗರ ಮಾಲಾ ಯೋಜನೆ ಅಡಿ ನಿರ್ಮಾಣವಾಗುತ್ತಿರಿವ ಶಿರಸಿ ಕುಮಟಾ ಹೆದ್ದಾರಿ ಕಾಮಗಾರಿ ವಿಳಂಬದ ಬಗ್ಗೆ ಅಧಿಕಾರಿಗಳ ಸಭೆ ನಡೆಸಿ ಕಾಮಗಾರಿಗೆ ವೇಗ ನೀಡಲು ಕ್ರಮಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಹೇಳಿದರು.
ಅವರು ನಗರದಲ್ಲಿ ಸುದ್ದಿಗಾರರ ಜೊತೆ ಶುಕ್ರವಾರ ಮಾತನಾಡಿ, ಶೀಘ್ರವಾಗಿ ಕಾಮಗಾರಿ ಪೂರ್ಣ ಆಗುವದಾಗಿ ಫೆ.೨೫ರ ತನಕ ಸಂಚಾರ ನಿರ್ಬಂಧ ಹೇರಲಾಗಿತ್ತು. ಇನ್ನೂ ಒಂದು ತಿಂಗಳು ಸಂಚಾರ ನಿರ್ಬಂಧ ಕೊಟ್ಟರೂ ವೇಗವಿಲ್ಲ ಎಂದು ಅಸಮಧಾನಿಸಿದರು.
ಶಿರಸಿ ಹಾವೇರಿ ಮಾರ್ಗದ ಅರಣ್ಯ ಅನುಮತಿ ಸಿಕ್ಕಿದೆ. ಕಾಮಗಾರಿ ವೇಗ ಆಗುವ ಸಾಧ್ಯತೆ ಇದೆ ಎಂದರು.
ಬನವಾಸಿಯ ಕದಂಬೋತ್ಸವ ಮಾ.೧೨, ೧೩ರಂದು ನಡೆಸಲು ತೀರ್ಮಾನಿಸಲಾಗಿದೆ. ಅದೇ ದಿನಾಂಕದಂದು ನಡೆಸಲಾಗುತ್ತದೆ. ಕಳೆದ ಕದಂಬೋತ್ಸವದ ಬಾಕಿ ಹಣ ಪಾವತಿಗೂ ಕ್ರಮ ಕೈಗೊಳ್ಳಲಾಗುತ್ತದೆ. ಆಶ್ರಯ ಮನೆಗೆ ಹಣ ಮೂರು ವರ್ಷದಿಂದ ಬಾಕಿ ಇರುವದು ಗಮನಕ್ಕಿದೆ ಎಂದರು.
ಈ ವೇಳೆ ಶಾಸಕ ಭೀಮಣ್ಣ ನಾಯ್ಕ, ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ, ಅರಣ್ಯಾಧಿಕಾರಿ ವಸಂತರೆಡ್ಡಿ, ಅಜ್ಜಯ್ಯ, ಎಸಿ ಕಾವ್ಯಾರಾಣಿ ಇತರರು ಇದ್ದರು.