ಸುದ್ದಿಕನ್ನಡ ವಾರ್ತೆ
Goa : ಗೋವಾ ರಾಜಧಾನಿ ಮಹಾನಗರ ಪಾಲಿಕೆಯ ಮೇಯರ್ ಆಗಿ ರೋಹಿತ್ ಮಾನ್ಸೆರಾತ್ ಮತ್ತು ಉಪ ಮೇಯರ್ ಆಗಿ ಸಂಜೀವ್ ನಾಯಕ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬುಧವಾರ ನಗರಸಭೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಆಯುಕ್ತ ಕ್ಲೈನ್ ಮಡೇರಾ ಈ ಘೋಷಣೆ ಮಾಡಿದರು. ಈ ಸ್ಥಾನಕ್ಕೆ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಇಬ್ಬರೂ ಅವಿರೋಧವಾಗಿ ಆಯ್ಕೆಯಾದರು ಎಂದು ಮಡೇರಾ ಹೇಳಿದರು. ರೋಹಿತ್ ಮೊನ್ಸೆರಾತ್ ಐದನೇ ಬಾರಿಗೆ ಮೇಯರ್ ಆಗಿದ್ದಾರೆ ಮತ್ತು ಸಂಜೀವ್ ನಾಯಕ್ ನಾಲ್ಕನೇ ಬಾರಿಗೆ ಉಪ ಮೇಯರ್ ಆಗಿದ್ದಾರೆ.
ಈ ಸಂದರ್ಭದಲ್ಲಿ ಮೇಯರ್ ರೋಹಿತ್ ಮೊನ್ಸೆರಾತ್ ಸುದ್ಧಿಗಾರರೊಂದಿಗೆ ಮಾತನಾಡಿ- “ನನ್ನನ್ನು ಬೆಂಬಲಿಸಿದ್ದಕ್ಕಾಗಿ ಪಣಜಿಯ ಜನರಿಗೆ ಮತ್ತು ಕಾಪೆರ್Çರೇಟರ್ಗಳಿಗೆ ನಾನು ಧನ್ಯವಾದ ಹೇಳುತ್ತೇನೆ”. ನಮ್ಮ ಅಧಿಕಾರಾವಧಿಯಲ್ಲಿ, ಪಣಜಿಯಲ್ಲಿನ ವಿವಿಧ ಸಮಸ್ಯೆಗಳನ್ನು ಪರಿಹರಿಸಲು ನಾವು ಪ್ರಯತ್ನಿಸಿದ್ದೇವೆ. ಪಣಜಿ ನಿವಾಸಿಗಳ ಸಮಸ್ಯೆಗಳನ್ನು ಸಹ ನಾವು ಪರಿಹರಿಸುತ್ತೇವೆ ಎಂದರು.
ನಗರದಲ್ಲಿ ಭಿಕ್ಷುಕರ ಸಂಖ್ಯೆ ಹೆಚ್ಚುತ್ತಿದೆ ಎಂದು ಅವರು ಹೇಳಿದರು. ನಾವು ಇದರ ಬಗ್ಗೆ ಗಮನ ಹರಿಸಬೇಕಾಗಿದೆ. ಪುರಸಭೆ ಕಚೇರಿಯನ್ನು ಬೇರೆಡೆಗೆ ಸ್ಥಳಾಂತರಿಸಲು ಸ್ಥಳಾವಕಾಶವಿಲ್ಲದ ಕಾರಣ ಹೊಸ ಕಟ್ಟಡದ ವಿಷಯವೂ ಬಾಕಿ ಇದೆ. ಪಣಜಿ ಮಾರುಕಟ್ಟೆ ಸಮಸ್ಯೆಯೂ ಶೀಘ್ರದಲ್ಲೇ ಬಗೆಹರಿಯಲಿದೆ. ಮುನ್ಸಿಪಲ್ ಕಾಪೆರ್Çರೇಷನ್ ನಿಂದ ಮಳೆಗಾಲ ಪೂರ್ವ ಕಾಮಗಾರಿಗಳು ನಡೆಯುತ್ತಿವೆ. ಇಂದು ಸ್ಮಾರ್ಟ್ ಸಿಟಿ ಮತ್ತು ಲೋಕೋಪಯೋಗಿ ಇಲಾಖೆಗಳೊಂದಿಗೆ ಸಭೆ ನಡೆಯಲಿದೆ. ಕೆಲವು ಸ್ಥಳಗಳಲ್ಲಿ ಒಳಚರಂಡಿ ಕೊಳವೆಗಳ ಸಂಪರ್ಕವನ್ನು ಹೊಂದಿಲ್ಲ ಎಂಬ ದೂರುಗಳಿವೆ. ಈ ಮತ್ತು ಇತರ ವಿಷಯಗಳನ್ನು ಸಭೆಯಲ್ಲಿ ಪ್ರಸ್ತಾಪಿಸಲಾಗುವುದು ಎಂದು ರೋಹಿತ್ ಮೊನ್ಸೆರಾತ್ ಜೇಳಿದರು.
ಇದಕ್ಕೂ ಮೊದಲು ನಗರಸಭೆಯ ವಿವಿಧ ಸಮಿತಿಗಳನ್ನು ಆಯ್ಕೆ ಮಾಡಲಾಯಿತು. ಸ್ಥಾಯಿ ಸಮಿತಿಯಲ್ಲಿ ರೋಹಿತ್ ಮಾನ್ಸೆರಾತ್, ಅಸ್ಮಿತಾ ಕೆರ್ಕರ್, ಕರಣ್ ಪರೇಖ್, ವಿಠ್ಠಲ್ ಚೋಪ್ಡೇಕರ್, ಕೆರೊಲಿನಾ ಪೆÇೀ ಮತ್ತು ನರಸಿಂಗ್ ಮೊರಾಜ್ಕರ್ ಇದ್ದಾರೆ. ಆರೋಗ್ಯ ಮತ್ತು ಮಾರುಕಟ್ಟೆ ಸಮಿತಿಯಲ್ಲಿ ಬೆಂಟೊ ಲೊರೆನಾ, ಲೋರಿಯನ್ ಡಯಾಸ್, ಸಂತೋಷ್ ಸುರ್ಲಿಕರ್, ಅದಿತಿ ಚೋಪ್ಡೇಕರ್, ಶುಭದಾ ಶಿಗಾರ್ಂವ್ಕರ್ ಮತ್ತು ಪ್ರಸಾದ್ ಅಮೋನ್ಕರ್ ಇದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿಯಲ್ಲಿ ಸಾಂಡ್ರಾ ಕುನ್ಹಾ ಮತ್ತು ದೀಕ್ಷಾ ಮೈಂಕರ್ ಇರುತ್ತಾರೆ.
ಸ್ಮಾರ್ಟ್ ಸಿಟಿ ಕಾಮಗಾರಿಯಿಂದಾಗಿ ನಗರದಲ್ಲಿ ಪ್ರಸ್ತುತ ಪಾಕಿರ್ಂಗ್ ಸ್ಥಳಾವಕಾಶವಿಲ್ಲ ಎಂದು ರೋಹಿತ್ ಮಾನ್ಸೆರಾತ್ ಹೇಳಿದರು. ನಗರದಲ್ಲಿ ಟ್ಯಾಕ್ಸಿ ಪಾಕಿರ್ಂಗ್ ಅನ್ನು ಜಿಲ್ಲಾಧಿಕಾರಿ ನಿಷೇಧಿಸಿದ್ದಾರೆ. ಇದು ಸ್ಥಳೀಯರಿಗೆ ತಮ್ಮ ವಾಹನಗಳನ್ನು ನಿಲ್ಲಿಸಲು ಸ್ಥಳಾವಕಾಶವನ್ನು ಒದಗಿಸುತ್ತದೆ. ನಗರದಲ್ಲಿ ಪಾಕಿರ್ಂಗ್ ಮತ್ತು ಇತರ ಸಂಚಾರ ಸಮಸ್ಯೆಗಳ ಕುರಿತು ಸಂಚಾರ ಇಲಾಖೆ ಮತ್ತು ಸಂಚಾರ ಪೆÇಲೀಸರು ಇಂದು ಪರಿಶೀಲನೆ ನಡೆಸಲಿದ್ದಾರೆ ಎಂಬ ಮಾಹಿತಿ ನೀಡಿದರು.